Malenadu Mitra
ರಾಜ್ಯಶಿವಮೊಗ್ಗ

ಮದುವೆಯಾಗಿ ನಾಲ್ಕು ದಿನಕ್ಕೇ ಯುವತಿ ಕೊರೊನಕ್ಕೆ ಬಲಿ

ಮದುವೆಯಾಗಿ ಇನ್ನೇನು ಹೊಸಬಾಳು ಕನಸು ಕಾಣುತಿದ್ದ ಮದುಮಗಳನ್ನು ಕೊರೊನಾ ಮಹಾಮಾರಿ ಬಲಿತೆಗೆದುಕೊಂಡ ಹೃದಯ ವಿದ್ರಾವಕ ಘಟನೆ ಶಿವಮೊಗ್ಗದ ಮಲವಗೊಪ್ಪದಲ್ಲಿ ವರದಿಯಾಗಿದೆ.
ಪೂಜಾ (24) ಮೃತ ದುರ್ದೈವಿ. ನಾಲ್ಕು ದಿನಗಳ ಹಿಂದೆ ಪೂಜಾಳನ್ನು ಹರಿಗೆಯ ಮಹೇಶ್ ಎಂಬುವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಎರಡು ದಿನಗಳಿಂದ ಮೈಕೈ ನೋವು ಕಾಣಿಸಿಕೊಂಡಿದ್ದ ಪೂಜಾಳನ್ನು ಶುಕ್ರವಾರ ಮಲವಗೊಪ್ಪದ ಖಾಸಗಿ ಕ್ಲಿನಿಕ್‍ಗೆ ಕರೆತಂದು ಚಿಕಿತ್ಸೆ ಕೊಡಿಸಲಾಯಿತಾದರೂ ಅದು ಫಲಕಾಣದೆ ಅವರು ಅಸುನೀಗಿದರು. ಮರಣದ ನಂತರ ನಡೆಸಿದ್ದ ಪರೀಕ್ಷೆಯಲ್ಲಿ ಪೂಜಾಗೆ ಕೊರೊನ ಇರುವುದು ದೃಢಪಟ್ಟಿದೆ.

Ad Widget

Related posts

ಹಿಂದುಳಿದ ವರ್ಗಗಳು ಒಟ್ಟಾದಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ

Malenadu Mirror Desk

ಸಾಗರ ಕ್ಷೇತ್ರದಲ್ಲಿ ಹಾಲಪ್ಪರ ಭರದ ಪ್ರಚಾರ

Malenadu Mirror Desk

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಪರಿಶಿಷ್ಟ ವರ್ಗದವರಿಗೆ ಅನ್ಯಾಯ, ಸರಕಾರದ ಯೋಜನೆಗಳ ಜಾರಿಯಲ್ಲಿ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.