Malenadu Mitra
ಶಿವಮೊಗ್ಗ ಸಾಗರ

ಕಾರು ಪಲ್ಟಿ- ಸ್ಥಳದಲ್ಲೇ ಲೋಕೋಪಯೋಗಿ ಇಲಾಖೆ ಅಧಿಕಾರಿ ಸಾವು.

ಕಾರವಾರ : ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡುವ ಕುರಿತು ಉಸ್ತುವಾರಿ ಸಚಿವರ ಸಭೆಗೆ ಬರುತ್ತಿದ್ದ ಅಧಿಕಾರಿಗಳ ಕಾರು ಪಲ್ಟಿಯಾಗಿ ಸ್ಥಳದಲ್ಲೇ ಸಿದ್ದಾಪುರ ತಾಲೂಕಿನ ಲೋಕೋಪಯೋಗಿ ಇಲಾಖೆಯ ಎ‌ಇ.ಇ ಸಾವುಕಂಡು ನಾಲ್ಕು ಜನ ಅಧಿಕಾರಿಗಳು ಗಂಭೀರ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ಬಾಳೆಗುಳಿ ಬಳಿ ನಡೆದಿದೆ.
ಸಿದ್ದಾಪುರ ತಾಲೂಕಿನ ಲೋಕೋಪಯೋಗಿ ಇಲಾಖೆ ಎಇಇ ,ಮುದುಕಣ್ಣನವರ್(58) ಮೃತ ಪಟ್ಟ ಅಧಿಕಾರಿಯಾಗಿದ್ದು ,ಗಂಭೀರ ಗಾಯಗೊಂಡವರನ್ನು ಅಂಕೋಲ ಹಾಗೂ ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಸಚಿವ ಶಿವರಾಮ್ ಹೆಬ್ಬಾರ್ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ನೆರೆ ‌ಹಾಗೂ ಕೊರೋನಾ ಸಂಬಂಧ ಅಧಿಕಾರಿಗಳ ಸಭೆ ಇದಾಗಿದ್ದು ,ಸಭೆಗೆ ಲೋಕೋಪಯೋಗಿ ಇಲಾಖೆಯ ಶಿರಸಿ, ಸಿದ್ದಾಪುರ ಹಾಗೂ ಮುಂಡಗೋಡ ತಾಲೂಕಿನ ಇಂಜಿನಿಯರ್ ಗಳು ಒಂದೇ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಅಂಕೋಲದ ಬಾಳೆಗುಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಅನಾಹುತ ಸಂಭವಿಸಿದೆ.


Ad Widget

Related posts

ಗ್ಯಾರಂಟಿ ಪ್ರಚಾರದಲ್ಲೇ ಸರಕಾರದ ಕಾಲಹರಣ: ಸಂಸದ ರಾಘವೇಂದ್ರ ಆರೋಪ

Malenadu Mirror Desk

ಕಸ ವಿಲೇವಾರಿ ಘಟಕಕ್ಕೆ ಅರಣ್ಯ ನಾಶ: ಪ್ರತಿಭಟನೆ

Malenadu Mirror Desk

ಪ್ರತಿ ತಾಲೂಕಲ್ಲೂ ಆಮ್ಲಜನಕ ಘಟಕ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.