ಕೊರೋನಾ ಎರಡನೇ ಅಲೆಯಿಂದಾಗಿ ದೇಶ ಮತ್ತು ರಾಜ್ಯ ತತ್ತರಿಸಿ ಹೋಗುವ ಮೂಲಕ ಜನರನ್ನು ಭಯ ಬೀತರನ್ನಾಗಿಸಿದೆ. ಕೊರೋನಾ ನಿಮೂ೯ಲನೆಗೆ ನಾವು ಜಾಗೃತರಾಗಬೇಕು ಮತ್ತು ಜನರಲ್ಲಿ ಭಯ ಹುಟ್ಟಿಸದೆ ಸಕಾಲದಲ್ಲಿ ಚಿಕಿತ್ಸೆ ಪಡೆಯುವುದರೊಂದಿಗೆ ಸಕಾ೯ರಿ ಅಸ್ಪತ್ರೆಗಳಲ್ಲಿ ತಜ್ಞ ವೈದ್ಯಾಧಿಕಾರಿಗಳ ಸಲಹೆ ಮತ್ತು ಚಿಕಿತ್ಸೆ ಪಡೆಯಲು ಮುಂದಾಗಿ ಎಂದು ಶಾಸಕ ಹಾಗೂ ಎಂ.ಎಸ್.ಐ.ಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.
ರಿಪ್ಪನ್‌ಪೇಟೆ ಪಟ್ಟಣದ ಕನಾ೯ಟಕ ಪ್ರಾಂತೀಯ ಹಿಂದು ಮಹಾಸಭಾ ಅವರಣದಲ್ಲಿ ಪ್ರೇರಣಾ ಎಜುಕೇಷನ್ ಟ್ರಸ್ಟ್ ಮತ್ತು ಸೇವಾ ಭಾರತಿ ವತಿಯಿಂದ ಅಯೋಜಿಸಲಾದ ಕೊರೋನಾ ವಾರಿಯರ್ಸಗಳಾದ ಅಶಾ. ಅಂಗನವಾಡಿ ಮತ್ತು ಅರೋಗ್ಯ ಹಾಗೂ ಪತ್ರಕತ೯ರಿಗೆ ಕಿಟ್‌ಯನ್ನು ವಿತರಿಸಿ ಮಾತನಾಡಿ ಕೊರೋನಾ ನಿಯಂತ್ರಣದ ಮುಂಚೂಣಿ ಸೈನಿಕರಾಗಿ ಕತ೯ವ್ಯ ನಿವ೯ಹಿಸುತ್ತಿರುವ ಆಶಾ ಅಂಗನವಾಡಿ ಮತ್ತಿತರ ಕಾಯ೯ಕತ೯ರುಗಳ ಶ್ರಮಕ್ಕೆ ಸರಿಯಾದ ಪ್ರತಿಫಲ ಸಿಗದಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿ ಈ ಬಗ್ಗೆ ಶಾಸನ ಸಭೆಯಲ್ಲಿ ದ್ವನಿಎತ್ತಿ ಶೀಘ್ರ ಪರಿಹಾರ ಕಲ್ಪಿಸುವ ಬಗ್ಗೆ ಭರವಸೆ ನೀಡಿದರು.
ಸಂಕಷ್ಟದಲ್ಲಿರುವ ಕೊರೋನಾ ವಾರಿಯರ್‌ಗಳ ನೆರವಿಗಾಗಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರರವರು ಅಹಾರದ ಕಿಟ್‌ನಲ್ಲಿರುವ ಪಡಿತರ ಕ್ಕೆ ಸಂಪೂಣ೯ ಹಣಕಾಸಿನ ನೆರವು ನೀಡಿದ್ದಾರೆ.ಇದರ ವಿತರಣೆಯನ್ನು ಅಚ್ಚುಕಟ್ಟಾಗಿ ನಿವ೯ಹಿಸುತ್ತಿರುವ ಸಂಘಪರಿವಾರದವರ ಕಾಯ೯ವನ್ನು ಶಾಸಕರು ಪ್ರಶಂಸಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ ವಹಿಸಿದ್ದರು.
ಸಭೆಯಲ್ಲಿ ತಾಲ್ಲೂಕ್ ಬಿಜೆಪಿ ಅಧ್ಯಕ್ಷ ಬಿಳಗೋಡು ಗಣಪತಿ,ತಾ.ಪಂ.ಮಾಜಿ ಅಧ್ಯಕ್ಷ ವೀರೇಶ್ ಅಲುವಳ್ಳಿ,ಗ್ರಾಮ ಪಂಚಾಯ್ತಿ ಅಧ್ಯೆಕ್ಷೆ ಮಂಜುಳ ಕೇತಾಜಿ೯ರಾವ್,ಮುಖಂಡರಾದ ಅರ್.ಟಿ.ಗೋಪಾಲ,ನಾಗಾಜು೯ನಸ್ವಾಮಿ,ಗೀರೀಶ್ ಜಂಬಳ್ಳಿಜಿ.ಡಿ.ಮಲ್ಲಿಕಾಜು೯ನ,ಮೆಣಸೆ ಅನಂದ,ಕೆ.ಬಿ.ಹೂವಪ್ಪ,ಇನ್ನಿತರ ಹಾಜರಿದ್ದರು.
previous post