ಹಿನ್ನೀರ ಸಂತ್ರಸ್ತರ ನೆಟ್ವರ್ಕ್ ಸಮಸ್ಯೆ ಕುರಿತ ಸಭೆ
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾಗರ ಶಾಸಕ ಹರತಾಳು ಹಾಲಪ್ಪ ಅವರು ಸೋಮವಾರ ನೆಟ್ವರ್ಕ್ ಸಮಸ್ಯೆ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಕರೂರು, ಭಾರಂಗಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ, ಶಾಲಾ ಆವರಣಗಳಲ್ಲಿ ಆಫ್ಟಿಕಲ್ ಫೈಬರ್ ಸ್ಥಾಪಿಸುವ ಮೂಲಕ ಅಂತರ್ಜಾಲ ಸಂಪರ್ಕ ಕಲ್ಪಿಸಲು ಕ್ರಮ ವಹಿಸಬೇಕು.
ನೆಟ್ ವರ್ಕ್ ಸಮಸ್ಯೆ ಇರುವ ಗ್ರಾಮಗಳಲ್ಲಿ ಖಾಸಗಿ ಕಂಪನಿಯವರು ¿ŠೈýŠಸಿý Šುý ¡³್ಢ ್ಢ್ಜೈಬ ಮಲ್ಟಿ ಟವರ್ ಅಳವಡಿಸುವುದು. ಗ್ರಾ.ಪಂ ಹಾಗೂ ಸರ್ಕಾರಿ ಜಾಗಗಳಲ್ಲಿ ಕಡಿಮೆ ಖರ್ಚಿನಲ್ಲಿ ಮಿನಿ ಟವರ್ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕ್ಷೇತ್ರ ವ್ಯಾಪ್ತಿಯ ಕಟ್ಟಿನಕಾರು, ಹೊನಗಲು, ಅಡ್ಡೇರಿ, ಬುಕ್ಕಿವರೆ, ಹಾರೋಹಿತ್ಲು ಗ್ರಾಮಗಳಲ್ಲಿ ಸಾಧ್ಯತೆ ಇರುವ ಕಡೆ ನೂತನ ಟವರ್ ಅಳವಡಿಸಲು ನಿರ್ದೇಶಿಸಿದ್ದು. ಶೀಘ್ರದಲ್ಲಿ ಕಾಮಗಾರಿ ನೆಡೆಸಲು ಕ್ರಮ ಕೈಗೊಳ್ಳುವ ಬಗ್ಗೆ ಸೂಚಿಸಲಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಸಿಇಒ ವೈಶಾಲಿ, ಖಾಸಗಿ ನೆಟ್ ವರ್ಕ್ ಕಂಪನಿ ಮತ್ತುಬಿಎಸ್‍ಎನ್‍ಎಲ್ ಮುಖ್ಯಸ್ಥರು, ಪ್ರಸನ್ನ ಕೆರೆಕೈ, ನಾಗರಾಜ್ ಬೊಬ್ಬಿಗೆ, ವಿನಾಯಕ್ ರಾವ್ ಮತ್ತಿತರರು ಉಪಸ್ಥಿತರಿದ್ದರು.