ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಐಸಿಯು ಸೇರಿದಂತೆ ಸೌಲಭ್ಯ ಕಲ್ಪಿಸಿ ಜನರ ಬದುಕಿಸಬೇಕಾಗಿದೆ. ಇದನ್ನು ಬಿಟ್ಟು ಸತ್ತವರನ್ನು ಸುಡಲು ಸೌಲಭ್ಯ ಕಲ್ಪಿಸುವ ಸಲುವಾಗಿ ಸಂಘಟನೆಗಳ ಜೊತೆ ಕೈಜೋಡಿಸಿರುವುದು ಖಂಡನೀಯವೆಂದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಮಾರ್ಗ ಸೂಚಿ ಅನ್ವಯ ಸಚಿವ ಈಶ್ವರಪ್ಪ ಪ್ರಕಟಿಸಿದ ಎಲ್ಲಾ ನಿರ್ಬಂಧಗಳು ಜಾರಿಯಲ್ಲಿವೆ. ಕೇವಲ ನಗರಕ್ಕೆ ಸೀಮಿತವಾಗಿ ಬಿಗಿ ಕ್ರಮ ಜಾರಿ ಎಂದು ಹೇಳಿರುವುದು ಹಾಸ್ಯಾಸ್ಪದವಾಗಿದೆ ಎಂದು ದೂರಿದರು.
ವ್ಯಾಕ್ಸಿನೇಷನ್ ವ್ಯವಸ್ಥೆ ಮಾಡಿ, ದಿನಸಿ, ತರಕಾರಿಯನ್ನು ಮನೆ ಬಾಗಿಲಿಗೆ ಸರಬರಾಜು ಮಾಡಿ ಎಂದರೆ ಸಚಿವರು ಸ್ಮಶಾನಕ್ಕೆ ಭೇಟಿ ನೀಡುತ್ತಾರೆ. ಕೇಳಿದರೆ ಚಿತಾಗಾರ ವ್ಯವಸ್ಥೆ ಮಾಡುತ್ತೇನೆ ಎನ್ನುತ್ತಾರೆ. ಚಿತಾಗಾರ ವ್ಯವಸ್ಥೆ ಕೊನೆಯ ಆಯ್ಕೆಯಾಗಬೇಕು. ಸೋಂಕು ತಡೆಯಲು ಹಲವು ವ್ಯವಸ್ಥೆಗಳನ್ನು ಮಾಡಿದರೆ ಸೋಂಕು ತಡೆಯಬಹುದು ಎಂಬ ಮನೋಭಾವ ಬೆಳೆಸಬೇಕಿದೆ ಎಂದರು.
ಸಿದ್ದರಾಮಯ್ಯನವರು ಬಡವರಿಗೆ ೧೦ ಸಾವಿರ ಹಣ ನೀಡಿ ಎಂದರೆ ದುಡ್ಡನ್ನು ಪ್ರಿಂಟ್ ಮಾಡಬೇಕೆ ಎಂದು ಹೇಳುತ್ತಾರೆ. ಜನಪರ ಯೋಜನೆ ತರ ಹಣ ನೀಡಿ ಎಂದರೆ ಸಚಿವರೇ ಉಡಾಫೆ ಮಾಡುತ್ತಿದ್ದಾರೆ.
-ಕೆ.ಬಿ. ಪ್ರಸನ್ನಕುಮಾರ್