Malenadu Mitra
ರಾಜ್ಯಶಿವಮೊಗ್ಗ

ರೈತರ ಪಂಪ್‌ಸೆಟ್‌ಗಳಿಗೆ ಹಗಲು ವಿದ್ಯುತ್ ಕೊಡಲು ಆಗ್ರಹ

ಸರ್ಕಾರದ ಆದೇಶದಂತೆ ರೈತರ ಪಂಪ್‌ಸೆಟಗಳಿಗೆ ಹಗಲು 7 ಗಂಟೆ ತ್ರೀಫೇಸ್ ವಿದ್ಯುಚ್ಛಕ್ತಿ ನೀಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ , ಹಸಿರು ಸೇನೆ ವತಿಯಿಂದ ಮಾ.10 ರಂದು ರೈಲ್ವೆ ನಿಲ್ದಾಣದ ಬಳಿ ಇರುವ ಕೆಇಬಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಎಚ.ಆರ್. ಬಸವರಾಜಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಐಪಿ ಸೆಟ್ ಗಳಿಗೆ ಹಗಲು ಹೊತ್ತಿನಲ್ಲಿ ೭ ಗಂಟೆ ವಿದ್ಯುತ್ ನೀಡಬೇಕು. ಇಲ್ಲದಿದ್ದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುತ್ತದೆ ಎಂದು ಆದೇಶ ಮಾಡಿದ್ದರೂ ಕೂಡ ಹಗಲು 4-5 ಗಂಟೆಯು ತ್ರಿಪೇಸ್ ವಿದ್ಯುತ್ ನೀಡುತ್ತಿಲ್ಲ. ಇದರಿಂದಾಗಿ ಬೆಳೆಗಳು ಒಣಗುತ್ತಿವೆ ಎಂದರು.
ಟಿಸಿಗಳು ಸುಟ್ಟು ಹೋದರೆ ತ್ವರಿತವಾಗಿ ಟಿಸಿ ಅಳವಡಿಸುವಂತೆ ಆದೇಶವಿದ್ದರೂ ಆ ಕೆಲಸ ಮಾಡುತ್ತಿಲ್ಲ. ಟಿಸಿ ಸುಟ್ಟು ಹೋದ 72 ಗಂಟೆಗಳಲ್ಲಿ ಬದಲಾಯಿಸಿ ಕೊಡಬೇಕು. ಅವಶ್ಯಕತೆ ಇರುವ ಕಡೆಗಳಲ್ಲಿ ಟಿಸಿಗಳನ್ನು ಅಳವಡಿಸಬೇಕು. ಶಿವಮೊಗ್ಗದ ಆಯನೂರು ಹಾಗೂ ಸಾಗರದ ತಾಲೂಕಿನ ಕೆಲ ಕಡೆಗಳಲ್ಲಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆ ಮಾಡಲು ಆದೇಶವಾಗಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
೬೫ ಕೆವಿ ಟಿಸಿಗಳು ದಾಸ್ತಾನು ಇಲ್ಲವೆಂದು ಹೇಳಲಾಗುತ್ತಿದೆ. ಈ ರೀತಿ ಕಾರಣ ನೀಡುವುದು ಬಿಟ್ಟುತಕ್ಷಣ ಟಿಸಿ ತರಿಸಲು ಮುಂದಾUಬೇಕು., ಐಪಿ ಸೆಟ್ ಅಕ್ರಮ ಸಕ್ರಮಕ್ಕೆ 10 ಸಾವಿರ ಠೇವಣಿ, 5 ಎಚ್‌ಪಿಗೆ 7500 ರೂ. ನಿಗದಿಮಾಡಿದ್ದರೂ ಕೂಡ ಗುತ್ತಿಗೆದಾರರು 25 ಸಾವಿರ ಹಣ ಪಡೆಯುತ್ತಿzರೆ. ಎಂದು ಆರೋಪಿಸಿದರು.
ರಾಜ್ಯ ಉಪಾಧ್ಯಕ್ಷ ಹಿಟ್ಟೂರು ರಾಜು, ಜಿ ಪ್ರಧಾನ ಕಾರ್ಯದರ್ಶಿ ಇ.ಬಿ. ಜಗದೀಶ್, ಜಿ.ಎನ್.ಪಂಚಾಕ್ಷರಿ, ಸಿ. ಚಂದ್ರಪ್ಪ,ಕೆ. ರಾಘವೇಂದ್ರ, ಡಿ.ಎಚ್. ರಾಮಚಂದ್ರಪ್ಪ, ಪಿ.ಡಿ.ಮಂಜಪ್ಪ ಇದ್ದರು

Ad Widget

Related posts

ಶಿವಮೊಗ್ಗ ಜಿಲ್ಲೆಯಲ್ಲಿ ದ್ವಿಶತಕ ದಾಟಿದ ಕೊರೊನ: ಹಾಟ್‌ಸ್ಪಾಟ್ ಆಯಿತೇ ಸ್ಮಾರ್ಟ್ ಸಿಟಿ

Malenadu Mirror Desk

ಈಡಿಗ ಸಮುದಾಯದ 26 ಉಪ ಪಂಗಡಗಳನ್ನು ಒಗ್ಗೂಡಿಸುವ ಅಗತ್ಯವಿದೆ : ಸತ್ಯಜಿತ್‌ ಸುರತ್ಕಲ್

Malenadu Mirror Desk

ತಂಬಾಕು ನಿಯಂತ್ರಣ ತಪಾಸಣೆ ನಿರಂತರ ಕೈಗೊಳ್ಳಬೇಕು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.