ರೌಡಿಶೀಟರ್ ನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಶುಕ್ರವಾರ ತಡರಾತ್ರಿ ಶಿವಮೊಗ್ಗ ವಾದಿ-ಎ ಹುದಾ ಬಡಾವಣೆಯಲ್ಲಿ ನಡೆದಿದೆ.
ಮೊಹಮ್ಮದ್ ಜೈನಾದ್(೨೩) ಹತ್ಯೆಯಾದ ರೌಡಿಶೀಟರ್. ಬೇರೆ ಬಡಾವಣೆಯಲ್ಲಿ ವಾಸವಿದ್ದ ಇತ್ತೀಚೆಗಷ್ಟೇ ವಾದಿ-ಎ ಹುದಾ ಬಡಾವಣೆಗೆ ಸ್ಥಳಾಂತರಗೊಂಡಿದ್ದ. ಶುಕ್ರವಾರ ತಡರಾತ್ರಿ ಈತ ಮನೆ ಬಳಿ ನಿಂತು ಮಾತನಾಡುತ್ತಿದ್ದಾಗ ಇಬ್ಬರು ದುಷ್ಕರ್ಮಿಗಳು ಏಕಾಏಕಿ ದಾಳಿ ಮಾಡಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಕಳೆದ ಮಾರ್ಚ್ ೧೨ ರಂದು ಮೊಹಮ್ಮದ್ ನಕ್ಕೀ ಅಲಿ ಹಾಗೂ ಆತನ ಸ್ನೇಹಿತರು ತುಂಗಾನಗರದ ಮಸೀದಿ ಹತ್ತಿರ ಮಾತನಾಡುತ್ತಿದ್ದಾಗ ಮೊಹಮ್ಮದ್ ಜೈನಾದ್ ಆತನ ಸ್ನೇಹಿತರು ಮೊಹಮ್ಮದ್ ನಕ್ಕೀ ಆಲಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.
ಶುಕ್ರವಾರ ಸಂಜೆ ನಕ್ಕೀ ಆಲಿ ಮತ್ತು ಮೊಹಮ್ಮದ್ ಜೈನಾದ್ ಮುಖಾಮುಖಿಯಾಗಿ ಭೇಟಿಯಾದಾಗ ಇಬ್ಬರ ಮಧ್ಯೆ ಗಲಾಟೆಯಾಗಿದ್ದು, ನಕ್ಕೀ ಆಲಿ ಮತ್ತು ಆತನ ಸ್ನೇಹಿತ ಅಬು ಸೇರಿಕೊಂಡು ಜೈನಾದ್ ಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ ಎಂದು ಮೃತನ ತಂದೆ ತುಂಗಾ ನಗರ ಠಾಣೆಗೆ ದೂರು ನೀಡಿದ್ದಾರೆ.
ಜೈನಾದ್ ವಿರುದ್ದ ಹಲವು ಪ್ರಕರಣಗಳಲ್ಲಿ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ತುಂಗಾನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
previous post