ಹುಣಸೋಡು ಮಹಾಸ್ಫೋಟಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೂರ್ವವಲಯ ಐಜಿಪಿ ಎಸ್.ರವಿ ಹೇಳಿದ್ದಾರೆ.
ಕ್ರಷರ್ ಮಾಲೀಕ ಸುಧಾಕರ್, ಸೂಪ್ರವೈಜರ್ ನರಸಿಂಹ, ಮುಮ್ತಾಜ್ ಅಹಮದ್ ಖಾನ್ ಹಾಗೂ ರಶೀದ್ ಬಂಧಿತರು ಎಂದು ಅವರು ಸೋಮವಾರ ಮಾಹಿತಿ ನೀಡಿದ್ದಾರೆ.
ಲೀಜ್‌ಗೆ ಪಡದಿದ್ದ ಜಾಗದಲ್ಲಿ ಸುಧಾಕರ್ ಕ್ರಷರ್ ನಡೆಸಿದುತಿದ್ದ. ಇಲ್ಲಿನ ಕ್ವಾರಿಗಳಿಗೆ ತೆಲಂಗಾಣದ ಅನಂತಪುರದಿಂದ ಸ್ಫೋಟಕ ಸಾಮಗ್ರಿ ಬರುತಿತ್ತು. ಮೃತರಲ್ಲಿ ಒಬ್ಬನಾದ ಪ್ರವೀಣ ಮಧ್ಯಸ್ಥಿಕೆಯಲ್ಲಿ ಇಲ್ಲಿಗೆ ಸ್ಫೋಟಕ ಬಂದಿದೆ. ಆತನೊಂದಿಗೆ ಮಂಜುನಾಥ್ ಹಾಗೂ ಪುನೀತ್ ಎಂಬಾತನು ಸ್ಫೋಟದಲ್ಲಿ ಸತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ನಿಖರವಾಗಿ ಆರು ಮಂದಿ ಸತ್ತಿದ್ದಾರೆ. ಇನ್ನೊಂದು ಗುರುತು ಸಿಗದ ದೇಹ ಪುನೀತ್‌ನದೆಂದು ಶಂಕಿಸಲಾಗಿದೆ ಎಂದು ಅವರು ಹೇಳಿದರು.
ಉಳಿದ ಮೂವರು ಅನಂತಪುರದವರು ಸತ್ತಿದ್ದಾರೆ. ಅವರು ಸ್ಫೋಟಕ ತಂದಿದ್ದ ವಾಹನದೊಂದಿಗೆ ಬಂದಿರುವ ಶಂಕೆ ಇದೆ. ಅಷ್ಟು ಪ್ರಮಾಣದ ಸ್ಫೋಟ ಎಲ್ಲಿಂದ ಬಂತು, ಯಾರು ಕಳಿಸುತ್ತಿದ್ದರು ಈ ಎಲ್ಲ ಮಾಹಿತಿಗಳು ತನಿಖೆಯಿಂದ ತಿಳಿಯಲಿವೆ. ಖಾಸಗಿ ತಂತ್ರಜ್ಞರ ನೆರವನ್ನೂ ಬಳಸಿಕೊಳ್ಳಲಾಗಿದೆ. ಪ್ರಕರಣವನ್ನು ಎಲ್ಲಾ ಆಯಾಮಗಳಲ್ಲಿಯೂ ತನಿಖೆ ಮಾಢಲಾಗುತ್ತಿದೆ. ಘಟನಾ ಸ್ಥಳದಲ್ಲಿ ಜಿಲೆಟಿನ್ ಮತ್ತು ಡಿಟೋನೇಟರ್ ಸ್ಫೋಟವಾಗಿರುವ ಬಗ್ಗೆ ಸುಳಿವು ಸಿಕ್ಕಿದೆ ಎಂದು ರವಿ ಅವರು ಹೇಳಿದರು.
ತಪ್ಪಿತಸ್ಥರಿಗೆ ಶಿಕ್ಷೆ :
ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೃಹತ್ ಪ್ರಮಾಣದ ಸ್ಫೋಟಕ ಬಂದಿದ್ದು, ಇದನ್ನು ಕಂಡು ಹಿಡಿಯುವಲ್ಲಿ ಪೊಲೀಸರ ವಿಫಲತೆ ಕಂಡು ಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ರವಿ ಅವರು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
previous post
next post