ತಾಳಗುಪ್ಪ-ಮೈಸೂರು ರೈಲಿಗೆ ಸಿಕ್ಕಿ ಯುವಕನೊಬ್ಬ ಧಾರುಣ ಸಾವಿಗೀಡಾಗಿದ್ದಾನೆ. ಯುವಕನ ರುಂಡ ಮತ್ತು ಮುಂಡ ಬೇರಾಗಿದ್ದು, ಆತ್ಮಹತ್ಯೆಯೊ ಕೊಲೆಯೋ ಇನ್ನಷ್ಟೇ ತಿಳಿಯಬೇಕಾಗಿದೆ. ಸಾಗರ ತಾಲೂಕಿನ ಗುಡ್ಡೇಕೌತಿಯಲ್ಲಿ ರೈಲ್ವೆ ಹಳಿ ಮೇಲೆ ಮೃತದೇಹ ಇರುವ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು ಶವಪರೀಕ್ಷೆಗೆ ಕಳಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರ ತನಿಖೆಯಿಂದ ಸತ್ಯ ಹೊರಬರಬೇಕಿದೆ. ನೀಲಿ ಬಣ್ಣದ ರೈನ್ ಕೋಟ್ ಹಾಗೂ ಪ್ಯಾಂಟ್ ಧರಿಸಿದ್ದ ಯುವಕ ಗಡ್ಡ ಬಿಟ್ಟಿದ್ದ.