ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರಕ್ಕೆ ಗುರುವಾರ ತಾರಾ ಮೆರುಗು ಬಂದಿತ್ತು. ವಿಶ್ವ ಆನೆಗಳ ದಿನದ ಅಂಗವಾಗಿ ಅಲ್ಲಿನ ಆನೆಗಳಿಗೆ ಅಲಂಕಾರ ಮಾಡಲಾಗಿತ್ತು. ಕೋವಿಡ್ ಕಾರಣದಿಂದ ಸರಳ ಆಚರಣೆ ಮಾಡಲಾಗಿತ್ತು. ಈ ಆನೆ ಬಿಡಾರಕ್ಕೆ ನಟಿ ಮತ್ತು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧ ಗುರುವಾರ ಭೇಟಿ ನೀಡಿದರು.
ಆನೆ ಹಬ್ಬದ ಅಂಗವಾಗಿ ತಾರಾ ಅನುರಾಧ ಅವರು ಆನೆ ಬಿಡಾರಕ್ಕೆÁಗಮಿಸಿದ್ದರು. ಆನೆಗಳಿಗೆ ಪೂಜೆ ಸಲ್ಲಿಸಿ, ಹಣ್ಣುಗಳನ್ನು ನೀಡಿದರು. ಅಲ್ಲದೆ ಆನೆಗಳ ಜೊತೆಗೆ ನಿಂತು ಫೋಟೊ ಕ್ಲಿಕ್ಕಿಸಿಕೊಂಡು, ಸಂಭ್ರಮಿಸಿದರು.
ಇನ್ನು, ಆನೆ ಬಿಡಾರದ ಕುರಿತು ಮಾಹಿತಿ ಪಡೆದುಕೊಂಡ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧ, ಮಾವುತ, ಕಾವಾಡಿಗಳಿಗೆ ಒದಗಿಸುತ್ತಿರುವ ಸೌಲಭ್ಯ, ಆನೆಗಳ ನಿರ್ವಹಣೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸಿಸಿಎಫ್ ರವಿಶಂಕರ್, ಡಿಸಿಎಫ್ ಐ.ಎಂ.ನಾಗರಾಜ್, ಆರ್.ಎಫ್.ಒ ಮಂಜುನಾಥ್, ವೈದ್ಯಾಧಿಕಾರಿ ಡಾ.ವಿನಯ್ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.
next post