Malenadu Mitra
ರಾಜ್ಯ ಶಿವಮೊಗ್ಗ

ಇತಿಹಾಸ ತಜ್ಞಖಂಡೋಬರಾವ್ ಅವರಿಗೆ ನಾಗರೀಕ ಸನ್ಮಾನ

ಇತಿಹಾಸ ತಜ್ಞ, ಅಪರೂಪದ ನಾಣ್ಯ ಸಂಗ್ರಾಹಕ, ಬಹುಮುಖ ವ್ಯಕ್ತಿತ್ವದ ಹೆಚ್. ಖಂಡೋಬರಾವ್ ಅವರನ್ನು ಅಭಿನಂದನಾ ಸಮಿತಿಯಿಂದ ಅಕ್ಟೋಬರ್ ೧೯ ರಂದು ಬೆಳಗ್ಗೆ ೧೦ ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಅಭಿನಂದಿಸಲಾಗುವುದು ಎಂದು ಸಮಿತಿಯ ಕಾರ್ಯದರ್ಶಿ ಹೆಚ್.ವಿ. ರಮೇಶ್ ಬಾಬು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್. ಖಂಡೋಬರಾವ್, ಅವರನ್ನು ಸನ್ಮಾನಿಸುವುದರ ಜೊತೆಗೆ “ಅಮೂಲ್ಯ ಸಿರಿ’ ಎಂಬ ಅಭಿನಂದನಾ ಗ್ರಂಥವನ್ನು ಕೂಡ ಲೋಕಾರ್ಪಣೆ ಮಾಡಲಾಗುವುದು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ಬಾರ್ಕೂರು ಮಹಾಸಂಸ್ಥಾನದ ಡಾ. ಶ್ರೀ ವಿಶ್ವಸಂತೋಷಭಾರತಿ ಸ್ವಾಮೀಜಿ ವಹಿಸಲಿದ್ದು, ಕಾರ್ಯಕ್ರಮವನ್ನು ಸಚಿವ ಕೆ.ಎಸ್. ಈಶ್ವರಪ್ಪ ಉದ್ಘಾಟಿಸಲಿದ್ದಾರೆ. ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಅಶೋಕ್ ನಾಯ್ಕ್, ಕುವೆಂಪು ವಿವಿ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ, ಸೂಡಾ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್, ಸಮಿತಿಯ ಕಾರ್ಯಾಧ್ಯಕ್ಷ ಟಿ.ಆರ್. ಅಶ್ವತ್ಥನಾರಾಯಣಶೆಟ್ಟಿ, ಉದ್ಯಮಿ ಮಾರುತಿ ರಾವ್ ಶಿಂಧೆ ಉಪಸ್ಥಿತರಿರುವರು. ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.


ಅಮೂಲ್ಯ ಸಿರಿಯೇ ಆದ ಖಂಡೋಬರಾವ್ ಅವರಿಗೆ ಈಗ ೮೨ ವರ್ಷ. ಆದರೂ ಅವರು ಕ್ರಿಯಾಶೀಲರಾಗಿದ್ದಾರೆ. ನಾಣ್ಯ ಸಂಗ್ರಾಹಕರಾಗಿ ಇತಿಹಾಸ ಸಂಶೋಧಕರಾಗಿ, ಕಲಾರಸಿಕರಾಗಿ ತಮ್ಮ ಜೀವನವನ್ನು ಕಳೆದ ಅವರು ಹೆಂಡತಿಯ ನೆನಪಿಗಾಗಿ ಅಮೂಲ್ಯ ಶೋಧ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಿದರು. ಇತಿಹಾಸದ ದೂರದೃಷ್ಠಿ ಅವರಲ್ಲಿದೆ. ಸುಮಾರು ೨ ಎಕರೆ ವಿಸ್ತಾರದಲ್ಲಿ ಅವರ ಅಮೂಲ್ಯಶೋಧ ಸಂಗ್ರಹಾಲಯವಿದ್ದು, ಒಂದು ವಿಶ್ವವಿದ್ಯಾಲಯ ಮಾಡಬಹುದಾದಷ್ಟು ಕೆಲಸವನ್ನು ಅವರು ಮಾಡಿದ್ದಾರೆ. ಅವರ ಅಭಿನಂದನೆಯ ಹಿನ್ನಲೆಯಲ್ಲಿ ಅಮೂಲ್ಯ ಸಿರಿ ಎಂಬ ಅಭಿನಂದನಾ ಗ್ರಂಥ ಲೋಕಾರ್ಪಣೆ ಮಾಡಲಾಗುವುದು. ಇದರಲ್ಲಿ ಸುಮಾರು ೪೨ ಲೇಖನಗಳಿವೆ ಎಂದು ತಿಳಿಸಿದರು.


ಈ ಕಾರ್ಯಕ್ರಮಕ್ಕೆ ಅವರ ಆತ್ಮೀಯರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ನಾಣ್ಯ ಸಂಗ್ರಾಹಕ ಎಸ್. ಚಂದ್ರಕಾಂತ್, ಸಮಿತಿಯ ಪದಾಧಿಕಾರಿಗಳಾದ ಎಸ್.ಬಿ. ಅಶೋಕ್ ಕುಮಾರ್, ಕಿರಣ್ ಆರ್. ದೇಸಾಯಿ, ಡಾ.ಮ. ಸಕಲೇಶ್, ಸುಮಾ ಮೂರ್ತಿ ಮುಂತಾದವರಿದ್ದರು.

ಅಮೂಲ್ಯ ಸಿರಿಯೇ ಆದ ಖಂಡೋಬರಾವ್ ಅವರಿಗೆ ಈಗ ೮೨ ವರ್ಷ. ಆದರೂ ಅವರು ಕ್ರಿಯಾಶೀಲರಾಗಿದ್ದಾರೆ. ನಾಣ್ಯ ಸಂಗ್ರಾಹಕರಾಗಿ ಇತಿಹಾಸ ಸಂಶೋಧಕರಾಗಿ, ಕಲಾರಸಿಕರಾಗಿ ತಮ್ಮ ಜೀವನವನ್ನು ಕಳೆದ ಅವರು ಹೆಂಡತಿಯ ನೆನಪಿಗಾಗಿ ಅಮೂಲ್ಯ ಶೋಧ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಿದರು.


Ad Widget

Related posts

ಆಯುಷ್ಮಾನ್ ಅಡಿ ಕೋವಿಡ್ ಚಿಕಿತ್ಸೆ. ಯಾವುದಕ್ಕೆ ಎಷ್ಟು ಹಣ ಗೊತ್ತಾ ?

Malenadu Mirror Desk

ಶಿವಮೊಗ್ಗದಲ್ಲಿ 166 ಮಂದಿಗೆ ಸೋಂಕು, ಒಂದು ಸಾವು

Malenadu Mirror Desk

ಮೈಲುಗಲ್ಲಾಗಲಿರುವ ಸರಕಾರಿ ನೌಕರ ಭವನ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.