Malenadu Mirror
ರಾಜ್ಯ ಶಿವಮೊಗ್ಗ

ಮತ ನೀಡುವ ಮೂಲಕ ಗೀತಾರ ಉಡಿತುಂಬಿ, ಹಾರನಹಳ್ಳಿಯ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಆಯನೂರು ಮಂಜುನಾಥ್‌ ಮನವಿ

ಶಿವಮೊಗ್ಗ: ಮನೆಮಗಳು ಗೀತಾ ತವರಿಗೆ ಬಂದಿದ್ದಾಳೆ. ತವರಿಗೆ ಬಂದ ಹೆಣ್ಣು ಮಕ್ಕಳನ್ನು ಬರಿಗೈಲಿ ಕಳಿಸುವುದು ನಮ್ಮ ಸಂಪ್ರದಾಯವಲ್ಲ. ಆಕೆಗೆ ಮತದಾನ ಮಾಡುವ ಮೂಲಕ ಉಡಿತುಂಬಿ ತವರಿನ ಸಿರಿಯನ್ನು ಮೆರೆಯಬೇಕು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್‌ ಮನವಿ ಮಾಡಿದರು. ಶಿವಮೊಗ್ಗ ತಾಲೂಕು ಹಾರನಹಳ್ಳಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಸಾರ್ವಜನಿಕ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಶಿವಮೊಗ್ಗ ಗ್ರಾಮಾಂತರ ಪ್ರದೇಶದಲ್ಲಿ ಇಂದು ಹಲವು ಗ್ರಾಮಗಳ ರೈತರ ಹೊಲದಲ್ಲಿ ಹಸಿರು ನಳನಳಿಸುವ ತುಂಗಾ ಏತ ನೀರಾವರಿ ಆಗಿದ್ದರೆ, ಅದಕ್ಕೆ ಅಡಿಗಲ್ಲು ಹಾಕಿದವರು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು. ಯೋಜನೆ ಅನುಷ್ಠಾನಕ್ಕೆ ನಾವೆಲ್ಲ ಹೋರಾಟ ಮಾಡಿದ್ದೆವು. ಆದರೆ ಅದಕ್ಕೆ ಬೀಜ ಬಿತ್ತಿದವರು ಬಂಗಾರಪ್ಪ.
. ಜಿಲ್ಲೆಯಲ್ಲಿ ಮುಳುಗಡೆ ಸಂತ್ರಸ್ತರ ಸಮಸ್ಯೆ ನುಂಗಲಾಗದ ತುತ್ತಾಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಗೀತಾ ಅವರು ಶಾಸ್ವತ ಪರಿಹಾರ ಸೂಚಿಸುವರು. ಅವರಿಗೆ ಬೆಂಬಲ ನೀಡುವ ಮೂಲಕ ಬಂಗಾರಪ್ಪರಿಗೆ ಆದ ಸೋಲಿನ ಸೇಡು ತೀರಿಸಿಕೊಳ್ಳಬೇಕು ಎಂದು ಹೇಳಿದರು.

ಸಚಿವ ಮಧುಬಂಗಾರಪ್ಪ ಮಾತನಾಡಿ, ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ನೀಡುವ ಮೂಲಕ ಬಂಗಾರಪ್ಪ ಅವರು ರೈತರ ಬಾಳಿಕ ಬೆಳಕಾಗಿದ್ದರು. ಶಿವಮೊಗ್ಗ ಗ್ರಾಮಾಂತರ ಪ್ರದೇಶದಲ್ಲಿ ಅನೇಕ ಯೋಜನೆ ತಂದಿದ್ದಾರೆ. ಬರಗಾಲ ಬಂದಾಗ ಆಯನೂರಿನಲ್ಲಿ ಸಾವಿರಾರು ರೈತರಿಗೆ ಬಿಜದ ಭತ್ತ, ಜೋಳ ನೀಡಿದ್ದರು. ಅವರು ಬಡವರ ಕಾಳಜಿ, ಜನಪರ ಚಿಂತನೆಯಲ್ಲಿ ನಾವೂ ರಾಜಕಾರಣ ಮಾಡುತ್ತೇವೆ. ಗೀತಕ್ಕ ಅವರ ಜನರ ದ್ವನಿಯಾಗಿ ಕೆಲಸ ಮಾಡುತ್ತಾರೆ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.  

ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಮಾತನಾಡಿ, ರೈತರಿಗೆ ಬೆಂಬಲ ಬೆಲೆ ಸಿಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತೇನೆ. ರಾಜ್ಯ ಮಟ್ಟದಲ್ಲಿ ಸಚಿವ ಮಧು ಬಂಗಾರಪ್ಪ ರೈತರ ಕಷ್ಟಗಳಿಗೆ ನೆರವಾದರೆ, ಕೇಂದ್ರದ ಹಂತದಲ್ಲಿ ರೈತರ ಕಷ್ಟಗಳಿಗೆ ಸ್ಪಂದಿಸಲು ನಾನು ಶ್ರಮಿಸುತ್ತೇನೆ. ಅದೇ ಕಾರಣಕ್ಕೆ ನನಗೆ ಮತ ನೀಡಿ. ಒಮ್ಮೆ ಅವಕಾಶ ಕೊಟ್ಟು ನೋಡು ತಂದೆಯ ತತ್ವ ಸಿದ್ಧಾಂತಗಳಂತೆಯೇ ನಾನೂ ಕೆಲಸ ಮಾಡುವೆ ಎಂದು ಕೋರಿದರು

ನಟ ಶಿವರಾಜ ಕುಮಾರ್ ಮಾತನಾಡಿ, ಜನರು ಬದಲಾವಣೆ ಬಯಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಆದರೆ, ಈ ಯೋಜನೆಗಳಿಂದ ಬಡವರಿಗೆ ಸಹಾಯ ಆಗ ಬೇಕು. ಆಗ ಮಾತ್ರ ಸರ್ಕಾರದ ಯೋಜನೆಗಳಿಗೆ ಬೆಲೆ ಸಿಗಲಿದೆ. ಈ ನಿಟ್ಟಿನಲ್ಲಿ ಯೋಜನೆಗಳು ಜನಸಾಮಾನ್ಯರಿಗೆ ನೆರವಾಗಿವೆ ಎಂದು ನಾನು ಬಯಸುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಬಳಿಕ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಲಾಗಿದೆ. ಇಲ್ಲಿ ಬಿಜೆಪಿ ಪಕ್ಷವನ್ನು ಕಿತ್ತು ಎಸೆಯಬೇಕಿದೆ. ಅದೇ ಕಾರಣಕ್ಕೆ ಗೀತಾ ಅವರಿಗೆ ಬೆಂಬಲಿಸೋಣ ಎಂದರು.
 ಕಾಂಗ್ರೆಸ್ ಮುಖಂಡ ಶ್ರೀನಿವಾಸ ಕರಿಯಣ್ಣ ಮಾತನಾಡಿ, ಗ್ಯಾರಂಟಿ ಯೋಜನೆಗಳು ಜನಪರವಾಗಿವೆ. ಅದೇ ಕಾರಣಕ್ಕೆ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರಿಗೆ ಮತ ನೀಡಿ ಆಯ್ಕೆ ಮಾಡೋಣ ಎಂದು ಕರೆ ನೀಡಿದರು.

ರೈತರ ಸಮಸ್ಯೆ ಪರಿಹಾರಕ್ಕೆ ಗೀತಕ್ಕ ಶ್ರಮಿಸುವರು: ಮಧು ಬಂಗಾರಪ್ಪ

ಮುಳುಗಡೆ ಸಂತ್ರಸ್ತರು ಹಾಗೂ ಬಗರ್‌ಹುಕುಂ  ರೈತರ ಸಮಸ್ಯೆ ಬಗೆ ಹರಿಸುವ ಕೀಲಿ ಕೈ  ಕೇಂದ್ರದಲ್ಲಿದೆ. ಆದರೆ, ೧೦ ವರ್ಷದಿಂದ ಆಡಳಿತ ನಡೆಸುತ್ತಿರುವ ಸ್ಥಳೀಯ ಸಂಸದರು, ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅದೇ ಉದ್ದೇಶಕ್ಕೆ ಗೀತಾ ಶಿವರಾಜ ಕುಮಾರ್ ಅವರಿಗೆ ಮತ ನೀಡಿ ಗೆಲ್ಲಿಸಬೇಕಿದೆ. ಗೀತಕ್ಕ ಗೆದ್ದರೆ, ಜಿಲ್ಲೆಯ ಶೋಷಿತ ವರ್ಗಕ್ಕೆ  ಖಂಡಿತ ನ್ಯಾಯ ಸಿಗಲಿದೆ. ಇದಕ್ಕೆ ನಾನು ಗ್ಯಾರಂಟಿ ನೀಡುತ್ತೇನೆ ಎಂದು ಸಚಿವ ಮಧುಬಂಗಾರಪ್ಪ ಬರವಸೆ ನೀಡಿದರು.

ವಿಧಾನ ಪರಿಷತ್ ಮಜಿ ಸದಸ್ಯ ಆರ್.ಪ್ರಸನ್ನಕುಮಾರ್, ಕಲಗೋಡು ರತ್ನಾಕರ್‌,  ಬಲ್ಕೀಷ್‌ ಬಾನು, ಭೋವಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ಪ್ರಮುಖರಾದ ಎಂ.ಶ್ರೀಕಾಂತ್‌, ಜಿ.ಡಿ.ಮಂಜುನಾಥ್, ಎನ್.ರಮೇಶ್,  ಜಿ.ಪಲ್ಲವಿ, ವೈ.ಎಚ್.ನಾಗರಾಜ್, ಸಂತೆಕಡೂರು ವಿಜಯಕುಮಾರ್‌, ಕೆ.ಎಲ್‌.ಜಗದೀಶ್‌, ಚಂದ್ರಭೂಪಾಲ್, ಮಲೆಶಂಕರ ರಮೇಶ, ಇಕ್ಕೇರಿ ರಮೇಶ್, ಅನಿತಾ ಕುಮಾರಿ. ಸಿ.ಹನುಮಂತಪ್ಪ ಮತ್ತಿತರರಿದ್ದರು. ಶಾಂತವೀರನಾಯ್ಕ್‌ ಕಾರ್ಯಕ್ರಮ ನಿರೂಪಿಸಿದರು. 

ಹಿಂದೆ ತವರಿಗೆ ಹೆಣ್ಣುಮಕ್ಕಳು, ಮೊಮ್ಮಕ್ಕಳು ಬಂದರೆ ಅವರಿಗೆ ಚಾಕ್ಲೆಟ್‌ ಕೊಡಲು ಮನೆಯ ಯಜಮಾನಿಯ ಬಳಿ ಹಣ ಇರುತ್ತಿರಲಿಲ್ಲ. ಸೊಸೆ ಕಣ್ತಪ್ಪಿಸಿ ಮಗನ ಬಳಿ ಹಣ ಕೇಳಬೇಕಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಸಿದ್ದರಾಮಯ್ಯರ ಸರಕಾರ ಪ್ರತಿ ಯಜಮಾನಿಗೆ ತಿಂಗಳಿಗೆ ಎರಡು ಸಾವಿರ ಹಣ ಕೊಡುತ್ತಿದೆ. ಎಲ್ಲಾ ಮನೆಯ ಹೆಣ್ಣು ಮಕ್ಕಳೂ ಸ್ವಾಭಿಮಾನದಿಂದ ಜೀವನ ನಡೆಸಬಹುದು. ಮತ್ತು ತವರಿಗೆ ಬಂದ ಮೊಮ್ಮಕ್ಕಳಿಗೆ ಉಪಚರಿಸಬಹುದು.


ಆಯನೂರು ಮಂಜುನಾಥ್‌


ರಾಜ್ಯಸರಕಾರ ಗ್ಯಾರಂಟಿ ಯೋಜನೆಗಳ ಮೂಲಕ ಮನೆಮನೆ ತಲುಪಿದೆ. ಜನಪರ ಕೆಲಸ ಮಾಡುತ್ತಿರುವ ಸರಕಾರಕ್ಕೆ ಬೆಂಬಲ ವ್ಯಕ್ತಪಡಿಸುವ ಅವಕಾಶ ಲೋಕಸಭೆ ಚುನಾವಣೆ ರೂಪದಲ್ಲಿ ಬಂದಿದೆ. ಗೀತಾ ಶಿವರಾಜ್‌ ಕುಮಾರ್‌ ಅವರನ್ನು ಗೆಲ್ಲಿಸಿ ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರಿಗೆ ಶಕ್ತಿ ನೀಡೋಣ.

  • ಆರ್.ಎಂ.ಮಂಜುನಾಥ್ ಗೌಡ, ಎಂಎಡಿಬಿ ಅಧ್ಯಕ್ಷ
Ad Widget

Related posts

ಹೊಸ ವರ್ಷದ ಶುಭಾಶಯಗಳು

Malenadu Mirror Desk

ಸಮಗ್ರ ಅಭಿವೃದ್ಧಿಗೆ ನನ್ನ ಜತೆಗೆ ಅಧಿಕಾರಿಗಳು ಕೈಜೋಡಿಸಬೇಕು: ಮಧು ಬಂಗಾರಪ್ಪ

Malenadu Mirror Desk

ಶಿವಮೊಗ್ಗದಲ್ಲಿ 657 ಸೋಂಕು,6 ಸಾವು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.