ಮದುವೆಯಾಗಿ ಇನ್ನೇನು ಹೊಸಬಾಳು ಕನಸು ಕಾಣುತಿದ್ದ ಮದುಮಗಳನ್ನು ಕೊರೊನಾ ಮಹಾಮಾರಿ ಬಲಿತೆಗೆದುಕೊಂಡ ಹೃದಯ ವಿದ್ರಾವಕ ಘಟನೆ ಶಿವಮೊಗ್ಗದ ಮಲವಗೊಪ್ಪದಲ್ಲಿ ವರದಿಯಾಗಿದೆ.
ಪೂಜಾ (24) ಮೃತ ದುರ್ದೈವಿ. ನಾಲ್ಕು ದಿನಗಳ ಹಿಂದೆ ಪೂಜಾಳನ್ನು ಹರಿಗೆಯ ಮಹೇಶ್ ಎಂಬುವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಎರಡು ದಿನಗಳಿಂದ ಮೈಕೈ ನೋವು ಕಾಣಿಸಿಕೊಂಡಿದ್ದ ಪೂಜಾಳನ್ನು ಶುಕ್ರವಾರ ಮಲವಗೊಪ್ಪದ ಖಾಸಗಿ ಕ್ಲಿನಿಕ್‍ಗೆ ಕರೆತಂದು ಚಿಕಿತ್ಸೆ ಕೊಡಿಸಲಾಯಿತಾದರೂ ಅದು ಫಲಕಾಣದೆ ಅವರು ಅಸುನೀಗಿದರು. ಮರಣದ ನಂತರ ನಡೆಸಿದ್ದ ಪರೀಕ್ಷೆಯಲ್ಲಿ ಪೂಜಾಗೆ ಕೊರೊನ ಇರುವುದು ದೃಢಪಟ್ಟಿದೆ.
previous post