ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಕೀಯ ಜರ್ನಿ ಹಾಡಾಗಿದೆ ಗೊತ್ತಾ? ಹೌದು. ಭಾನುವಾರ ಶಿವಮೊಗ್ಗ ಫ್ರೀಡಂ ಪಾಕ್ ಆವರಣದಲ್ಲಿ ನಡೆಯುವ ಭಾವಾಭಿನಂದನೆ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಾದ ವಿಜಯ ಪ್ರಕಾಶ್ ಹಾಗೂ ರಾಜೇಶ್ ಕೃಷ್ಣನ್ ಅವರು ಈ ಹಾಡನ್ನು ಪ್ರಸ್ತುತಪಡಿಸಲಿದ್ದಾರೆ. ಪ್ರೇಮಕವಿ ಕೆ.ಕಲ್ಯಾಣ್ ಅವರು ರಚಿಸಿರುವ ಸಾಹಿತ್ಯಕ್ಕೆ ವಿಜಯ ಪ್ರಕಾಶ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಶನಿವಾರ ಶಿವಮೊಗ್ಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ವಿಜಯ ಪ್ರಕಾಶ್ ಮತ್ತು ರಾಜೇಶ್ ಕೃಷ್ಣನ್ ಅವರು, ಯಡಿಯೂರಪ್ಪ ಹುಟ್ಟುಹಬ್ಬದ ನಿಮಿತ್ತ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದು ಸಂತಸದ ಕ್ಷಣ. ಮುಖ್ಯಮಂತ್ರಿ ಅವರಿಗೆ ಸಂಗೀತದ ಮೂಲಕವೇ ಬರ್ತ್‌ಡೇ ಗಿಫ್ಟ್ ಕೊಡ್ತೇವೆ. ಇಡೀ ಅವರ ರಾಜಕೀಯ ಹೋರಾಟ ಮತ್ತು ಜೀವನವನ್ನು ಹಾಡಿನ ಮೂಲಕ ಕಟ್ಟಿಕೊಡುವ ಪ್ರಯತ್ನ ಮಾಡ್ತೇವೆ ಎಂದರು.
೭೫ ಮಂದಿ ಕಲಾವಿದರು ಭಾವಾಭಿನಂದನೆ ಯಲ್ಲಿ ಬಾಗವಹಿಸುವರು. ಎಲ್ಲರೂ ಈಗಾಗಲೇ ಶಿವಮೊಗ್ಗಕ್ಕೆ ಬಂದಿದ್ದು, ರಿಯರ್ಸಸಲ್ ನಡೀತಿದೆ ಎಂದು ಹೇಳಿದರು. ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಮಾತನಾಡಿ, ಯಡಿಯೂರಪ್ಪ ಹುಟ್ಟುಹಬ್ಬದ ನಿಮಿತ್ತ ೪೦ ಸಾವಿರ ಲಾಡು ವಿತರಣೆ ಮಾಡಲಾಗುವುದು. ಕಾರ್ಯಕ್ರಮಕ್ಕೆ ಅಂದಾಜು ೪೦ ಸಾವಿರ ಜನರು ಭಾಗವಹಿಸುವ ಸಾಧ್ಯತೆ ಇದೆ. ಅರ್ಥಪೂರ್ಣ ಜನ್ಮದಿನಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ರುದ್ರೇಗೌಡ, ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್, ಕೆಎಸ್‌ಎಸ್‌ಐಡಿಸಿ ಉಪಾಧ್ಯಕ್ಷ ಎಸ್.ದತ್ತಾತ್ರಿ ಮತ್ತಿತರರು ಹಾಜರಿದ್ದರು.
previous post
next post