Malenadu Mitra
ರಾಜ್ಯ ಶಿವಮೊಗ್ಗ

ಶಿವಮೊಗ್ಗದಲ್ಲಿ ಕೋವಿಡ್ ವಾರ್ಡ್ ಆಕ್ಸಿಜನ್ ಪೈಪ್ ಲೀಕೇಜ್ , ತಪ್ಪಿದ ಅವಘಡ

ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲಿ ಕೋವಿಡ್ ವಾರ್ಡ್‍ಗೆ ಆಕ್ಸಿಜನ್ ಪೂರೈಸುವ ಪೈಪ್‍ಲೈನ್ ಸೋರಿಕೆ ಆಗಿದ್ದು, ಅದೃಷ್ಟವಶಾತ್ ಯಾವುದೇ ಜೀವ ಹಾನಿಯಾಗಿಲ್ಲ. 200 ಬೆಡ್‍ಗಳಿರುವ ಕೋವಿಡ್ ವಾರ್ಡ್‍ಗೆ ಜೀವಾನಿಲ ಪೂರೈಕೆ ಮಾಡುತಿದ್ದ ಪೈಪ್‍ಲೈನ್‍ನಲ್ಲಿ ಅವಘಡ ಸಂಭವಿಸಿದೆ. ಹೊಗೆಯ ರೂಪದಲ್ಲಿ ಜೀವಾನಿಲ ಹೋಗುತಿದ್ದು, ಇಡೀ ವಾತಾರಣ ಹೊಗೆಯಂತಾಗಿತ್ತು. ಸ್ಥಳಕ್ಕೆ ಬಂದ ಅಗ್ನಿಶಾಮಕದಳ ಪರಿಸ್ಥಿತಿಯನ್ನು ನಿಬಾಯಿಸಿದೆ ಎಂದು ಮೂಲಗಳು ತಿಳಿಸಿವೆ.
6 KLD ಆಕ್ಸಿಜನ್ ಸ್ಟೋರೇಜ್ ಟ್ಯಾಂಕ್ ನಿಂದ ಪೈಪ್ ಲೈನ್ ಮೂಲಕ ಅಸ್ಪತ್ರೆಯ ಕೋರೊನಾ ರೋಗಿಗಳಿಗೆ ಅಕ್ಸಿಜನ್ ಸಪ್ಲೈ ಆಗುತ್ತಿತ್ತು. ಆಕ್ಸಿಜನ್ ಘಟಕ ವಾಲ್ ಬಂದ್ ಮಾಡಿ ಆಕ್ಸಿಜನ್ ಸಪ್ಲೈ ನಿಲ್ಲಿಸಲಾಗಿದೆ. ಸುಮಾರು 200 ಹಾಸಿಗೆಯ ಕೊರೊನಾ ವಾರ್ಡ್‍ಗೆ ಈ ಪೈಪ್ ಲೈನ್ ಮೂಲಕ ಆಕ್ಸಿಜನ್ ಸಪ್ಲೈ ಆಗುತ್ತಿತ್ತು. ತಕ್ಷಣವೇ ಬದಲಿ ಆಕ್ಸಿಜನ್ ಪೈಪ್ ಲೈನ್ ಮೂಲಕ ರೋಗಿಗಳಿಗೆ ಪ್ರಾಣವಾಯು ಪೂರೈಕೆ ಮಾಡಲಾಗುತ್ತಿದೆ.

Ad Widget

Related posts

ಚಾಣಕ್ಯ ಕಪ್ ಕ್ರಿಕೆಟ್ ಪಂದ್ಯ ಆರಂಭ

Malenadu Mirror Desk

ತ್ಯಾಜ್ಯ ನಿರ್ಮೂಲನೆಗೆ ಪಾಕ ಶಾಲೆಯೇ ಪಾಠ ಶಾಲೆ ಆಗಲಿ

Malenadu Mirror Desk

ಶಿಸ್ತು ಬದ್ಧ ಜೀವನಕ್ಕೆ ಕಾನೂನಿನ ಅರಿವು ಅವಶ್ಯಕ : ಹಿರಿಯ ಸಿವಿಲ್ ನ್ಯಾಯದೀಶೆ ಸರಸ್ವತಿ ಕೆ.ಎನ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.