Malenadu Mirror
ರಾಜ್ಯ ಶಿವಮೊಗ್ಗ

ಮನೆ ಬಾಡಿಗೆ ಕಟ್ಟದ ಕುಮಾರ್ ಬಂಗಾರಪ್ಪ: ತಬಲಿ ಬಂಗಾರಪ್ಪ ಆರೋಪ

ಶಾಸಕರಾಗಿದ್ದಾಗ ತಾವು ನೆಲೆಸಿದ ಮನೆ ಬಾಡಿಗೆ ಕಟ್ಟದೆ ಆ ಮನೆಯನ್ನೇ ವಶಪಡಿಸಿಕೊಳ್ಳಲು ಸಂಚು ಹಾಕಿದ ಕುಮಾರ್ ಬಂಗಾರಪ್ಪ ಅವರಿಗೆ ಇಂದು ಗೀತಾ ಶಿವರಾಜಕುಮಾರ್ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ ಎನ್ನುವುದಕ್ಕೆ ಯಾವ ನೈತಿಕತೆ ಇದೆ ಎಂದು ಕಾಂಗ್ರೆಸ್ ಮುಖಂಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತಬಲಿ ಬಂಗಾರಪ್ಪ ಆರೋಪಿಸಿದರು.


ಪಟ್ಟಣದ ಬಂಗಾರಧಾಮದಲ್ಲಿ ಕಾಂಗ್ರೆಸ್ ಪಕ್ಷದಿಂದ ಭಾನುವಾರ ಹಮ್ಮಿಕೊಂಡ ಖಂಡನಾ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಪಕ್ಷದಲ್ಲಿ ಜೀವಂತ ಇದ್ದೇನೆ ಎಂಬುದಕ್ಕೆ ಹಾಗೂ ಬಿಜೆಪಿಯಿಂದ ರೀಚಾರ್ಜ್ ವ್ಯವಹಾರ ಕುದುರಿದಕ್ಕೆ ಸಿದ್ಧ ಭಾಷಣಕಾರರಾಗಿ ಪ್ರತ್ಯಕ್ಷವಾದ ಕುಮಾರ್ ಬಂಗಾರಪ್ಪ ಮಧು ಬಂಗಾರಪ್ಪ ಹಾಗೂ ಗೀತಾ ಶಿವರಾಜ್ ಕುಮಾರ್ ಬಗ್ಗೆ ಮಾತನಾಡುವ ನೈತಿಕತೆ ಉಳಿಸಿಕೊಂಡಿಲ್ಲ.
ರಾಜಕಾರಣ, ಜನಪರ ಆಡಳಿತ ಮಾಡಲು ಅಕ್ಷರ ಜ್ಞಾನಕ್ಕೆ ಮಿಗಿಲಾಗಿ ಅನುಭವ, ಅಂತಃಕರಣ ಮುಖ್ಯ. ಅದು ಮಧು ಬಂಗಾರಪ್ಪ ಅವರಲ್ಲಿ ನೆಲೆಸಿದ್ದು ಮತದಾರರು ಬುಹುಮತಗಳಿಂದ ಗೆಲ್ಲಿಸಿರುವ ಜತೆಗೆ ಕಾಂಗ್ರೆಸ್ ಪಕ್ಷ ಸಚಿವಗಾದಿ ನೀಡಿ ಜಿಲ್ಲೆಯ ಜವಬ್ದಾರಿಯನ್ನು ನೀಡಿದೆ. ಇದನ್ನು ಸಹಿಕೊಳ್ಳಲಿಕ್ಕಾಗದ ಕುಮಾರ್ ಬಂಗಾರಪ್ಪ ಹತಾಶೆಯಿಂದ ಮಾತನಾಡುತ್ತಿದ್ದಾರೆ ಎಂದರು.


ಕುಮಾರ್ ಬಂಗಾರಪ್ಪ ಶಾಸಕರಾಗಿದ್ದಾಗ ತಾಲೂಕನ್ನು ಲೂಟಿ ಮಾಡಿದ್ದಲ್ಲದೆ, ದುಡಿದ ಕಾರ್ಯಕರ್ತರನ್ನು ದೂರವಿಟ್ಟು. ನೂರಾರು ಅಧಿಕಾರಿ ನೌಕರರನ್ನು ವರ್ಗವಣೆಗೊಳಿಸುತ್ತಾ ಹಣದ ವ್ಯವಹಾರ ನಡೆಸಿ ಜನತೆಯಿಂದ ದೂರವಾಗಿದ್ದಾರೆ. ಹಾಗೆಯೇ ಸಂಘಟನೆ ಕೊರತೆ, ವಿಕೃತ ಮನಸ್ಸಿನ ಕುಮಾರ್ ಬಂಗಾರಪ್ಪ ಅವರಿಗೆ ಬಿಜೆಪಿ ಮಂತ್ರಿ ಸ್ಥಾನ ನೀಡಿರಲಿಲ್ಲ. ಇಂದು ಮಧು ಬಂಗಾರಪ್ಪ ಮಂತ್ರಿಸ್ಥಾನದಲ್ಲಿದ್ದು ಜನಪರ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸುತ್ತಾ ರಾಜ್ಯ ನಾಯಕರಾಗುತ್ತಿರುವುದನ್ನು ಸಹಿಸಿಕೊಳ್ಳದೆ ಮತಿಭ್ರಮಣೆಯಿಂದ ಮಾತನಾಡುತ್ತಿದ್ದು ಮತದಾರರು ಎಚ್ಚೆತ್ತು ಗೀತಾ ಶಿವರಾಜ್ ಕುಮಾರ್ ಅವರನ್ನು ಗೆಲ್ಲಿಸಬೇಕು ಎಂದರು.
ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಬಿ.ಅಣ್ಣಪ್ಪ ಹಾಲಘಟ್ಟ ಮಾತನಾಡಿ, ಕುಮಾರ್ ಬಂಗಾರಪ್ಪ ಅವರಿಗೆ ಪಾಠ ಮಾಡುವಷ್ಟು ಎತ್ತರಕ್ಕೆ ಮಧು ಬಂಗಾರಪ್ಪ ಅವರು ಬೆಳೆದಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆ ತರುವ ಮೂಲಕ ನಾಡಿನ ಜನತೆಯ ಮೆಚ್ಚುಗೆ ಪಡೆದಿದ್ದಾರೆ. ಸೋತು ಮನೆ ಸೇರಿದ ಕುಮಾರ್ ಚುನಾವಣೆ ಸಮಯಕ್ಕೆ ಪ್ರತ್ಯಕ್ಷವಾಗಿದ್ದರ ಹಿಂದೆ ಹಲವು ಅನುಮಾನಗಳಿವೆ ಎಂದರು.


ಕೆಸಿಸಿಸಿ ಸದಸ್ಯ ಕೆ.ಪಿ.ರುದ್ರಗೌಡ ಮಾತನಾಡಿ, ಕುಮಾರ್ ಬಂಗಾರಪ್ಪ ಅವರು ಸೊರಬ ತಾಲೂಕಿನಲ್ಲಿ ತಮ್ಮ ಮನೆ ಎಲ್ಲಿದೆ ಎಂದು ತೋರಿಸಲಿ. ಮಧು ಬಂಗಾರಪ್ಪ ಅವರ ಬೆಳವಣ ಗೆ, ಅವರು ರಾಜ್ಯದಲ್ಲಿ ರೂಪಿಸಿದ ಕಾರ್ಯಕ್ರಮಗಳಿಗೆ ಹತಾಶೆಗೊಳಗಾಗಿ, ಹಾಗೆಯೇ ಬಿಜೆಪಿಯವರು ರೀಚಾರ್ಜ್ ಮಾಡಿದ್ದರಿಂದ ದಿಢೀರ್ ಪ್ರಚಾರಕ್ಕೆ ಬಂದಿದ್ದಾರೆ ಎಂದ ಅವರು ತಂಗಿಯೇ ಚುನಾವಣೆಗೆ ಸ್ಪರ್ಧಿಸಿದ್ದು ಎಂಬುದನ್ನು ಮರೆತು ಮಾತನಾಡುವ ಕುಮಾರ್ ಬಂಗಾರಪ್ಪ ಅವರಿಗೆ ಸಂಬAಧಗಳ ಬಗ್ಗೆ ಪ್ರಜ್ಞೆ ಇದಿಯೇ ಎಂದು ಪ್ರಶ್ನಿಸಿದರು.


ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಗಣಪತಿ ಮಾತನಾಡಿ, ಗೀತಾ ಶಿವರಾಜ್ ಕುಮಾರ್ ಅವರು ರಾಜಕುಮಾರ್ ಕುಟುಂಬದ ಸಮಾಜಮುಖಿ ಕೆಲಸಕಾರ್ಯಗಳನ್ನು ಮುಂದುವರೆಸಿಕೊAಡು ಹೋಗುತ್ತಿದ್ದಾರೆ. ಮೈಸೂರಿನ ಶಕ್ತಿಧಾಮವನ್ನು ಯಶಸ್ವಿಯಾಗಿ ನಿರ್ವಹಣೆಮಾಡುತ್ತಿದ್ದಾರೆ.
ತನಗೆ ಸಿಗದ ಜಿಲ್ಲೆಯ ನಾಯಕತ್ವ ಮಧು ಬಂಗಾರಪ್ಪ ಅವರಿಗೆ ಸಿಕ್ಕಿದೆ ಎಂದು ಹತಾಶೆಯಿಂದ ಮಾತನಾಡುತ್ತಿದ್ದಾರೆ. ಮಧು ಬಂಗಾರಪ್ಪ ಭ್ರಷ್ಟರಾಜಕಾರಣ ಅಲ್ಲ. ಅಂತಃರAಗದ ರಾಜಕಾರಣ ಯಾಗಿದ್ದು ಸಾವಿರಾರು ಜನರಿಗೆ ಭೂಹಕ್ಕು ನೀಡಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ಜತೆಗೆ ತಾಲೂಕಿಗೆ ೧೫೦ ಕೋಟಿ ಅನುದಾದ ತಂದಿದ್ದಾರೆ. ಅಲ್ಲದೆ ಶರಾವತಿ ನದಿಯಿಂದ ೬೫೦ ಕೋಟಿ ಅನುದಾನದಲ್ಲಿ ಸೊರಬ, ಆನವಟ್ಟಿ, ಶಿರಾಳಕೊಪ್ಪ ಪಟ್ಟಣಗಳಿಗೆ ಕುಡಿಯುವ ನೀರಿನ ಯೋಜನೆಗೆ ಆಡಳಿತ ಅನುಮೋದನೆ ಪಡೆದಿದ್ದಾರೆ. ಇದೆಲ್ಲ ಸಹಿಸದೆ ಮಾತನಾಡುವುದು ಸರಿಯಲ್ಲ ಎಂದರು.


ಪ್ರಮುಖರಾದ ನಾಗರಾಜ್ ಚಿಕ್ಕಸವಿ, ಜೆ.ಪ್ರಕಾಶ್, ಸುಜಾತಾ ಜೋತಾಡಿ, ಜ್ಯೋತಿ ನಾರಾಯಣಪ್ಪ, ಎಂ.ಡಿ. ರಶೀದ್ ಅಹ್ಮದ್, ಶಿವಕುಮಾರ್, ಬಸವಂತಪ್ಪ, ನಿಂಗಪ್ಪ, ಸುರೇಶ್ ಬಿಳವಾಣ , ಸತ್ಯನಾರಾಯಣ್, ಪ್ರಶಾಂತ ಮೇಸ್ತಿç, ಮುಖೇಶ್, ಲೋಕೇಶ್, ಚಿನ್ನಪ್ಪ, ಶ್ರೀಕಾಂತ್ ಇತರರಿದ್ದರು.

Ad Widget

Related posts

ಓಡಿ ಹೋಗುವ ಸಂಸ್ಕೃತಿ ಬಿಜೆಪಿಲಿಲ್ಲ, ತಪ್ಪು ಪುನರಾವರ್ತನೆ ಆಗುವುದು ಬೇಡ : ಜನಸ್ವರಾಜ್ ಸಮಾವೇಶದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ

Malenadu Mirror Desk

ರಾಷ್ಟ್ರೀಯ ಸೇವಾ ಯೋಜನೆ ದೇಶಪ್ರೇಮ ಬೆಳೆಸುತ್ತದೆ: ಕುಲಸಚಿವೆ ಅನುರಾಧ

Malenadu Mirror Desk

ವಿಧಿ ನೀನೆಷ್ಟು ಕ್ರೂರ, ಮುದ್ದು ಹುಡುಗಿಯ ಕನಸು ಕೊಂದುಬಿಟ್ಟೆ….. ಹಸೆಮಣೆಯಲ್ಲಿದ್ದಾಕೆ ಮೇಲೆ ಅದೆಂತಾ ಮೋಹವಿತ್ತು ನಿನಗೆ ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.