Malenadu Mitra
ರಾಜ್ಯ ಶಿವಮೊಗ್ಗ

ಎಂಟು ತಿಂಗಳ ಹಿಂದೆಯೇ ಅಶುಭದ ಸುಳಿವು ನೀಡಿದ್ದ ಯೋಗೇಂದ್ರ ಗುರೂಜಿ, ರಾಘವೇಂದ್ರ ರಾಜ್‌ಕುಮಾರ್ ಅವರಿಗೆ ಸಂದೇಶ ಕಳುಹಿಸಿದ್ದರು

ರಾಜರತ್ನ ಪುನೀತ್‌ರಾಜ್‌ಕುಮಾರ್ ಅಕಾಲಿಕ ನಿಧನ ಕರುನಾಡನ್ನೇ ಶೋಕ ಸಾಗರದಲ್ಲಿ ಮುಳುಗಿಸಿದೆ. 25 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಅವರ ಅಂತಿಮ ದರ್ಶನ ಪಡೆದಿದ್ದಾರೆ.ಭಾರತೀಯ ಚಲನಚಿತ್ರರಂಗವೇ ಕಂಬನಿ ಮಿಡಿದಿದೆ. ಕಂಠೀರವ ಸ್ಟುಡಿಯೊದ ಅವರ ಸಮಾದಿ ಸ್ಥಳಕ್ಕೆ ಅಭಿಮಾನಿಗಳು ಬರುತ್ತಲೇ ಇದ್ದಾರೆ. ಮೇರು ವ್ಯಕ್ತಿತ್ವದ ಮೂಲಕ ಕನ್ನಡಿಗರ ಮನೆಮಗನಾಗಿದ್ದ ಅಪ್ಪು ಹೃದಯವಂತಿಕೆ ಅವರ ಸಾವಿನ ಬಳಿಕವೇ ನಾಡಿನ ಜನಕ್ಕೆ ಗೊತ್ತಾಗಿ ಅವರ ಬಗ್ಗೆ ಎಲ್ಲರೂ ವಿನೀತ ಭಾವನೆ ತೋರುವಂತಾಗಿದೆ. ಅವರು ಮಾಡಿದ ಸಾಮಾಜಿಕ ಹಾಗೂ ಮಾನವೀಯ ಕಾರ್ಯಗಳು ಎಡಗೈಯಲ್ಲಿ ಕೊಟ್ಟದ್ದು, ಬಲಗೈಗೆ ಗೊತ್ತಾಗಬಾರದು ಎಂಬ ನಾಣ್ಣುಡಿಯಂತೆಯೇ ಇರುವುದು ಈಗ ಹೊರಜಗತ್ತಿಗೆ ಗೊತ್ತಾಗುತ್ತಿದೆ.

ಅನಾಹುತದ ಸುಳಿವು


ಅಪ್ಪು ಅಗಲಿಕೆಯ ಬಳಿಕ ಅವರ ಸಾವಿನ ಕುರಿತು ಹಲವು ಮಿಥ್ ಗಳು ಕೇಳಿಬರುತ್ತಿವೆ. ಲೋಹಿತ್ ಎನ್ನುವ ಹೆಸರನ್ನು ಜೋತಿಷಿಗಳ ಸಲಹೆಯಂತೆ ಡಾ.ರಾಜ್ ಕುಟುಂಬ ಪುನೀತ್ ಎಂದು ಬದಲಾಯಿಸಿತ್ತು. ಸತ್ಯಹರಿಶ್ಚಂದ್ರನ ಮಗ ಲೋಹಿತಾಶ್ವ ಅಲ್ಪಾಯುಷಿ ಆ ಕಾರಣಕ್ಕಾಗಿ ಲೋಹಿತ್ ಹೆಸರು ಪುನಿತ್ ಆಗಿತ್ತು ಎನ್ನಲಾಗಿದೆ. ಇತ್ತೀಚೆಗೆ ಪುನೀತ್ ರಾಜ್‌ಕುಮಾರ್ ಅವರು ಮಂತ್ರಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭ ಅವರು ಮಾತನಾಡುವಾಗ ರಾಯರ ಫೋಟೊ ಅಲುಗಾಡಿತ್ತು ಮತ್ತು ವೀಣೆ ಜಾರಿತ್ತು ಎಂಬ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಬಿತ್ತರವಾಗಿದ್ದವು ಈ ಸಂಕೇತಗಳು ಕೆಡುಕಿನ ಮುನ್ಸೂಚನೆ ನೀಡಿದ್ದವು ಎಂಬ ಚರ್ಚೆಗಳು ನಡೆಯುತ್ತಿವೆ.

ಸುಳಿವು ನೀಡಿದ್ದ ಯೋಗೇಂದ್ರಶ್ರೀ ..


ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಸಾರಗನ ಜಡ್ಡು ಶ್ರೀ ಕಾರ್ತಿಕೇಯ ಕ್ಷೇತ್ರದ ಶ್ರೀ ಯೋಗೇಂದ್ರ ಗುರುಗಳು ದೊಡ್ಮನೆ ಕುಟುಂಬದಲ್ಲಿ ಅನಾಹುತ ಸಂಭವಿಸಬಹುದಾದ ಮುನ್ಸೂಚನೆಯನ್ನು ಎಂಟು ತಿಂಗಳ ಹಿಂದೆಯೇ ನೀಡಿದ್ದರೆನ್ನಲಾಗಿದೆ. ರಾಘವೇಂದ್ರರಾಜ್‌ಕುಮಾರ್ ಕುಟುಂಬದೊಂದಿಗೆ ಅನೋನ್ಯವಾಗಿರುವ ಯೋಗೇಂದ್ರ ಶ್ರೀಗಳು ಯುವರಾಜ್‌ಕುಮಾರ್ ಅವರ ಸಿನೆಮಾ ಸಂಬಂಧಿತ ಮುಹೂರ್ತಕ್ಕೆ ಹೋಗಿದ್ದರು. ಆ ಸಂದರ್ಭದಲ್ಲಿಯೇ ಶ್ರೀಗಳಿಗೆ ದೊಡ್ಮನೆಯಲ್ಲಿ ಅವಘಡ ಸಂಭವಿಸಬಹುದಾದ ಸಂಕೇತ ಸಿಕ್ಕಿತ್ತಂತೆ. ಸಿನೆಮಾ ಕಾರ್ಯಕ್ರಮ ಮುಗಿಸಿ ಬಂದವರೆ, ಮನೆಯಲ್ಲಿ ಅನಾಹುತ ನಡೆಯುವ ಸಂಕೇತವಾಗಿದೆ. ಎಚ್ಚರದಿಂದಿರಿ ಮತ್ತು ಡಾ.ಶಿವರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್ ಅವರಿಗೂ ತಿಳಿಸಿ ಎಂದು ಹೇಳಿದ್ದರಂತೆ.. ಏನು ಕಾಕತಾಳೀಯವೊ ಗೊತ್ತಿಲ್ಲ ಕನ್ನಡದ ಕಣ್ಮಣಿ ಇಲ್ಲವಾಗಿದೆ.

ಸಿನಿಮಾ ಆರಂಭೋತ್ಸವಕ್ಕೆ ರಾಘಣ್ಣರ ಮನೆಗೆ ಹೋಗಿ ಪೂಜೆ ನೆರವೇರಿಸಿದ್ದೆ. ಅಲ್ಲಿಂದ ಬಂದ ಮೇಲೆ ಅಶುಭ ಸಂಭವಿಸುವ ಸುಳಿವು ಸಿಕ್ಕಿತ್ತು. ವಾಟ್ಸ್ ಆ್ಯಪ್ ಸಂದೇಶದಲ್ಲಿಯೂ ರಾಘವೇಂದ್ರ ರಾಜ್‌ಕುಮಾರ್ ಅವರಿಗೆ ತಿಳಿಸಿದ್ದೆ. ವಿಧಿ ಲಿಖಿತ ಏನಿತ್ತೊ ಆ ಕುಟುಂಬದಲ್ಲಿ ಅನಾಹುತ ಆಗಿಹೋಗಿದೆ. ಅಪ್ಪಟ ಪ್ರತಿಭಾವಂತ ನಟ ಹಾಗೂ ಒಬ್ಬ ಹೃದಯವಂತನನ್ನು ಕನ್ನಡ ನಾಡು ಕಳೆದುಕೊಂಡಿದೆ. ಇದು ತುಂಬಾ ನೋವಿನ ಸಂಗತಿ

-ಶ್ರೀ ಯೋಗೇಂದ್ರಗುರೂಜಿ, ಕಾರ್ತಿಕೇಯ ಕ್ಷೇತ್ರ, ಸಾರಗನಜಡ್ಡು

Ad Widget

Related posts

ಚಾನಲ್ ದಂಡೆ ಒಡೆದು ಜಮೀನು ಜಲಾವೃತ : ರೈತರ ಆಕ್ರೋಶ

Malenadu Mirror Desk

ಡೆಲ್ಲಿ ಇಂಟರ್‌ನ್ಯಾಷನಲ್ ಶಾಲೆಯಲ್ಲಿ 1 ರೂಪಾಯಿಗೆ ಪ್ರವೇಶ, ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಮಕ್ಕಳಿಗಾಗಿ ವಿನೂತನ ಯೋಜನೆ

Malenadu Mirror Desk

ಗಾಂಧೀಜಿ ಪ್ರತಿಮೆ ಧ್ವಂಸ ,ಹೊಳೆಹೊನ್ನೂರಲ್ಲಿ ಬಿಗುವಿನ ವಾತಾವರಣ, ಆರೋಪಿಗಳ ಬಂಧನಕ್ಕೆ ಸಾರ್ವಜನಿಕರ ಆಗ್ರಹ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.