Malenadu Mitra
ರಾಜ್ಯ ಶಿವಮೊಗ್ಗ ಸಾಗರ

ಬ್ಯಾಕೋಡು ಶಾಲೆ ಚಂದಗಾಣಿಸಿದ ಕನ್ನಡ ಮನಸುಗಳು

ಹಳ್ಳಿಗಾಡಿನ ಗ್ರಾಮಗಳ ಸರಕಾರಿ ಶಾಲೆ ಅಭಿವೃದ್ಧಿ ಅಭಿಯಾನ


ಅದೊಂದು ನಾಡು ಕಟ್ಟುವ ಕೆಲಸ. ಸರಕಾರಿ ಶಾಲೆ ಎಂದರೆ ಮೂಗುಮುರಿಯುವ ಈ ಕಾಲದಲ್ಲಿ ಸೌಲಭ್ಯ ವಂಚಿತ ಹಳ್ಳಿಗಾಡಿನ ಶಾಲೆಗಳ ಅಭಿವೃದ್ಧಿ ಮಾಡುವ ಮತ್ತು ಆ ಮೂಲಕ ಗುಣಾತ್ಮಕ ಶಿಕ್ಷಣಕ್ಕಾಗಿ ಕೆಲಸ ಮಾಡುವ ಈ ಹುಡುಗರು ನಿಜಕ್ಕೂ ಮಾದರಿ.
ಹೌದು. ಬೆಂಗಳೂರಿನ ಕನ್ನಡ ಮನಸುಗಳು ಪ್ರತಿಷ್ಠಾನದ ಸುಮಾರು ೧೫೦ ಜನರ ತಂಡ ರಾಜ್ಯದ ಕುಗ್ರಾಮಗಳ ಸರಕಾರಿ ಶಾಲೆಗಳನ್ನು ಅಂದಗಾಣಿಸುವ ಮತ್ತು ಮಕ್ಕಳಲ್ಲಿ ಶಿಕ್ಷಣ ಜಾಗೃತಿಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಉನ್ನತ ಶಿಕ್ಷಣ ಪಡೆದು ಬೇರೆ ಕಂಪನಿಗಳಲ್ಲಿ ಕೆಲಸ ಮಾಡುವ ಸೇವಾ ಮನೋಭಾವದ ಸದಸ್ಯರು ಕೂಡಿಕೊಂಡು ಈ ನಾಡು ಕಟ್ಟುವ ಕಾಯಕ ಮಾಡುತ್ತಿದ್ದಾರೆ.


ಈ ತಂಡ ಇತ್ತೀಚೆಗೆ ಸಾಗರ ತಾಲೂಕು ಶರಾವತಿ ಹಿನ್ನೀರು ಪ್ರದೇಶವಾದ ಬ್ಯಾಕೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜನಮೆಚ್ಚುವ ಕಾಯಕ ಮಾಡಿದರು. ಶಾಲೆ ಆವರಣ ಸ್ವಚ್ಚತೆ, ಕಾಂಪೌAಡ್ ನಿರ್ಮಾಣ, ಸುಣ್ಣ ಬಣ್ಣ ಬಳಿಯುವುದು ಸೇರಿದಂತೆ ಶಾಲೆಯನ್ನು ಸುಂದರಗೊಳಿಸಿದರು. ಸ್ಥಳೀಯರ ಸಹಭಾಗಿತ್ವದಲ್ಲಿ ನಡೆದ ಈ ಶ್ರಮದಾನ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದರು. ಇದೇ ಭಾಗದ ಕೊಡಸವಳ್ಳಿ ಶಾಲೆಯಲ್ಲಿ ಶ್ರಮದಾನ ಮಾಡಿದ ಕನ್ನಡ ಮನಸುಗಳು ತಂಡ ಗ್ರಾಮಸ್ಥರ ಪ್ರಶಂಸೆಗೆ ಪಾತ್ರವಾಯಿತು.

ದೊಡ್ಡ ನಗರಗಳಲ್ಲಿ ಕೆಲಸ ಮಾಡುವ ಯುವಜನರು ಹಳ್ಳಿಗಳಲ್ಲಿನ ಸಮಸ್ಯೆ ಅರಿತು ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುವುದು ನಿಜಕ್ಕೂ ಮಾದರಿ. ಕನ್ನಡ ಮನಸುಗಳು ತಂಡದಲ್ಲಿ ವಿಭಿನ್ನ ಕಂಪೆನಿಗಳಲ್ಲಿ ಕೆಲಸ ಮಾಡುವ ಜನರು ಒಂದಾಗಿ ಬಂದು ಗ್ರಾಮೀಣ ಭಾಗದ ಶಿಕ್ಷಣಕ್ಕೆ ನೆರವಾಗುವ ಅಭಿಯಾನ ನಡೆಸುವುದು ಪುಣ್ಯದ ಕೆಲಸ. ಇವರ ಸಾರ್ಥಕ ಸೇವೆ ಉಳಿದವರಿಗೂ ಸ್ಫೂರ್ತಿಯಾಗಲಿ. ನಮ್ಮ ಊರಿನ ಜನ ಮತ್ತು ಶಾಲಾಭಿವೃದ್ಧಿ ಸಮಿತಿಯಿಂದ ಈ ತಂಡಕ್ಕೆ ತುಂಬುಹೃದಯದ ಕೃತಜ್ಞತೆಗಳು

ಮೂಕಪ್ಪ ಹಾರಿಗೆ, ಮುಖ್ಯ ಶಿಕ್ಷಕರು ,ಬ್ಯಾಕೋಡು ಸರಕಾರಿ ಶಾಲೆ

Ad Widget

Related posts

ಕಾಶೀನಾಥ್ ನಾಯ್ಕ್ ಅವರನ್ನು ಸನ್ಮಾನಿಸಿದ ಕ್ರೀಡಾ ಸಚಿವ

Malenadu Mirror Desk

ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ : ಕೆ.ಎಸ್.ಈಶ್ವರಪ್ಪ

Malenadu Mirror Desk

ಅಡಕೆ ಮಾನ ಕಳೆದ ಕೇಂದ್ರ ಸರಕಾರ, ರೋಗ , ಬೆಲೆ ಕುಸಿತದಿಂದ ರೈತರಿಗೆ ಸಂಕಷ್ಟ
ಸಚಿವ ಸಂಸದರ ತಾತ್ಸಾರ: ಕಾಂಗ್ರೆಸ್ ಮುಖಂಡ ರಮೇಶ್ ಹೆಗ್ಡೆ ಆರೋಪ,

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.