Malenadu Mirror
ರಾಜಕೀಯ ರಾಜ್ಯ ಶಿಕಾರಿಪುರ ಶಿವಮೊಗ್ಗ ಸಾಗರ ಸೊರಬ ಹೊಸನಗರ

ತಾಲೂಕು ಪಂಚಾಯಿತಿ ಕ್ಷೇತ್ರ ಮರುವಿಂಗಡಣೆ

ರಾಜ್ಯ ಸರ್ಕಾರ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಕ್ಷೇತ್ರ ಮರುವಿಂಗಡಣೆ ಮಾಡಿ ಆದೇಶ ಹೊರಡಿಸಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, ೧೯೯೩ ರ ಪುಕರಣ ೧೨೧, ೧೨೨ ಮತ್ತು ೧೨೪ ರನ್ವಯ ಹಾಗೂ ೩೦೮(ಇ)(ಎಫ್) ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಪಂಚಾಯತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ನಿಗದಿಪಡಿಸಿದೆ.

ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯೊಳಗಿರುವ ಪ್ರದೇಶಗಳನ್ನು ೧೧೩ ಏಕ ಸದಸ್ಯ ತಾಲ್ಲೂಕು ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ಅವುಗಳ ಸೀಮಾ/ಗಡಿಯನ್ನು ನಿರ್ಣಯಿಸಿದೆ.

ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಪಂಚಾಯತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಪ್ರಕಟಣೆಯ ದಿನಾಂಕದಿಂದ ೧೫ (ಹದಿನೈದು) ದಿವಸಗಳ ಒಳಗಾಗಿ ಅಂದರೆ ಜನವರಿ ೧೬ರ ಸಂಜೆ ೫.೦೦ ಗಂಟೆಯ ಒಳಗೆ ಸಲ್ಲಿಸಲು ತಿಳಿಸಿದೆ.

ಆಕ್ಷೇಪಣೆಗಳನ್ನು ಆನ್ಲೈನ್ ಮೂಲಕ ಹಾಗೂ ಖುದ್ದಾಗಿ/ಅಂಚೆಯ ಮೂಲಕ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬಹುದು. ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಿದೆ. (ಅ) ಆನ್ ಲೈನ್ ಮೂಲಕ: ವೆಬ್ ಸೈಟ್ ವಿಳಾಸ:”https://rdpr.karnataka.gov.in/rdc/public ಸದರಿ ವೆಬ್‌ಸೈಟ್‌ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು ಅಐIಅಏ ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್‌ಲೈನ್ ನಲ್ಲಿ ಸಲ್ಲಿಸಬಹುದು.

(ಆ) ಖುದ್ದಾಗಿ/ಅಂಚೆ ಮೂಲಕ: ಸಲ್ಲಿಸುವವರು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ.,೩ನೇ ಗೇಟ್, ೨ನೇ ಮಹಡಿ, ಕೊಠಡಿ ಸಂಖ್ಯೆ: ೨೨೨/ಂ, ಬಹುಮಹಡಿ ಕಟ್ಟಡ, ೫೬೦೦೦೧ ಇಲ್ಲಿಗೆ ಸಲ್ಲಿಸಬಹುದು.

ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಹಾಗೂ ಅಲ್ಲಿನ ಕ್ಷೇತ್ರಗಳ ವಿವರ ಇಂತಿದೆ.

ಸೊರಬ ತಾಲ್ಲೂಕು

೦೧- ಅಗಸನಹಳ್ಳಿ

೦೩-ಭಾರಂಗಿ

೦೪-ಶಕುನವಳ್ಳಿ

೦೫-ಜಡೆ

೦೬-ಕಾತುವಳ್ಳಿ

೦೭-ತತ್ತೂರು

೦೮-ಉದ್ರಿ

೦೯-ಕುಪ್ಪಗುಡ್ಡೆ

೧೦-ಹರೀಶಿ

೧೧-ಗುಡುವಿ

೧೨-ಚಂದ್ರಗುತ್ತಿ

೧೩-ಹೊಸಬಾಳೆ

೧೪-ನಿಸರಾಣಿ

‘೧೫- ಉಳವಿ

೧೬-ಇಂಡುವಳ್ಳಿ

೧೭-ಮಾವಲಿ

ಶಿಕಾರಿಪುರ ತಾಲ್ಲೂಕು

೧- ಈಸೂರು

೨- ಹಾರೋಗೊಪ್ಪ

೩-ಹಿತ್ತಲ

೪-ಸಾಲೂರು

೫-ಹೊಸೂರು

೭-ಮಾರವಳ್ಳಿ

೮-ಬೇಗೂರು

೯-ಕಪ್ಪನಹಳ್ಳಿ

೧೦-ಅಂಬಾರಗೊಪ್ಪ

೧೧-ಉಡುಗಣಿ

೧೨-ಹರಗುವಳ್ಳಿ

೧೩-ಸುಣ್ಯದ ಕೊಪ್ಪ

೧೪-ಚಿಕ್ಕಜಂಬೂರು

೧೫-ಮತ್ತಿಕೋಟೆ

೧೬-ತಾಳಗುಂದ

೧೭-ಬಿಳಕಿ

೧೮-ತೊಗರ್ಸಿ

೧೯-ನರಸಾಪುರ

ಹೊಸನಗರ ತಾಲ್ಲೂಕು

೧-ಕಳೂರು

೨-ಮಾರುತಿಪುರ

೩-ಹುಂಚ

೪- ಹೆದ್ದಾರಿಪುರ

೫-ಮೇಲಿನ ಬೆಸಿಗೆ

೬-ಮೂಡಗೊಪ್ಪ

೭-ಖೈರುಗುಂದ

೮-ನಿಟ್ಟೂರು

೯-ರಿಪ್ಪನ್ ಪೇಟೇ

೧೦-ಅರಸಾಳು

೧೧-ಬಾಳೂರು

೧೨-ಹರಿದ್ರಾವತಿ

ಶಿವಮೊಗ್ಗ ತಾಲ್ಲೂಕು

೧-ಗಾಜನೂರು

೨-ಅಗಸವಳ್ಳಿ

೩-ಮತ್ತೂರು

೪-ಹಾರನಹಳ್ಳಿ

೫-ರಾಮನಗರ

೬-ಕುಂಚೇನಹಳ್ಳಿ

೭-ಕೋಟೆಗಂಗೂರು

೮-ಹೊಳಲೂರು ೯-ಕೊಮ್ಮನಾಳು

೧೦-ಮೇಲಿನಹನಸವಾಡಿ

೧೧-ಕೂಡ್ಲಿ

೧೨-ಹಸೂಡಿ

೧೩-ಸದಾಶಿವಪುರ

೧೫-ಸೋಗಾನೆ

೧೬-ಕುಂಸಿ

೧೭-ಆಯನೂರು

೧೮-ಮಂಡಘಟ್ಟ

೧೯-ತಮ್ಮಡಿಹಳ್ಳಿ

ಭದ್ರಾವತಿ ತಾಲ್ಲೂಕು

೧-ಆನವೇರಿ

೨-ಮಂಗೋಟೆ

೪-ಸಿದ್ಲಿಪುರ

೩-ಮೈದೊಳಲು

೫-ಯಡೇಹಳ್ಳಿ

೬-ಕಲ್ಲಿಹಾಳ್

೭-ಅರಬಿಳಚಿ

೮-ಕೂಡ್ಲಿಗೆರ

೯-ಕಾಗೆಕೋಡಮಗ್ಗೆ

೧೦-ಅರಳಿಹಳ್ಳಿ

೧೧-ಅಂತರಗಂಗೆ

೧೨-ಮಾವಿನಕೆರೆ

೧೩-ಬಾರಂದೂರು

೧೪-ಹಿರಿಯೂರು

೧೫-ಕಲ್ಲಹಳ್ಳಿ

೧೬-ಸಿಂಗನಮನೆ

೧೭-ದೊಣಬಘಟ್ಟ

೧೮-ಹುಣಸೇಕಟ್ಟೆ

ತೀರ್ಥಹಳ್ಳಿ ತಾಲ್ಲೂಕು

೦೧- ಆರಗ

೦೨-ಹಾದಿಗಲ್ಲು

೦೩- ಕೋಣಂದೂರು

೦೪- ಮೇಲಿನಕುರುವಳ್ಳಿ

೦೫- ದೇವಂಗಿ

೦೬-ಸಾಲ್ಗಡಿ

೦೭-ಅರೇಹಳ್ಳಿ

೦೮-ಕನ್ನಂಗಿ

೦೯- ಲಿಂಗಾಪುರ

೧೦-ಮಾಳೂರು

೧೧-ಆಗುಂಬೆ

೧೨- ಮೇಗರವಳ್ಳಿ

೧೩-ಮುಳುಬಾಗಿಲು

ಸಾಗರ ತಾಲ್ಲೂಕು ಪಂಚಾಯಿತಿ

೧- ಗೌತಮಪುರ

೨ – ಹೊಸೂರು

೩ – ಆನಂದಪುರ

೪ – ಯಡೇಹಳ್ಳಿ

೫ – ಹೆಗೋಡು .

೬-ಇಕ್ಕೇರಿ

೭ – ಆವಿನಹಳ್ಳಿ

೮ – ಕರೂರು

೯ – ಕೆಳದಿ

೧೦ – ಬರೂರು

೧೧ – ಭೀಮನೇರಿ

೧೨ – ಕಾನ್ಲೆ

೧೩ – ಸಿರಿವಂತೆ

೧೪ – ತಾಳಗುಪ್ಪ

೧೫-ಚೆನ್ನಗೊಂಡ

Ad Widget

Related posts

ರಾತ್ರಿತನಕ ಚೆನ್ನಿ ಹೆಸರಿದೆ,ಬೆಳಗ್ಗೆ ಬದಲಾದರೆ ನಮಗೆ ಗೊತ್ತಿಲ್ಲ!
ಕುತೂಹಲ ಉಳಿಸಿಕೊಂಡಿರುವ ಬಿಜೆಪಿ ಶಿವಮೊಗ್ಗ ಅಭ್ಯರ್ಥಿ

Malenadu Mirror Desk

ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಜೀವನ ಮೌಲ್ಯಗಳನ್ನು ತಿಳಿಸಬೇಕು
ಪುನಶ್ಚೇತನ ಕಾರ್ಯಾಗಾರದಲ್ಲಿ ಉಪನಿರ್ದೇಶಕ ಕೃಷ್ಣಪ್ಪ ಸಲಹೆ

Malenadu Mirror Desk

ವರುಣನ ಕೃಪೆಗಾಗಿ ಪರ್ಜನ್ಯ ಜಪ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.