Malenadu Mitra
ರಾಜ್ಯ ಶಿವಮೊಗ್ಗ ಸೊರಬ

ಕೊರೋನಾ ಹತೋಟಿಗೆ ಕ್ಷಿಪ್ರಕಾರ್ಯ : ಕುಮಾರ್ ಬಂಗಾರಪ್ಪ

ಸೊರಬ ತಾಲ್ಲೂಕಿನಲ್ಲಿ ಕೊರೋನಾ ಹತೋಟಿಗೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ತಾಲ್ಲೂಕು ಆಡಳಿತ ಕ್ಷಿಪ್ರಗತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕೊರೋನಾ ಸೋಂಕಿತರಿಗೆ ತಾಲ್ಲೂಕಿನಲ್ಲಿ ೫೦ ಆಮ್ಲಜನಕ ಸಹಿತ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ಎಸ್. ಕುಮಾರ್ ಬಂಗಾರಪ್ಪ ಹೇಳಿದರು.
ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣ ಮತ್ತು ಆನವಟ್ಟಿಯಲ್ಲಿ 50ಆಮ್ಲಜನಕ ಸಹಿತ ಬೆಡ್‌ಗಳ ಡೆಡಿಕೇಟೆಡ್ ಕೋವಿಡ್ ಹೆಲ್ತ್ ಕೇರ್ ತೆರೆಯಲಾಗಿದ್ದು, ಕೊರೋನಾ ಸೋಂಕಿತರು ನೆರೆಯ ಶಿಕಾರಿಪುರ, ಸಾಗರ ಅಥವಾ ಶಿವಮೊಗ್ಗಕ್ಕೆ ತೆರಳಬೇಕಿದ್ದ ಸ್ಥಿತಿಯನ್ನು ತಪ್ಪಿಸಿದಂತಾಗಿದೆ. ಜೊತೆಗೆ ಅಲ್ಲಿಯೂ ಸಹ ಹೊರೆ ಕಡಿಮೆಯಾಗಿದೆ. ಪಟ್ಟಣದಲ್ಲಿ110ಜನ ಸಾಮರ್ಥ್ಯದ ಕೊರೋನಾ ಆರೈಕೆ ಕೇಂದ್ರವು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 70 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಉತ್ತಮ ಆಹಾರದ ಜೊತೆಗೆ ಸೂಕ್ತ ವೈದ್ಯಕೀಯ ಸೌಲಭ್ಯವನ್ನು ನೀಡಲಾಗುತ್ತಿದೆ. ಡಿಸಿಎಚ್ ಕೇಂದ್ರಕ್ಕೆ ಶೀಘ್ರದಲ್ಲಿಯೇ ತಜ್ಞ ವೈದ್ಯರ ನೇಮಕಕ್ಕಾಗಿ ಜಿಲ್ಲಾಡಳಿತಕ್ಕೆ ಒತ್ತಾಯಿಸಲಾಗಿದೆ ಎಂದರು.

ಆನವಟ್ಟಿ ಭಾಗದಲ್ಲಿ ಕೊರೋನಾ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಹುಣಸವಳ್ಳಿ 250 ಹಾಸಿಗೆ ಸಾಮರ್ಥವುಳ್ಳ ಕೊರೋನಾ ಆರೈಕೆ ಕೇಂದ್ರವನ್ನು ತೆರೆಯಲಾಗಿದೆ. ಇದರಿಂದ ಜಡೆ, ಆನವಟ್ಟಿ ಹಾಗೂ ಕುಪ್ಪಗಡ್ಡೆ ಹೋಬಳಿಯ ಜನತೆಗೆ ಅನುಕೂಲವಾಗಿದೆ. ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾದ ಸೋಂಕಿತರು ದಾಖಲೆಯ ರೀತಿಯಲ್ಲಿ ಗುಣಮುಖರಾಗಿ ಹೊರಬರುತ್ತಿದ್ದಾರೆ. ಕೊರೋನಾ ಸೋಂಕಿತರು ಅಲಕ್ಷ್ಯ ಮಾಡದೇ ನಿರ್ಭಯವಾಗಿ ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಾಗಬೇಕು. ಈಗಾಗಲೇ ಆಶಾ, ಅಂಗನವಾಡಿ ಮತ್ತು ಸ್ಥಳೀಯ ನೌಕರರು ಸೋಂಕಿತರಿಗೆ ಮತ್ತು ಜನರಿಗೆ ಜಾಗೃತಿಯನ್ನು ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಮುಖ್ಯರಸ್ತೆ ಅಗಲೀಕರಣ

ಪಟ್ಟಣದಲ್ಲಿ ಸುಮಾರು 15 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮುಖ್ಯರಸ್ತೆಯ ಅಗಲೀಕರಣ ಕಾರ್ಯವು ವಾರದಲ್ಲಿ ಆರಂಭವಾಗಲಿದೆ. ನ್ಯಾಯಾಲಯದಲ್ಲಿದ್ದ ಪ್ರಕರಣಗಳು ಇತ್ಯರ್ಥವಾಗಿದ್ದು, ಈಬಗ್ಗೆ ಪಿಡಬ್ಲ್ಯುಡಿ ಮತ್ತು ಪುರಸಭೆಗೆ ಮಾಹಿತಿ ತಲುಪಿದೆ. ಮುಖ್ಯ ರಸ್ತೆಯ ನಿವಾಸಿಗಳಿಗೆ ಪರಿಹಾರ ನೀಡುವ ಕಾರ್ಯವು ನಡೆದಿದೆ. ತಾಲ್ಲೂಕಿನ ರಸ್ತೆಗಳನ್ನು ಗುಂಡಿ ಮುಕ್ತವನ್ನಾಗಿಸುವ ನಿಟ್ಟಿನಲ್ಲಿ ಕಾರ್ಯ ರೂಪಿಸಲಾಗಿದೆ. ಪಟ್ಟಣದಲ್ಲಿ ರಿಂಗ್‌ರೋಡ್ ನಿರ್ಮಿಸುವ ಕಾಮಗಾರಿಯೂ ಶೀಘ್ರದಲ್ಲಿ ಆರಂಭವಾಗಲಿದೆ ಎಂದು ಕುಮಾರ್ ಬಂಗಾರಪ್ಪಮಾಹಿತಿ ನೀಡಿದರು.

ಸೇವಾ ಭಾರತಿಯಿಂದ ಕಿಟ್ ವಿತರಣೆ:

ಕೊರೋನಾದಿಂದ ಆನೇಕ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಅನೇಕರು ಉದ್ಯೋಗ ವಂಚಿತರಾಗಿದ್ದಾರೆ. ಜನರಲ್ಲಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಸೇವಾ ಭಾರತಿ ವತಿಯಿಂದ ಸಮಸ್ಯೆಗೆ ಸಿಲುಕಿರುವ ವರ್ಗದವರನ್ನು ಗುರುತಿಸಿ ಜೂನ್ 3ರಿಂದ ಕಿಟ್ ವಿತರಿಸುವ ಕಾರ್ಯವು ಪಟ್ಟಣ ಸೇರಿದಂತೆ ಆನವಟ್ಟಿ ಮತ್ತು ತಾಳಗುಪ್ಪದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರು ಚಾಲನೆ ನೀಡಲಿದ್ದಾರೆ ಎಂದರು.
ಪುರಸಭೆ ಅಧ್ಯಕ್ಷ ಎಂ.ಡಿ. ಉಮೇಶ್, ಉಪಾಧ್ಯಕ್ಷ ಮಧುರಾಯ್ ಜಿ. ಶೇಟ್, ಪ್ರಮುಖರಾದ ದಿವಾಕರ ಭಾವೆ, ದೇವೇಂದ್ರಪ್ಪ ಚನ್ನಾಪುರ, ಶಿವಕುಮಾರ್ ಕಡಸೂರು, ಸುಧೀರ್ ಪೈ, ಅರುಣ್ ಸೇರಿದಂತೆ ಇತರರಿದ್ದರು.

Ad Widget

Related posts

ಶರಾವತಿ ಮುಳುಗಡೆ ಸಂತ್ರಸ್ಥರಿಂದ ಕಾನೂನು ಭಂಗ ಚಳವಳಿ, ಮಲೆನಾಡು ರೈತ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ತೀ.ನಾ ಶ್ರೀನಿವಾಸ್

Malenadu Mirror Desk

ಬಿಜೆಪಿ ಚುನಾವಣೆ ವ್ಯಾಮೋಹದಿಂದ ಕೊರೊನ ಹೆಚ್ಚಳ: ಕಾಂಗ್ರೆಸ್

Malenadu Mirror Desk

ಪತ್ರಕರ್ತರಿಗೆ ಬದ್ಧತೆ, ಉದ್ಯಮಕ್ಕೆ ವಿಶ್ವಾಸಾರ್ಹತೆ ಮುಖ್ಯ
ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದಿಸಿ ಮಾತನಾಡಿದ ವಾರ್ತಾಇಲಾಖೆ ನಿರ್ದೇಶಕ ಮುರಳೀಧರ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.