ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಕೊರೊನ ಎರಡನೇ ಅಲೆ ಅಬ್ಬರ ಹೆಚ್ಚಾಗಿದ್ದು,ಇಲ್ಲಿನ ಶಂಕಿತರ ಸ್ವಾಬ್ ತೆಗೆದು ಆರ್.ಟಿ.ಪಿಸಿಆರ್ ಪರೀಕ್ಷೆಗೆ ಶಿವಮೊಗ್ಗಕ್ಕೆ ಕಳಿಸುವ ಅನಿವಾರ್ಯತೆ ಇದೆ. ಇದರ ವರದಿ ಬರುವುದು ಮೂರು ದಿನಗಳು ತಡವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಗರದಲ್ಲಿಯೇ ಆರ್‍ಟಿಪಿಸಿಆರ್ ಪ್ರಯೋಗಾಲಯ ಬೇಕೆಂದು ಶಾಸಕರು ಹಾಗೂ ಎಂ.ಎಸ್‍ಎಸ್‍ಐಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಶನಿವಾರ ಮನವಿ ಮಾಡಿದ್ದರು. ಮನವಿ ಪರಿಗಣಿಸಿದ ಮುಖ್ಯಮಂತ್ರಿಗಳೂ ಸ್ಥಳದಲ್ಲಿಯೇ ಪ್ರಯೋಗಾಲಯಕ್ಕೆ ಮಂಜೂರಾತಿ ನೀಡಿದ್ದಾರೆ. ಲ್ಯಾಬ್‍ಗೆ ಬೇಕಾದ ಮೂಲಭೂತ ಸೌಕರ್ಯ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ
previous post
next post