Malenadu Mitra
ರಾಜ್ಯ ಶಿವಮೊಗ್ಗ

ಮಧು ಬಂಗಾರಪ್ಪ ಬರ್ತ್‌ಡೇ, ವಿಶೇಷ ಏನ್ ಗೊತ್ತಾ ?

ಮಾಜಿ ಶಾಸಕ ಮಧುಬಂಗಾರಪ್ಪ ಅವರ ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳು ಅದ್ದೂರಿಯಾಗಿಯೇ ಆಚರಿಸಿದರು. ಈ ಸಂದರ್ಭ ಪತ್ರಿಕಾಗೋಷ್ಟಿಯನ್ನೂ ಕರೆದಿದ್ದ ಮಧು ಬಂಗಾರಪ್ಪ ಅವರು ಇನ್ನು ಒಂದೆರಡು ವಾರದಲ್ಲಿ ತಮ್ಮ ರಾಜಕೀಯ ನಿರ್ಧಾರವನ್ನು ಪ್ರಕಟಿಸುವುದಾಗಿ ಹೇಳಿದರು. ಜೆಡಿಎಸ್‌ಗಿಂತ ಕಾಂಗ್ರೆಸ್ ಕಾರ್ಯಕರ್ತರೇ ಹೆಚ್ಚಿದ್ದ ಬರ್ತ್‌ಡೇ ಸೆಲಬ್ರೇಷನ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನಿರೀಕ್ಷೆ ನಿಜವಾಗಲಿದೆ ಎಂದು ಸೂಚ್ಯವಾಗಿ ಕಾಂಗ್ರೆಸ್ ಸೇರುವ ಗುಟ್ಟನ್ನು ಬಹಿರಂಗಪಡಿಸಿದರು.
ರಾತ್ರಿ ಬೆಳಗಾಗುವುದರೊಳಗೆ ನಿರ್ಧಾರ ತೆಗೆದುಕೊಳ್ಳುವಷ್ಟು ದೊಡ್ಡವ ನಾನಲ್ಲ ಆದರೆ ಎಲ್ಲ ಹಿರಿಯರು ಹಾಗೂ ಹಿತೈಷಿಗಳ ಆಶೀರ್ವಾದ ಪಡೆದು ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೂ ಮುನ್ನ ಒಂದು ಒಳ್ಳೆ ನಿರ್ಧಾರ ತೆಗೆದುಕೊಳ್ಳುತ್ತೇನೆ. ಜೆಡಿಎಸ್ ನಾಯಕರಾದ ದೇವೇಗೌಡರು ಹಾಗೂ ಕುಮಾರಣ್ಣ ಬಗ್ಗೆ ಯಾವತ್ತೂ ನನಗೆ ಗೌರವ ಇದೆ. ಅಲ್ಲಿ ನನಗೆ ಎಲ್ಲ ರೀತಿಯ ಬೆಂಬಲ ಇತ್ತು ಎಂದು ಹೇಳುವುದನ್ನೂ ಮಧು ಬಂಗಾರಪ್ಪ ಮರೆಯಲಿಲ್ಲ.
ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುವುದಿಲ್ಲ. ಶಿವಮೊಗ್ಗದಲ್ಲಿ ಇದೇ ಮೊದಲ ಬಾರಿಗೆ ಆಚರಣೆಯಾಗಿದೆ. ಇನ್ನು ಮುಂದೆ ಜಿಲ್ಲೆಯ ಜನರೊಂದಿಗೆ ಇದ್ದು ರಾಜಕೀಯ ಹೋರಾಟ ಮುಂದುವರಿಸುತ್ತೇನೆ. ಹಿಂದಿನ ಎರಡು ಚುನಾವಣೆಗಳನ್ನು ಕಾಂಗ್ರೆಸ್ ಬಂಧುಗಳೊಂದಿಗೆ ಮಾಡಿದ್ದೇನೆ. ಬಂಗಾರಪ್ಪಾಜಿ ಅವರ ಅಭಿಮಾನಿಗಳು ಹಾಗೂ ಹಿತೈಸಿಗಳು ಎಲ್ಲ ಕಡೆ ಇರುವುದರಿಂದ ಎಲ್ಲ ಪಾರ್ಟಿಯಲ್ಲಿರುವವರು ನನಗೆ ಹಾರೈಸುತ್ತಾರೆ. ಜನ್ಮದಿನದ ಅಂಗವಾಗಿ ಎಲ್ಲರೂ ಬಂದಿದ್ದಾರೆ ಭೇಟಿ ಮಾಡಿದ್ದಾರೆ. ಇದರಲ್ಲಿ ಯಾವುದೇ ರಾಜಕಾರಣ ಇಲ್ಲ ಎಂದು ಹೇಳಿದರು.

ಮಹಾ ಪಂಚಾಯತ್‌ಗೆ ಬೆಂಬಲ:
ಶಿವಮೊಗ್ಗದಲ್ಲಿ ಮಾ.೨೦ ರಂದು ನಡೆಯಲಿರುವ ರೈತರ ಹೋರಾಟ ಮಹಾಪಂಚಾಯತ್‌ನಲ್ಲಿ ಭಾಗವಹಿಸುತ್ತೇನೆ. ರೈತರನ್ನು ರಸ್ತೆ ಮೇಲೆ ಕೂರಿಸಿರುವು ಬಿಜೆಪಿ ಸರಕಾರದ ವಿರುದ್ಧ ಹೋರಾಟದಲ್ಲಿ ಸಕ್ರಿಯವಾಗುತ್ತೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎನ್.ರಮೇಶ್, ಕಲಗೋಡು ರತ್ನಾಕರ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೇದಾವಿಜಯಕುಮಾರ್, ವಿಜಯಕುಮಾರ್, ಮುಖಂಡರಾದ ಜಿ.ಡಿ.ಮಂಜುನಾಥ್, ಚಿನ್ನಪ್ಪ, ಹುಲ್ತಿಕೊಪ್ಪ ಶ್ರೀಧರ್ ಮತ್ತಿತರರಿದ್ದರು.
ಅಭಿಮಾನಿಗಳು ಬೃಹತ್ ಕೇಕ್ ಕತ್ತರಿಸಿ ತಮ್ಮ ನಾಯಕನಿಗೆ ಶುಭಕೋರಿದರು. ಬೆಳಗ್ಗೆಯಿಂದ ಶಿವಮೊಗ್ಗ ಕಲ್ಲಹಳ್ಳಿಯಲ್ಲಿರುವ ಅವರ ನಿವಾಸಕ್ಕೆ ಮುಖಂಡರು, ಸ್ನೇಹಿತರು ಹಾಗೂ ಅಭಿಮಾನಿಗಳು ಭೇಟಿ ನೀಡಿ ಜನ್ಮದಿನದ ಶುಭ ಕೋರಿದರು.ಜನ್ಮದಿನ ನಿಮಿತ್ತ ಸಾವಿರ ಗುಲಾಬಿ ಹೂವಿನ ಗಿಡ ವಿತರಿಸಲಾಯಿತು. ಅಭಿಮಾನಿಗಳಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.


ಮಾಡಿದ್ದು ಅನುಭವಿಸಬೇಕು:
ಸೊರಬ ತಾಲೂಕು ಮೂಗುರು ಏತನೀರಾವರಿಯಲ್ಲಿ ಉದ್ಘಾಟನೆಯಲ್ಲಿ ಸ್ಥಳೀಯ ಶಾಸಕರ ತಕರಾರು ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಧು, ಬಂಗಾರಪ್ಪ ಅವರು ಬಿಜೆಪಿಗೆ ಹೋದಾಗ ಅದೊಂದು ಮನೆಮುರುಕ ಪಕ್ಷ ಎಂದು ಹೇಳಿದವರು. ಇಂದು ಅದೇ ಪಕ್ಷದಿಂದ ಮುಖಭಂಗ ಅನುಭವಿಸುತ್ತಿದ್ದಾರೆ. ಈ ಬಗ್ಗೆ ನಾನು ಹೆಚ್ಚು ಹೇಳಲಾರೆ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಆ ಯೋಜನೆಗೆ ಅನುಮತಿ ಕೊಟ್ಟಿದ್ದರು. ಅದಕ್ಕಾಗಿ ನಾನು ಪಾದಯಾತ್ರೆ ಮಾಡಿದ್ದೆ,ಜನರು ಅದನ್ನು ನೆನಪಿಸ್ತಾರೆ ಎಂದಷ್ಟೇ ಹೇಳಿದರು.

ಕಾಗೋಡು ಆಶೀರ್ವಾದ ಪಡೆದ ಮಧು:
ಹುಟ್ಟು ಹಬ್ಬದ ನಿಮಿತ್ತ ಕಾಗೋಡು ತಿಮ್ಮಪ್ಪ ಅವರ ಸಾಗರದ ನಿವಾಸಕ್ಕೆ ಭೇಟಿ ನೀಡಿದ್ದ ಮಧು ಬಂಗಾರಪ್ಪ ಅವರಿಂದ ಆಶೀರ್ವಾದ ಪಡೆದರು. ಹಿರಿಯ ಮುತ್ಸದ್ದಿ ಕಾಗೋಡು ತಿಮ್ಮಪ್ಪ ಅವರು ತಂದೆಯವರ ಕಾಲದಿಂದಲೂ ಸಲಹೆ ಸಹಕಾರ ಕೊಡುತ್ತಿದ್ದಾರೆ. ಈಗ ನನಗೆ ಅವರೇ ಮಾರ್ಗದರ್ಶಕರು ಅವರ ಸಲಹೆಯಂತೆ ಮುನ್ನಡೆಯುವೆ. ಈ ಕಾರಣದಿಂದ ಅವರ ಆಶೀರ್ವಾದ ಪಡೆದಿದ್ದೇನೆ ಎಂದರು.

ಮಲೆನಾಡು ದೀವರ ವೇದಿಕೆಯಿಂದ ಸನ್ಮಾನ

ಈಡಿಗ ಭವನ ಉದ್ಘಾಟನೆಯಂದು ಅನಿವಾರ್ಯಕಾರಣದಿಂದ ಕಾರ್ಯಕ್ರಮಕ್ಕೆ ಬಾರದ ಕಾರಣ ಮಧು ಬಂಗಾರಪ್ಪ ಅವರು, ಮಂಗಳವಾರ ಭವನಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭ ಸಂಘದವತಿಯಿಂದ ಅವರಿಗೆ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಶ್ರೀಧರ್, ಕಾರ್ಯದರ್ಶಿ ಎಸ್.ಸಿ.ರಾಮಚಂದ್ರ, ಖಜಾಂಚಿ ದೇವಪ್ಪ, ಮುಖಂಡರಾದ ಬಂಡಿ ರಾಮಚಂದ್ರ, ಮಹೇಶ್, ಜಿ.ಡಿ.ಮಂಜುನಾಥ್,ಕಾಗೋಡು ರಾಮಪ್ಪ ಮತ್ತಿತರರು ಭಾಗವಹಿಸಿದ್ದರು. ಇದೇ ಸಂದರ್ಭ ಹುಟ್ಟು ಹಬ್ಬದ ಅಂಗವಾಗಿ ಮಧು ಬಂಗಾರಪ್ಪ ಅವರನ್ನು ಮಲೆನಾಡು ದೀವರ ಕ್ಷೇಮಾಭಿವೃದ್ಧಿ ಹಾಗೂ ಸಾಂಸ್ಕೃತಿಕ ಸಮಿತಿಯಿಂದ ಗೌರವಿಸಲಾಯಿತು. ಅಧ್ಯಕ್ಷ ಸುರೇಶ್ ಬಾಳೇಗುಂಡಿ, ಕಾರ್ಯದರ್ಶಿ ಕುಪ್ಪಯ್ಯ, ನಾಗರಾಜ್, ಉದಯ್ ಕುಮಾರ್ ಮತ್ತಿತರರಿದ್ದರು.

ಶಿವಮೊಗ್ಗ ಜಿಲ್ಲಾ ಈಡಿಗ ಸಂಘದಿಂದ ಸನ್ಮಾನ

Ad Widget

Related posts

ಕುವೆಂಪು ವಿವಿಬೋಧಕೇತರ ನೌಕರರಿಗೆ ವೇತನ ನಿಗದೀಕರಣ

Malenadu Mirror Desk

ಸುರೇಶ್ ಬಾಳೇಗುಂಡಿಅವರಿಗೆ ಸಮಾಜ ರತ್ನ ಪ್ರಶಸ್ತಿ

Malenadu Mirror Desk

ಶಿವಮೊಗ್ಗ -ಭದ್ರಾವತಿಯಲ್ಲಿ ಇಳಿಯದ ಕೊರೊನ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.