Malenadu Mitra
ರಾಜ್ಯಶಿವಮೊಗ್ಗ

ಸಿಎಂ ತವರಲ್ಲಿ ದ್ವಿಶತಕ ದಾಟಿದ ಸೋಂಕು, ಒಂದು ಸಾವು

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಲಾಕ್‍ಡೌನ್ ಬೇಕೊ ಬೇಡ್ವೊ ಎಂದು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಸಿಎಂ ತವರು ಜಿಲ್ಲೆ ಶೀವಮೊಗ್ಗದ ಕೊರೊನ ಸೋಂಕಿತರ ಸಂಖ್ಯೆ ದ್ವಿಶತಕ ದಾಟಿದೆ.
ಸೋಮವಾರ ಒಂದೇ ದಿನ ಒಟ್ಟು 219 ಪ್ರಕರಣಗಳು ದಾಖಲಾಗಿವೆ. ಒಬ್ಬರು ಸಾವಿಗೀಡಾಗಿದ್ದಾರೆ. ಇದರಲ್ಲಿ ಉಕ್ಕಿನ ಭದ್ರಾವತಿಯಲ್ಲಿ ದಾಖಲೆಯ 93 ಕೊರೊನ ಪಾಸಿಟಿವ್ ಪ್ರಕರಣಗಳಿವೆ. ಉಳಿದಂತೆ ಶಿವಮೊಗ್ಗ ತಾಲೂಕು 47, ಶಿಕಾರಿಪುರ 9, ತೀರ್ಥಹಳ್ಳಿ 2, ಸೊರಬ 16,ಸಾಗರ 22, ಹೊಸನಗರ 24 ಹಾಗೂ ಇತರೆ ಜಿಲ್ಲೆಯಿಂದ ಬಂದ 6 ಮಂದಿಯಲ್ಲಿ ಕೊರೊನ ವೈರಸ್ ಪತ್ತೆಯಾಗಿದೆ. ಒಟ್ಟು 10 ವಿದಾರ್ಥಿಗಳಲ್ಲಿ ಕೊರೊನ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ 879 ಸಕ್ರಿಯ ಕೋವಿಡ್ ಪ್ರಕರಣಗಳಿವೆ ಎಂದು ಆರೊಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

Ad Widget

Related posts

ಆದ್ಯತಾ ವಲಯದ ಫಲಾನುಭವಿಗಳಿಗೆ ನಿಗದಿತ ಅವಧಿಯ ಒಳಗಾಗಿ ಕೋವಿಡ್ ಲಸಿಕೆ: ಜಿಲ್ಲಾಧಿಕಾರಿ

Malenadu Mirror Desk

ಜನರಿಗೆ ಉದ್ಯೋಗ, ನೆಮ್ಮದಿ ನೀಡುವುದು ನಮ್ಮ ಆದ್ಯತೆ
ವಾಣಿಜ್ಯ ಸಂಘದ ಸಂವಾದದಲ್ಲಿ ವಿಧಾನ ಸಭೆ ಚುನಾವಣೆ ಅಭ್ಯರ್ಥಿಗಳ ಅಭಯ

Malenadu Mirror Desk

ಶಿವಯೋಗಮಂದಿರದ ರೇವಣಸಿದ್ದ ಸ್ವಾಮೀಜಿ ಲಿಂಗೈಕ್ಯ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.