Malenadu Mitra
ರಾಜ್ಯಶಿಕಾರಿಪುರಶಿವಮೊಗ್ಗ

ಮಲೆನಾಡಿನಲ್ಲಿ ಮತ್ತೆ ಕೊರೊನಾಘಾತ: 15 ಸಾವು

ಶಿವಮೊಗ್ಗ ಜಿಲ್ಲೆಯಲ್ಲಿ ಮಂಗಳವಾರ ಕೊರೊನ ಸೋಂಕಿಗೆ ತುತ್ತಾಗಿ 15 ಮಂದಿ ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿ 612 ಮಂದಿಗೆ ಸೋಂಕು ತಗುಲಿದ್ದು, 642 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಕೊರೊನದಿಂದ ಸತ್ತವರ ಸಂಖ್ಯೆ 420ಕ್ಕೆ ಏರಿದೆ. ಮಂಗಳವಾರ ಶಿವಮೊಗ್ಗ ತಾಲೂಕಿನಲ್ಲಿ 230 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಭದ್ರಾವತಿಯಲ್ಲಿ 62,ಶಿಕಾರಿಪುರ 50,ತೀರ್ಥಹಳ್ಳಿಯಲ್ಲಿ 39 ,ಸೊರಬ 48,ಸಾಗರ 124,ಹೊಸನಗರ 16 ಹಾಗೂ ಇತರೆ ಜಿಲ್ಲೆಗಳ 43 ರೋಗಿಗಳಲ್ಲಿ ಸೋಂಕು ಪತ್ತೆಯಾಗಿದೆ. 23 ಮಂದಿ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 3489 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Ad Widget

Related posts

ಕೋವಿಡ್ ಲಸಿಕೆ ನೀಡುವಲ್ಲಿ ಆರೋಗ್ಯ ಇಲಾಖೆ ವಿಫಲ:ಕಂಕಾರಿ

Malenadu Mirror Desk

ಜಿಲ್ಲಾ ಕಸಾಪದಲ್ಲಿ ಹಣವೂ ಇಲ್ಲ, ದಾಖಲೆಯೂ ಇಲ್ಲ:ತಾಲೂಕು ಸಮಿತಿ ರಚನೆಗಾಗಿ ಜಿಲ್ಲಾ ಪ್ರವಾಸ: ಮಂಜುನಾಥ

Malenadu Mirror Desk

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.