ಶಿವಮೊಗ್ಗದಲ್ಲಿ ವಿಪ್ರ ಯುವ ಪರಿಷತ್ ವತಿಯಿಂದ ಆಯೋಜಿಸಿರುವ ರಾಜ್ಯ ಮಟ್ಟದ ಚಾಣಕ್ಯ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಕ್ರೀಡೆ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯ ವೃದ್ಧಿಗೆ ಸಹಕಾರಿ. ವಿಭಿನ್ನ ಉದ್ಯೋಗದಲ್ಲಿರುವ ಸಮಾಜಬಾಂದವರು ಒಂದೆಡೆ ಸೇರಿ ಇಂತಹ ಪಂದ್ಯವಾಳಿ ನಡೆಸುತ್ತಿರುವುದು ಹೆಮ್ಮೆಯ ಸಂಗತಿ. ಕ್ರೀಡೆ ನೆಪವಾದರೂ ಪರಸ್ಪರರು ಕೂಡಿ ಸಂಪರ್ಕ ಸಾಧಿಸುವುದು ಪ್ರಮುಖ ಎಂದರು. ಉದ್ಯಮಿ ಸುರೇಶ್ ಕೆ. ಬಾಳೆಗುಂಡಿ, ರಾಘವೇಂದ್ರ ಉಡುಪು, ಮ.ಸ.ನಂಜುಂಡಸ್ವಾಮಿ, ದಿನೇಶ್ ಜೋಷಿ ,ಮೈಲಾರಿ ರಾವ್ ಮತ್ತಿತರರಿದ್ದರು. ಕ್ರೀಡಾಕೂಟ ಎನ್.ಇ.ಎಸ್. ಮೈದಾನದಲ್ಲಿ ನಡೆಯುತ್ತಿದ್ದು, ರಾಜ್ಯದ ವಿವಿಧ ವಿಪ್ರ ಸಂಘಟನೆ ಪ್ರತಿನಿಧಿಸುವ ತಂಡಗಳು ಭಾಗವಹಿಸಿವೆ