Malenadu Mitra
ರಾಜ್ಯಶಿವಮೊಗ್ಗ

ಕದ್ದ ಚಿನ್ನವನ್ನ ತೀರ್ಥಹಳ್ಳಿಯಲ್ಲಿ ಹೂತಿಟ್ಟವ ಈಗ ಪೊಲೀಸರ ಅತಿಥಿ

ಶಿವಮೊಗ್ಗ : ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಕಳ್ಳತನ ಮಾಡಿ, ಶಿವಮೊಗ್ಗದ ತೀರ್ಥಹಳ್ಳಿಗೆ ತಂದು ಕೆಜಿಗಟ್ಟಲೇ ಚಿನ್ನ ಹೂತಿಟ್ಟಿದ್ದ ಆರೋಪಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಮಾಗಡಿ ಠಾಣೆ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಹಲವು ಅಪರಾಧಗಳಲ್ಲಿ ಭಾಗಿಯಾಗಿ ಚಿನ್ನವನ್ನು ಕದ್ದು, ಮನೆಯಲ್ಲಿ ಹೂತಿಟ್ಟಿದ್ದ ಅರೋಪಿಯನ್ನು ಶಿವಮೊಗ್ಗಕ್ಕೆ ಕರೆತಂದು ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.
ಹಂಜ ಎಂಬ ಆರೋಪಿ ಮಾಗಡಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ತೀರ್ಥಹಳ್ಳಿಯ ಬೆಟ್ಟಮಕ್ಕಿಯಲ್ಲಿರುವ ತನ್ನ ಮನೆಗೆ ತಂದು ಚಿನ್ನವನ್ನ ಹೂತಿಟ್ಟಿದ್ದ. ಆರೋಪಿಯನ್ನು ಕರೆ ತಂದಿದ್ದ ಮಾಗಡಿ ಪೊಲೀಸರು ಸುಮಾರು 1ಕೆಜಿಯಷ್ಟು ಚಿನ್ನವನ್ನು ವಶ ಪಡಿಸಿಕೊಂಡಿದ್ದಾರೆ.
ಮೂಲತಃ ಶಿವಮೊಗ್ಗದ ಆಗುಂಬೆ ಸಮೀಪದ ಗುಡ್ಡೇಕೇರಿಯವನಾದ ಹಂಜನ ಮೇಲೆ 20 ಕ್ಕೂ ಹೆಚ್ಚು ಕೇಸ್ ಗಳಿವೆ. ಆಗುಂಬೆ ಸಮೀಪದಲ್ಲಿ ನಡೆದಿದ್ದ ಹೊಸಳ್ಳಿ ವೆಂಕಟೇಶ್ ಕೊಲೆ ಪ್ರಕರಣದಲ್ಲೂ ಹಂಜ ಭಾಗಿಯಾಗಿದ್ದ ಎನ್ನಲಾಗಿದೆ.
ಹಲವು ಕೇಸ್ ನಲ್ಲಿ ಭಾಗಿಯಾಗಿದ್ದ ಹಂಜ ಈಗ ಮಾಗಡಿ ಪೊಲೀಸರ ಅತಿಥಿಯಾಗಿದ್ದಾನೆ.

Ad Widget

Related posts

ಶಿವಮೊಗ್ಗದಲ್ಲಿ ಮಳೆಯ ಅಬ್ಬರ ಗ್ರಾಮಾಂತರದಲ್ಲಿ ಕೃಷಿ ಭೂಮಿ, ಶಿವಮೊಗ್ಗ ನಗರದಲ್ಲಿ ವಾಸದ ಮನೆಗಳಿಗೆ ನುಗ್ಗಿದ ನೀರು

Malenadu Mirror Desk

ಷೇರುದಾರರ ಸಹಕಾರದಿಂದ ಸಂಘದ ಪ್ರಗತಿ

Malenadu Mirror Desk

ಸಾಮಾಜಿಕ,ರಾಜಕೀಯ ಹೋರಾಟ ಮಾಡಿ ಆದರೆ ಯಾರ ಗುಲಾಮರಾಗಬೇಡಿ, ಈಡಿಗ ಸಮಾಜದ ಯುವಕರಿಗೆ ವಿಖ್ಯಾತಾನಂದ ಸ್ವಾಮೀಜಿ ಕಿವಿಮಾತು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.