Malenadu Mitra
ಶಿವಮೊಗ್ಗ

ಎಲ್ಲಾ ವಾರ್ಡ್‌ಗಳಿಗೂ ಸ್ಯಾನಿಟೈಸರ್ : ಯುವ ಕಾಂಗ್ರೆಸ್‌ ಮನವಿ

ಶಿವಮೊಗ್ಗ ನಗರದ ಎಲ್ಲಾ  ವಾರ್ಡ್‌ಗಳಿಗೂ  ಸ್ಯಾನಿಟೈಸರ್  ಸಿಂಪಡಣೆ ಮಾಡಿಸಬೇಕೆಂದು ಆಗ್ರಹಿಸಿ ಯುವ ಕಾಂಗ್ರೆಸ್‌ನಿಂದ ಮಹಾನಗರ ಪಾಲಿಕೆ ಆಯಕ್ತರಿಗೆ ಮನವಿ ಸಲ್ಲಿಸಲಾಯಿತು.
ಕೊರೋನಾ ಎರಡನೇ ಅಲೆ ಅತಿ ವೇಗವಾಗಿ   ಶಿವಮೊಗ್ಗ ನಗರದಲ್ಲಿ ಹರಡುತ್ತಿದೆ. ದಿನನಿತ್ಯ ಕೋರೋನಾ ಸೋಂಕಿತ ಕೇಸ್‌ಗಳು ದಾಖಲಾಗುತ್ತಿದೆ.ಹಾಗಾಗಿ  ನಗರದ ಎಲ್ಲಾ ವಾರ್ಡ್‌ಗಳಲ್ಲಿ ಸ್ಯಾನಿಟೈಸರ್ ಸಿಂಪಡಣೆ ಮಾಡುವ ಮೂಲಕ ಕೊರೋನಾ ಸೋಂಕು ಹರಡದಂತೆ ಕ್ರಮ  ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಕೊರೋನಾ ಎರಡನೇ ಅಲೆ ಅತಿವೇಗವಾಗಿ ಹರಡುತ್ತಿದ್ದರೂ ನಗರದ ಕೆಲವು ವಾರ್ಡಗಳಲ್ಲಿ ಮಾತ್ರ ಸ್ಯಾನಿಟೈಸರ್  ಸಿಂಪಡಿಸುತ್ತಿದ್ದಾರೆ.ಇದು ಖಂಡನೀಯ. ಕೂಡಲೇ ನಗರದ ಎಲ್ಲಾ ವಾರ್ಡ್‌ಗಳ ಇಕ್ಕೆಲಗಳಲ್ಲಿ ಏಕಕಾಲದಲ್ಲಿ ೧೦ ಟ್ಯಾಂಕರ್‌ಗಳ ಮೂಲಕ  ಮಹಾನಗರ ಪಾಲಿಕೆ ವತಿಯಿಂದ ಸ್ಯಾನಿಟೈಸರ್ ಮಾಡುವ ಮುಖಾಂತರ ನಗರದ ಶುಚಿತ್ವವನ್ನು ಕಾಪಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಎಚ್ ಪಿ ಗಿರೀಶ್ , ಯುವ ಕಾಂಗ್ರೆಸ್ ನ ದಕ್ಷಿಣ ಬ್ಲಾಕ್  ಎಸ್ ಕುಮರೇಶ್, ಪದಾಧಿಕಾರಿಗಳಾದ ಪ್ರವೀಣ್ ಸಾಳಂಕೆ, ಪವನ್, ರಾಕೇಶ್, ವೆಂಕಟೇಶ್ ಕಲ್ಲೂರು ಇತರರು ಇದ್ದರು.

Ad Widget

Related posts

ಅತಿವೃಷ್ಟಿ ಪೀಡಿತ ಪ್ರದೇಶಗಳಿಗೆ ಸಚಿವರ ಭೇಟಿ; ಹಾನಿ ಪರಿಶೀಲನೆ,418 ಕೋಟಿ ರೂ.ಆಸ್ತಿಪಾಸ್ತಿ ನಷ್ಟದ ಅಂದಾಜು

Malenadu Mirror Desk

ಅರಣ್ಯ ಹಕ್ಕು ಕಾಯ್ದೆ ಸರಳೀಕರಣಗೊಳಿಸಬೇಕು, ತಿದ್ದುಪಡಿ ಮಾಡಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುವ ಅನಿವಾರ್ಯತೆ ಇದೆ : ಕೆ.ಎಸ್.ಗುರುಮೂರ್ತಿ

Malenadu Mirror Desk

ಕಾರು ಚಲಾಯಿಸುತ್ತಿದ್ದಾಗಲೇ ಹೃದಯಾಘಾತ : ಸಾವು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.