ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನದಿಂದ ಸೋಮವಾರ 4 ಮಂದಿ ಜೀವಕಳೆದುಕೊಂಡಿದ್ದು, ಹೊಸದಾಗಿ 399 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಈವರೆಗೆ ಕೊರೊನದಿಂದ ಸತ್ತವರ ಸಂಖ್ಯೆ 918 ಕ್ಕೇರಿದೆ. 610 ಮಂದಿ ಗುಣಮುಖರಾಗಿದ್ದಾರೆ.
ಶಿವಮೊಗ್ಗ ತಾಲೂಕಿನಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದ್ದು 128 ಮಂದಿಗೆ ಸೋಂಕು ತಗುಲಿದೆ. ಭದ್ರಾವತಿಯಲ್ಲಿ 87, ತೀರ್ಥಹಳ್ಳಿಯಲ್ಲಿ 47, ಶಿಕಾರಿಪುರದಲ್ಲಿ 52, ಸಾಗರದಲ್ಲಿ 39,ಹೊಸನಗರ 11,ಸೊರಬದಲ್ಲಿ 23 ಹಾಗೂ ಇತರೆ ಜಿಲ್ಲೆಯ 12 ಮಂದಿಯಲ್ಲಿ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಪ್ರಸ್ತುತ 4976 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ
next post