Malenadu Mitra
ತೀರ್ಥಹಳ್ಳಿರಾಜ್ಯಶಿವಮೊಗ್ಗ

ಕವಲೇದುರ್ಗಶ್ರೀ ಕೋವಿಡ್‌ಗೆ ಬಲಿ


ತೀರ್ಥಹಳ್ಳಿ: ಪ್ರತಿಷ್ಠಿತ ಕವಲೇದುರ್ಗ ಮಠದ ಸ್ವಾಮೀಜಿ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸೋಮವಾರ ಶಿವಮೊಗ್ಗದಲ್ಲಿ ನಿಧನರಾದರು.
ಶ್ರೀಗಳು ಕೆಲವು ದಿನಗಳ ಹಿಂದಿನಿಂದ ಕೋವಿಡ್ ಕಾಯಿಲೆಯಿಂದ ಬಳಲುತ್ತಿದ್ದು ತೀರ್ಥಹಳ್ಳಿ ಸರಕಾರಿ ಜೆಸಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು .ಹೆಚ್ಚಿನ ಚಿಕಿತ್ಸೆಗೆ 2 ದಿನಗಳ ಹಿಂದೆ ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಶ್ರೀಗಳು ಅಧ್ಯಯನಶೀಲರು, ಸ್ನೇಹಜೀವಿಯಾಗಿದ್ದರು. ವಿವಿಧ ವಿಶ್ವವಿದ್ಯಾಲಯಗಳಲ್ಲಿ ನಾಲ್ಕು ಪಿಎಚ್.ಡಿ ಪದವಿ ಪುರಸ್ಕೃತರು, ಸಹೃದಯರು, ಒಳಹೊರಗಿಲ್ಲದ ಶುದ್ಧ ಹೃದಯಿಗಳಾದ, ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಲಿಂ. ಡಾ. ಶ್ರೀ ಮಹಾಂತ ಅಪ್ಪಗಳ ಕೃಪಾಪಾತ್ರರಾಗಿದ್ದ ಶ್ರೀ ಗಳು, ಮಠದಲ್ಲಿ ಯಾವ ಸೇವಕರನ್ನೂ ಇಟ್ಟುಕೊಳ್ಳದೆ, ಮಠಕ್ಕೆ ಬಂದ ಭಕ್ತರಿಗೆ ಕೈಯ್ಯಾರೆ ದಾಸೋಹವನ್ನು ಮಾಡಿ ಬಡಿಸುತ್ತಿದ್ದರು.

ಸಿಎಂ ಸಂತಾಪ: ಶ್ರೀಗಳ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಅಕಾಲಿಕ ಮರಣದಿಂದ ಮಲೆನಾಡಿನ ಧಾರ್ಮಿಕ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ ಎಂದು ಸಿಎಂ ಹೇಳಿದ್ದಾರೆ.

Ad Widget

Related posts

ಕಾನೂನು ತಿದ್ದುಪಡಿ ಆಗುವವರೆಗೆ ಅರಣ್ಯ ಸಮಿತಿ ಸಭೆ ಮುಂದೂಡಿ : ಮನವಿ

Malenadu Mirror Desk

ಹುತಾತ್ಮ ಪೊಲೀಸರಿಗೆ ಗೌರವ ನಮ್ಮೆಲ್ಲರ ಆದ್ಯ ಕರ್ತವ್ಯ

Malenadu Mirror Desk

ಜೀವ ಕಾಯ್ವ ವೈದ್ಯರೇ ನಿಮಗೆ ನಮೋ..ನಮಃ…

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.