ನಟ ಹಾಗೂ ಸೊರಬ ಶಾಸಕ ಕುಮಾರ ಬಂಗಾರಪ್ಪ ಅವರ ಪುತ್ರಿ ಲಾವಣ್ಯ ಅವರ ಮದುವೆ ನಿಶ್ಚಿತಾರ್ಥ ಬೆಂಗಳೂರಿನಲ್ಲಿ ಬುಧವಾರ ಅದ್ದೂರಿಯಾಗಿ ನೆರವೇರಿತು.
ಖಾಸಗಿ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಹೈದರಾಬಾದ್‌ನ ಮಕ್ಕಳ ವೈದ್ಯ ವಿಕ್ರಮಾದಿತ್ಯ ಅವರು ಲಾವಣ್ಯ ಅವರಿಗೆ ಉಂಗುರ ತೊಡಿಸಿದರು. ಈ ಸಂದರ್ಭದಲ್ಲಿ ಎರಡೂ ಕುಟುಂಬಗಳ ಹತ್ತಿರದ ಬಂಧುಗಳು ಹಾಗೂ ಆಪ್ತರು ಪಾಲ್ಗೊಂಡಿದ್ದರು.
ನಿಶ್ಚಿತಾರ್ಥ ಕಾರ್ಯಕ್ರಮದ ಸಂಭ್ರಮದ ಫೋಟೊಗಳನ್ನು ಕುಮಾರ್ ಬಂಗಾರಪ್ಪ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮಗಳು ಹಾಗೂ ಅಳಿಯನಿಗೆ ಶುಭ ಹಾರೈಸಿ ಎಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಪಾರ ಬೆಂಬಲಿಗರನ್ನು ಹೊಂದಿರುವ ಕುಮಾರ್ ಬಂಗಾರಪ್ಪ ಅವರ ಪೋಸ್ಟ್‌ಗೆ ಅವರ ಅಭಿಮಾನಿಗಳು ಹಾಗೂ ಹಿತೈಷಿಗಳು ಶುಭಕೋರಿದ್ದಾರೆ.
previous post
next post