ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರದು ಇಟಲಿ ಸಂಸ್ಕೃತಿ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯನ್ನು ಮೆಚ್ಚಿಸುವುದಕ್ಕಾಗಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ಶಿವಮೊಗ್ಗಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು,ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲಿಗೆ ವಿಧೂಷಕ ಎಂಬ ಪದ ಬಳಸಿದ್ದಾರೆ.ರಾಜ್ಯದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರಿಗೆ ನಾನು ಏಕವಚನ ಬಳಸಬೇಡಿ.ಅದು ನಿಮಗೆ ಶೋಭೆ ತರುವುದಿಲ್ಲ ಅಂತ ಹೇಳಿದ್ದೆ,ಆದರೆ ಹಳೆ ಚಾಳಿಯನ್ನೆ ಮುಂದುವರೆಸಿದ್ದಾರೆ ಎಂದರು.
ಲೇ, ಸಿದ್ಧರಾಮಯ್ಯ ನಿನಗೆ ಬುದ್ಧಿ ಬರಲ್ಲೇನಲ್ಲೇ ಎಂಬ ಪದ ನಾನು ಬಳಸಬಹುದು.ಆದರೆ, ನಾನು ಬಳಸುವುದಿಲ್ಲ.ನಾನು ಸಿದ್ಧರಾಮಯ್ಯನವರು ಬಹಳ ಆತ್ಮೀಯರಾಗಿದ್ದೇವೆ.ನಾನು ಅವರ ವಿರುದ್ಧ ಹಗುರವಾಗಿ ಮಾತನಾಡುವುದಿಲ್ಲ ಎಂದರು.
ಪಕ್ಷಾಂತರಿಗಳಿಗೆ ಬುದ್ದಿ ಕಲಿಸಿ,ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಸರ್ಕಾರ ಅಂತ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಹೇಳಿಕೆ ನೀಡುತ್ತಿದ್ದಾರೆ.ವಿಧಾನಸಭೆ ಮತ್ತು ಉಪಚುನಾವಣೆಯಲ್ಲಿ ಸೋತರೂ ಇವರಿಗೆ ಬುದ್ದಿ ಬಂದಿಲ್ಲ.ಭ್ರಷ್ಟಾಚಾರದ ಸರ್ಕಾರ ಅಂತ ಆಗಿದ್ದರೆ ಸಿದ್ದರಾಮಯ್ಯ ಒಂದೇ ಒಂದು ಹಗರಣವನ್ನು ಯಾಕೆ ಬಯಲಿಗೆಳೆದಿಲ್ಲ.ಡಿಕೆಶಿ ಯಾಕೆ ಜೈಲಿಗೆ ಹೋಗಿ ಬಂದದ್ದು ಯಾಕೆ ಎಂದು ಪ್ರಶ್ನಿಸಿದ ಅವರು,ಸಿದ್ದರಾಮಯ್ಯ ಜೆಡಿಎಸ್‌ನಿಂದ ಪಕ್ಷಾಂತರವಾಗಿಲ್ಲವೇ ಎಂದರು