ಮೈಸೂರು ಕಾಗದ ಕಾರ್ಖಾನೆಯ ಗುತ್ತಿಗೆ ನವೀಕರಣದ ವಿರುದ್ಧ ಮುಂದಿನ ಹೋರಾಟದ ರೂಪುರೇಷೆಗಳನ್ನು ತೀರ್ಮಾನಿಸುವ ಕುರಿತು ನಮ್ಮೂರಿಗೆ ಅಕೇಶಿಯಾ ಬೇಡ ಆಂದೋಲನದ ಸಭೆ ಗುರುವಾರ ಶಿವಮೊಗ್ಗ ಪ್ರೆಸ್ಟ್ ಟ್ರಸ್ಟ್‌ನಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಕೆ.ಪಿ.ಶ್ರೀಪಾಲ್, ಕಾನೂನಿನ ಮೂಲಕ ಹೋರಾಟ , ಕಾರ್ಖಾನೆಯ ಸಾಮರ್ಥ್ಯ ಮತ್ತು ಅದಕ್ಕೆ ಬೇಕಾದ ಕಚ್ಚಾ ವಸ್ತು ಬೆಳೆಯಲು ಅಗತ್ಯವಿರುವ ಭೂಮಿಯ ಬಗ್ಗೆ ತಿಳಿಸಿದರು.
ರಾಜ್ಯದ ವಿವಿಧ ಪರಿಸರ ಸಂಘಟನೆಗಳನ್ನು ಹೋರಾಟದಲ್ಲಿ ಭಾಗಿಯಾಗಿಸಿಕೊಳ್ಳುವ ಮತ್ತು ಅಹೋರಾತ್ರಿ ಧರಣಿ ಮತ್ತು ಸಮುದಾಯದ ನಡುವೆ ಹೋರಾಟ ಕೊಂಡೊಯ್ಯುವ ಬಗ್ಗೆಯೂ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಪ್ರೊ.ರಾಜೇಂದ್ರ ಚೆನ್ನಿ, ಶೇಖರ್ ಗೌಳೇರ್, ಎಂ.ಗುರುಮೂರ್ತಿ, ಕುಮಾರಸ್ವಾಮಿ, ಕೃಷ್ಣಮೂರ್ತಿ ಹಿಳ್ಳೋಡಿ, ಸುರೇಶ್ ಅರಸಾಳು,ಚಂದ್ರಪ್ಪ, ಅಕ್ಷತಾ ಮತ್ತಿತರರು ಭಾಗವಹಿಸಿದ್ದರು.
previous post
next post