ಭದ್ರಾವತಿಯಲ್ಲಿ ಕೊರೊನ ಶೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಕಠಿಣ ಲಾಕ್‌ಡೌನ್ ನಿಯಮ ಅನುಸರಿಸುವುದು ಅನಿವಾರ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಶನಿವಾರ ಭದ್ರಾವತಿ ಬಿಜೆಪಿ ವತಿಯಿಂದ ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಶೋಂಕಿತರನ್ನು ನೋಡಿಕೊಳ್ಳುವವರಿಗೆ ಆಹಾರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭದ್ರಾವತಿಯಲ್ಲಿ ಜನರಲ್ಲಿ ಜಾಗೃತಿ ಇರದ ಕಾರಣ ಸೋಂಕಿತರು ಹೆಚ್ಚಾಗಿದ್ದಾರೆ. ನಗರಸಭೆ ಆಯುಕ್ತರು ಮತ್ತು ತಹಶೀಲ್ದಾರರ ಸಭೆ ನಡೆಸಿ ಕಠಿಣ ನಿಯಮ ಜಾರಿಗೆ ಆದೇಶ ನೀಡಿದ ಮೇಲೆ ಪರಿಸ್ಥಿತಿ ತಹಬದಿಗೆ ಬಂದಿದೆ. ನಿಯಮ ಪಾಲಿಸಿದರೆ ಸೊಂಕು ಕಡಮೆ ಮಾಡಲು ಅನುಕೂಲವಾಗುತ್ತದೆ ಎಂದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ನೀಡುವುದು ಧರ್ಮದ ಕಾರ್ಯ. ಭದ್ರಾವತಿ ಬಿಜೆಪಿ ಆಯೋಜಿಸಿರುವ ಆಹಾರ ಪೂರೈಕೆ ಕಾರ್ಯಕ್ರಮ ಮಾದರಿಯಾಗಿದೆ. ಸರಕಾರದೊಂದಿಗೆ ಜನರೂ ಕೈಜೋಡಿಸಿದರೆ ಮಾತ್ರ ಕೊರೊನ ಮಹಾಮಾರಿ ಓಡಿಸಲು ಸಾಧ್ಯ ಎಂದು ಹೇಳಿದರು.
ಮುಖಂಡರಾದ ಎಸ್.ದತ್ತಾತ್ರಿ, ಜ್ಯೋತಿಪ್ರಕಾಶ್ಶ್ ಶ್ರೀನಾಥ್ , ಕದಿರೇಶ್, ರುದ್ರೇಶ್. ಮತ್ತಿತರರು ಭಾಗವಹಿಸಿದ್ದರು.
previous post
next post