Malenadu Mitra
ರಾಜ್ಯಶಿವಮೊಗ್ಗ

ವಾಹನ ಜಖಂ ಇನ್ನಿಬ್ಬರು ಬಂಧನ: ಆರೋಪಿಗಳಿಗಿದೆ ಕ್ರೈಂ ಹಿನ್ನೆಲೆ

ಶಿವಮೊಗ್ಗದಲ್ಲಿ ಮಧ್ಯ ರಾತ್ರಿ ವಾಹನ ಜಖಂಗೊಳಿಸಿ ವಿಕೃತಿ ಮೆರೆದಿದ್ದ ಇನ್ನಿಬ್ಬರು ಆರೋಪಿಗಳನ್ನು ದೊಡ್ಡಪೇಟೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಮಹಮದ್ ಸಲೀಂ(30) ಸೂಳೆಬೈಲು ಹಾಗೂ ಭರ್ಮಪ್ಪನಗರದ ಅಕ್ರಿಖಾನ್(32) ಬಂಧಿತ ವ್ಯಕ್ತಿಗಳಾಗಿದ್ದಾರೆ. ಈ ಇಬ್ಬರೂ ವ್ಯಕ್ತಿಗಳು ಅಪರಾಧ ಹಿನ್ನೆಲೆಯುಳ್ಳವರಾಗಿದ್ದು, ವಾಹನ ಜಖಂಗೊಳಿಸಿರುವುದರ ಹಿನ್ನೆಲೆ ಏನು ಎಂಬ ಬಗೆ ತನಿಖೆ ಮುಂದುವರಿದಿದೆ. ಗಾಂಧೀಬಜಾರ್ ಸುತ್ತಮುತ್ತ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಸ್ಥಳೀಯ ಮುಖಂಡರೊಂದಿಗೆ ಈ ಬಗ್ಗೆ ಸಭೆ ನಡೆಸಿ ಅಪರಾಧಿಗಳ ಅಸಲಿಯತ್ತು ಪತ್ತೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ಒಟ್ಟಾರೆ ಈ ಪ್ರಕರಣದಲ್ಲಿ ನಾಲ್ಕು ಜನರನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ಮುಂದುವರಿದಿದೆ. ಆರೋಪಿಗಳು 14 ಕಾರು, ಒಂದು ಆಟೊ ಹಾಗೂ 5 ಬೈಕ್‍ಗಳನ್ನು ಜಖಂಗೊಳಿಸಿದ್ದರು.

Ad Widget

Related posts

ಯುವಜನರು ಪುಸ್ತಕ ಓದಿನಿಂದ ವಿಮುಖರಾಗುತ್ತಿರುವುದು ವಿಷಾದನೀಯ ; ಜಿಲ್ಲಾಧಿಕಾರಿ

Malenadu Mirror Desk

ಪ್ರೊ. ಸಿ. ಎಂ. ತ್ಯಾಗರಾಜ್ ಅಧಿಕಾರ ಸ್ವೀಕಾರ

Malenadu Mirror Desk

ನಾಯಕತ್ವ ಬೆಳವಣಿಗೆಗೆ ಎನ್ಎಸ್ಎಸ್ ಸಹಕಾರಿ : ಭೀಮಣ್ಣ ಕೆ.ನಾಯ್ಕ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.