ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಪ್ರಧಾನಿ ದೇವೇಗೌಡರ ಹೆಸರನ್ನು ನಾಮಕರಣ ಮಾಡಬೇಕೆಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್ ಎ ಚಾಬುಸಾಬ್ ಮತ್ತು ವರದರಾಜ್ ಮನವಿ ಮಾಡಿದ್ದಾರೆ.
ಪ್ರಧಾನ ಮಂತ್ರಿಯಂತಹ ಪ್ರತಿಷ್ಠಿತ ಹುದ್ದೆಗೇರುವ ಮೂಲಕ ರಾಜ್ಯದ ಮತ್ತು ಕನ್ನಡಿಗರ ಘನತೆ ಹೆಚ್ಚಿಸಿದ್ದಾರೆ. ರಾಜ್ಯದ ಬಡವರು,ರೈತರ ನಾಯಕ ಹಾಗೂ ಮಣ್ಣಿನಮಗ ದೇವೇಗೌಡರ ಹೆಸರನ್ನು ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡುವುದು ಸೂಕ್ತವಾದುದು. ಈ ಬಗ್ಗೆ ಸಂಸದ ರಾಘವೇಂದ್ರ ಅವರು ಕೇಂದ್ರಸರಕಾರದ ಗಮನ ಸೆಳೆಯಬೇಕು ಎಂದು ಚಾಬುಸಾಬ್ ಮನವಿ ಮಾಡಿದ್ದಾರೆ