ರಿಪ್ಪನ್‌ಪೇಟೆ ನಾಡಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಏಳು ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ.
ಮಂಗಳವಾರ ನಾಡಕಚೇರಿಯಲ್ಲಿನ13 ಸಿಬ್ಬಂದಿಗಳಿಗೆ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ 7ಜನರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಸೋಂಕಿತರಲ್ಲಿ ಒಬ್ಬ ಕಂದಾಯ ಇಲಾಖೆಯ ನೌಕರ. ಉಳಿದವರು ಗ್ರಾಮ ಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ನಾಡಕಚೇರಿ ಸೀಲ್ ಡೌನ್
ಪಟ್ಟಣದ ನಾಡ ಕಚೇರಿಯ ಏಳು ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಗ್ರಾಮ ಆಡಳಿತದ ವತಿಯಿಂದ ಇಡೀ ಕಟ್ಟಡಕ್ಕೆ ಔಷದಿಯನ್ನು ಸಿಂಪಡಿಸಿ. ೩ ದಿನಗಳವರೆಗೆ ನಾಡಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.
previous post
next post