ಕೊರೊನ ಅಬ್ಬರ ಶಿವಮೊಗ್ಗದಲ್ಲಿ ಮುಂದುವರಿದಿದ್ದು, ಸಾವಿನ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಶುಕ್ರವಾರ 20ಮಂದಿ ಅಸುನೀಗಿದ್ದು, ಜಿಲ್ಲೆಯಲ್ಲಿ ಈವರೆಗೆ ಕೊರೊನದಿಂದ ಸಾವಿಗೀಡಾದವರ ಸಂಖ್ಯೆ672ಕ್ಕೇರಿದೆ.ಶುಕ್ರವಾರ984 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಸುರಕ್ಷಿತ ಕ್ರಮಗಳ ನಡುವೆಯೂ ಸೋಂಕಿನ ಪ್ರಮಾಣ ಹೆಚ್ಚಾಗಿರುವುದು ಅತಂಕಕ್ಕೆ ಕಾರಣವಾಗಿದೆ. ಇದೇ ವೇಳೆ 705ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಶಿವಮೊಗ್ಗ ತಾಲೂಕಿನಲ್ಲಿ265,ಭದ್ರಾವತಿಯಲ್ಲಿ 182,ತೀರ್ಥಹಳ್ಳಿಯಲ್ಲಿ104ಶಿಕಾರಿಪುರ 105 ಸಾಗರ 127,ಹೊಸನಗರ 68,ಸೊರಬ 103ಹಾಗೂ ಇತರೆ ಜಿಲ್ಲೆಯ 30ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಸೋಂಕಿತರ ಪೈಕಿ 46ಮಂದಿ ವಿದ್ಯಾರ್ಥಿಗಳಿದ್ದಾರೆ. ಜಿಲ್ಲೆಯಲ್ಲಿ7120 ಸಕ್ರಿಯ ಕೊರೊನ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ತಿಳಿಸಿದೆ.
ಶಿವಮೊಗ್ಗದಲ್ಲಿ ಬ್ಲಾಕ್ ಫಂಗಸ್
ಕೊರೊನದಿಂದಲೇ ಕಂಗಾಲಾಗಿರುವ ಶಿವಮೊಗ್ಗದಲ್ಲಿ ಈಗ ಬ್ಲಾಕ್ ಫಂಗಸ್ ಕೂಡಾ ಕಾಲಿಟ್ಟಿದ್ದು, ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದಾರೆಂದು ಮೂಲಗಳು ತಿಳಿಸಿವೆ.
ಗುರುವಾರ ಮೆಗ್ಗಾನ್ ನಲ್ಲಿ ೯ ಜನರಲ್ಲಿ ಬ್ಲಾಕ್ ಫಂಗಸ್ ಶಂಕೆ ಇದ್ದು ಇಬ್ಬರಲ್ಲಿ ಫಂಗಸ್ ದೃಢಪಟ್ಟಿದ್ದು ಒಟ್ಟು ೧೧ಜನರಲ್ಲಿ ಫಂಗಸ್‌ನ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ ಎನ್ನಲಾಗಿದೆ.
ಶುಕ್ರವಾರ ೧೪ ಜನರಲ್ಲಿ ಫಂಗಸ್ ಶಂಕೆ ಇದ್ದು, ಮೂವರಲ್ಲಿ ಫಂಗಸ್ ವೈರಸ್ ಧೃಢಪಟ್ಟಿದೆ. ಧೃಢಪಟ್ಟ ಮೂವರಲ್ಲಿ ಒಬ್ಬರು ಫಂಗಸ್‌ಗೆ ಬಲಿಯಾಗಿದ್ದಾರೆ. ಇನ್ನೊಬ್ಬರ ಸ್ಥಿತಿ ಗಂಭೀರವಾಗಿದೆ.