Malenadu Mitra
ರಾಜ್ಯಲೈಫ್ ಸ್ಟೈಲ್ಶಿವಮೊಗ್ಗ

ಕುಮಾರ್ ಬಂಗಾರಪ್ಪ ಮಗಳ ನಿಶ್ಚಿತಾರ್ಥ, ವರ ಯಾರು ಗೊತ್ತಾ ?

ನಟ ಹಾಗೂ ಸೊರಬ ಶಾಸಕ ಕುಮಾರ ಬಂಗಾರಪ್ಪ ಅವರ ಪುತ್ರಿ ಲಾವಣ್ಯ ಅವರ ಮದುವೆ ನಿಶ್ಚಿತಾರ್ಥ ಬೆಂಗಳೂರಿನಲ್ಲಿ ಬುಧವಾರ ಅದ್ದೂರಿಯಾಗಿ ನೆರವೇರಿತು.
ಖಾಸಗಿ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಹೈದರಾಬಾದ್‌ನ ಮಕ್ಕಳ ವೈದ್ಯ ವಿಕ್ರಮಾದಿತ್ಯ ಅವರು ಲಾವಣ್ಯ ಅವರಿಗೆ ಉಂಗುರ ತೊಡಿಸಿದರು. ಈ ಸಂದರ್ಭದಲ್ಲಿ ಎರಡೂ ಕುಟುಂಬಗಳ ಹತ್ತಿರದ ಬಂಧುಗಳು ಹಾಗೂ ಆಪ್ತರು ಪಾಲ್ಗೊಂಡಿದ್ದರು.
ನಿಶ್ಚಿತಾರ್ಥ ಕಾರ್ಯಕ್ರಮದ ಸಂಭ್ರಮದ ಫೋಟೊಗಳನ್ನು ಕುಮಾರ್ ಬಂಗಾರಪ್ಪ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮಗಳು ಹಾಗೂ ಅಳಿಯನಿಗೆ ಶುಭ ಹಾರೈಸಿ ಎಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಪಾರ ಬೆಂಬಲಿಗರನ್ನು ಹೊಂದಿರುವ ಕುಮಾರ್ ಬಂಗಾರಪ್ಪ ಅವರ ಪೋಸ್ಟ್‌ಗೆ ಅವರ ಅಭಿಮಾನಿಗಳು ಹಾಗೂ ಹಿತೈಷಿಗಳು ಶುಭಕೋರಿದ್ದಾರೆ.

Ad Widget

Related posts

ಕುವೆಂಪು ವಿವಿ ಆಡಳಿತ ಅಧ್ಯಾಪಕರ ಹಿತಾಸಕ್ತಿ ಕಾಯಲಿ

Malenadu Mirror Desk

ಡೆಲ್ಲಿ ಇಂಟರ್‌ನ್ಯಾಷನಲ್ ಶಾಲೆಯಲ್ಲಿ 1 ರೂಪಾಯಿಗೆ ಪ್ರವೇಶ, ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಮಕ್ಕಳಿಗಾಗಿ ವಿನೂತನ ಯೋಜನೆ

Malenadu Mirror Desk

ಸನಾತನ ಧರ್ಮದಲ್ಲಿನ ಮನುಷ್ಯ ವಿರೋಧಿ ವಿಚಾರ: ಕಿಮ್ಮನೆ ರತ್ನಾಕರ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.