ಜಿಲ್ಲೆ ಹಾಗೂ ಹೊರಜಿಲ್ಲೆಯ ವಿವಿಧೆಡೆ ಕಳ್ಳತನ ಮಾಡಿರುವ ಸುಮಾರು ೧೦ ಲಕ್ಷ ಮೌಲ್ಯದ ೨೨ ಬೈಕ್ ಮತ್ತು ಸ್ಕೂಟರ್‌ಗಳನ್ನು ವಶಪಡಿಸಿಕೊಂಡಿರುವ ಶಿವಮೊಗ್ಗ ತುಂಗಾನಗರ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಶಿವಮೊಗ್ಗನಗರದ ನಿವಾಸಿಗಳಾದ ಸುಹೇಲ್ ಪಾಶಾ,ಮೊಹಮದ್ ಹ್ಯಾರಿಸ್, ಫಜಲು ಹಾಗೂ ಸಾಹಿಲ್ ಶೇಟ್ ಬಂಧಿತ ಆರೋಪಿಗಳಾಗಿದ್ದಾರೆ. ಎಸ್ಪಿ ಲಕ್ಷಿö್ಮಪ್ರಸಾದ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ತುಂಗಾನಗರ ಪೊಲೀಸ್ ಠಾಣೆಯ ಪಿಐ ದೀಪಕ್ ಎಂ.ಎಸ್ . ಪಿಎಸ್‌ಐಗಳಾದ ಈರೇಶ್ , ದೂದ್ಯಾನಾಯ್ಕ , ಭಾರತಿ ಬಿ.ಹೆಚ್ ಹಾಗೂ ಸಿಬ್ಬಂದಿಗಳಾದ ಟೀಕಪ್ಪ, ಉಮೇಶ್ , ಕಿರಣ್ ಮೋರೆ , ಅರುಣ್ ಕುಮಾರ್ ಸಂದೀಪ್, ರಾಜು ಕೆ ಆರ್ , ಲಂಕೇಶಕುಮಾರ್, ಅರುಣ್ ಕುಮಾರ್, ಕಾಂತರಾಜ ರಾಜೇಶಗೌಡ ಭಾಗವಹಿಸಿದ್ದರು.
previous post
next post