Malenadu Mitra
ರಾಜ್ಯಶಿವಮೊಗ್ಗ

ಅಕೇಶಿಯಾ ಹೋರಾಟ ರೂಪುರೇಷೆ ಚರ್ಚೆ

ಮೈಸೂರು ಕಾಗದ ಕಾರ್ಖಾನೆಯ ಗುತ್ತಿಗೆ ನವೀಕರಣದ ವಿರುದ್ಧ ಮುಂದಿನ ಹೋರಾಟದ ರೂಪುರೇಷೆಗಳನ್ನು ತೀರ್ಮಾನಿಸುವ ಕುರಿತು ನಮ್ಮೂರಿಗೆ ಅಕೇಶಿಯಾ ಬೇಡ ಆಂದೋಲನದ ಸಭೆ ಗುರುವಾರ ಶಿವಮೊಗ್ಗ ಪ್ರೆಸ್ಟ್ ಟ್ರಸ್ಟ್‌ನಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಕೆ.ಪಿ.ಶ್ರೀಪಾಲ್, ಕಾನೂನಿನ ಮೂಲಕ ಹೋರಾಟ , ಕಾರ್ಖಾನೆಯ ಸಾಮರ್ಥ್ಯ ಮತ್ತು ಅದಕ್ಕೆ ಬೇಕಾದ ಕಚ್ಚಾ ವಸ್ತು ಬೆಳೆಯಲು ಅಗತ್ಯವಿರುವ ಭೂಮಿಯ ಬಗ್ಗೆ ತಿಳಿಸಿದರು.
ರಾಜ್ಯದ ವಿವಿಧ ಪರಿಸರ ಸಂಘಟನೆಗಳನ್ನು ಹೋರಾಟದಲ್ಲಿ ಭಾಗಿಯಾಗಿಸಿಕೊಳ್ಳುವ ಮತ್ತು ಅಹೋರಾತ್ರಿ ಧರಣಿ ಮತ್ತು ಸಮುದಾಯದ ನಡುವೆ ಹೋರಾಟ ಕೊಂಡೊಯ್ಯುವ ಬಗ್ಗೆಯೂ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಪ್ರೊ.ರಾಜೇಂದ್ರ ಚೆನ್ನಿ, ಶೇಖರ್ ಗೌಳೇರ್, ಎಂ.ಗುರುಮೂರ್ತಿ, ಕುಮಾರಸ್ವಾಮಿ, ಕೃಷ್ಣಮೂರ್ತಿ ಹಿಳ್ಳೋಡಿ, ಸುರೇಶ್ ಅರಸಾಳು,ಚಂದ್ರಪ್ಪ, ಅಕ್ಷತಾ ಮತ್ತಿತರರು ಭಾಗವಹಿಸಿದ್ದರು.

Ad Widget

Related posts

ಷಡಾಕ್ಷರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ

Malenadu Mirror Desk

ಯುವರಾಜ್ ಸೇವಲಾಲ್ ಸ್ವಾಮಿ ಅಲ್ಲ

Malenadu Mirror Desk

ಶರಾವತಿ ಹಿನ್ನೀರಿಗೆ ಜಾರಿದ ಬಸ್ಸು,ತಪ್ಪಿದ ಅನಾಹುತ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.