ರಾಜ್ಯದಲ್ಲಿ ಅವ್ಯಾಹತವಾಗಿ ಸರಬರಾಜಾಗುತ್ತಿರುವ ಡ್ರಗ್ಸ್ ನಿಯಂತ್ರಣ ಮಾಡಬೇಕು ಮತ್ತು ಈ ಜಾಲವನ್ನು ಮಟ್ಟಹಾಕಬೇಕೆಂದು ಆಗ್ರಹಿಸಿ ಬಿಜೆಪಿ ನಗರ ಘಟಕವು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಬುಧವಾರ ಮನವಿ ಸಲ್ಲಿಸಿತು.
ಶಿವಮೊಗ್ಗ ಹಳೇ ಜೈಲು ಆವರಣಕ್ಕೆ ಭೇಟಿ ನೀಡಿದ್ದ ಡಿಜಿ ಪ್ರವೀಣ್ ಸೂದ್ ಅವರನ್ನು ಭೇಟಿ ಮಾಡಿದ ಪಕ್ಷದ ಪ್ರಮುಖರು, ಗಾಂಜಾ ಡ್ರಗ್ಸ್ ಇತ್ಯಾದಿ ಮಾದಕ ವಸ್ತುಗಳ ಜಾಲದ ವಿರುದ್ಧ ಕ್ರಮ ಕೈಗೊಳ್ಳಲು ಶಿವಮೊಗ್ಗ ನಗರದ ಪೊಲೀಸ್ ಠಾಣೆಗಳಿಗೆ ದೂರು ನೀಡಲಾಗಿದೆ. ಈ ಜಾಲ ರಾಜ್ಯದ ಎಲ್ಲೆಡೆ ಇದ್ದು, ಕಠಿಣ ಕ್ರಮಕ್ಕೆ ಆದೇಶ ನೀಡಬೇಕು ಮತ್ತು ಇದರಿಂದ ಯುವ ಸಮೂಹ ಮಾದಕ ವ್ಯಸನಿಗಳಾಗುವುದನ್ನು ತಪ್ಪಿಸಬೇಕೆಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಪ್ರಮುಖರಾದ ದರ್ಶನ್, ಬಳ್ಳೇಕೆರೆ ಸಂತೋಷ್, ಜಗನ್ನಾಥ್, ಕೌಶಿಕ್, ಪ್ರೀತಂ, ಅಭಿಷೇಕ್ ಮತ್ತಿತರರು ಹಾಜರಿದ್ದರು.