ಶಿವಮೊಗ್ಗ ನಗರದ ಬಾಪೂಜಿನಗರ ಬಡಾವಣೆಯ ಗಂಗಾಮತಸ್ಥ ಹಾಸ್ಟೆಲ್ ಎದುರು ಗುರುವಾರ ರಾತ್ರಿ ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿದೆ.
ಗೋಪಾಳದ ಸ್ವಾಮಿವಿವೇಕಾನಂದ ಬಡಾವಣೆಯ ಸಂತೋಷ್(30) ಕೊಲೆಯಾದ ಯುವಕ. ಪರಿಚಿತರ ಮನೆಗೆ ಬೈಕ್ ನಲ್ಲಿ ಹೋಗುತಿದ್ದಾಗ ಏಳು ಮಂದಿ ದುಷ್ಕರ್ಮಿಗಳು ಏಕಾಏಕಿ ದಾಳಿಮಾಡಿದ್ದಾರೆನ್ನಲಾಗಿದೆ. ಮೃತ ಯುವಕ ಕಾರ್ ಷೋರೂಂನಲ್ಲಿ ಕೆಲಸ ಮಾಡುತ್ತಿದ್ದನು.ಬಾಪೂಜಿನಗರಕ್ಕೆ ಆಗಾಗ ಬರುತಿದ್ದ ಆತನ ಮೇಲೆ ಪೂರ್ವನಿಯೋಜಿತ ಯೋಜನೆಯಂತೆ ದಾಳಿ ಮಾಡಿರಬಹುದೆಂದು ಶಂಕಿಸಲಾಗಿದೆ.
ಮೃತನ ತಂದೆ ನೀಡಿದ ದೂರಿನಂತೆ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲಿಸ್ ತಂಡ ರಚಿಸಲಾಗಿದೆ