ಬ್ರಹ್ಮಶ್ರೀ ನಾರಾಯಣಗುರು ಧರ್ಮಪರಿಪಾಲನಾ ಸಂಘ ಹಾಗೂ ಮಂಗಳೂರಿನ ಬೃಹ್ಮಶ್ರೀ ನಾರಾಯಣಗುರು ವೈದಿಕ ಸಮಿತಿ ಆಶ್ರಯದಲ್ಲಿ ಜನವರಿ 9 ರಂದು ಶಿವಮೊಗ್ಗ ಜಿಲ್ಲೆ ಸಾಗರದ ಈಡಿಗರ ಭವನದಲ್ಲಿ ವಿಶ್ವಶಾಂತಿಗಾಗಿ ವಿಶ್ವಶಾಂತಿಯಾಗ ಹಾಗೂ ಧಾರ್ಮಿಕ ಸಮಾವೇಶ ಆಯೋಜಿಸಲಾಗಿದೆ ಎಂದು ಬ್ರಹ್ಮಶ್ರೀ ನಾರಾಯಣಗುರು ಧರ್ಮಪರಿಪಾಲನಾ ಸಂಘದ ರಾಜ್ಯಾದ್ಯಕ್ಷ ಸೈದಪ್ಪಗುತ್ತೇದಾರ್ ಹೇಳಿದರು.
ಶಿವಮೊಗ್ಗದಲ್ಲಿ ಸೋಮವಾರ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಈಡಿಗ,ಬಿಲ್ಲವ, ನಾಮಧಾರಿ,ದೀವರು,ತೀಯಾ ಸಮಾಜದ 26 ಒಳಪಂಗಡಗಳ 501 ಅರ್ಚಕರು ಯಾಗದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾಜದ ಜನರಲ್ಲಿ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕವಾಗಿ ಜಾಗೃತಿ ಮೂಡಿಸಲು ಈ ಧಾರ್ಮಿಕ ಸಮಾವೇಶ ನಡೆಸಲಾಗುತ್ತಿದೆ. ಈಡಿಗ ಸಮಾಜದ ಎಲ್ಲ ಉಪಪಂಗಡಗಳ ಜನರನ್ನು ಒಂದುಗೂಡಿಸುವ ಮತ್ತು ಉಪಪಂಗಡಗಳ ನಾಯಕರು ಮತ್ತು ಧಾರ್ಮಿಕ ಗುರುಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಸೈದಪ್ಪ ಹೇಳಿದರು.
ಗೌರಿಗದ್ದೆ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ, ಈಡಿಗ ಮಹಾ ಸಂಸಾಗರದಲ್ಲಿ ವಿಶ್ವಶಾಂತಿಯಾಗ
ಬಿ.ಎಸ್.ಎನ್ ಡಿಪಿ ಯಿಂದ ಧಾರ್ಮಿಕ ಸಮಾವೇಶಸ್ಥಾನದ ನಿಯೋಜಿತ ಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿ, ಕಾರ್ತಿಕೇಯ ಕ್ಷೇತ್ರ ಯೋಗೇಂದ್ರ ಗುರೂಜಿ, ನಾರಾಯಣ ಗುರು ಮಹಾ ಸಂಸ್ಥಾನದ ರೇಣುಕಾನಂದ ಸ್ವಾಮೀಜಿ, ಸಿಗಂದೂರು ಧರ್ಮದರ್ಶಿ ಡಾ.ರಾಮಪ್ಪ, ಸಾಯಿ ಈಶ್ವರ್ ಗುರೂಜಿ ಸೇರಿದಂತೆ ಸಮಾಜದ ಹಲವು ಗುರುಗಳ ದಿವ್ಯಸಾನ್ನಿದ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ.
ಬೆಳಗ್ಗೆ 10.30 ಕ್ಕೆ ಆರಂಭವಾಗುವ ಸಮಾವೇಶವನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆ ವಹಿಸುವರು. ಸಚಿವೆ ಶಶಿಕಲಾ ಜೊಲ್ಲೆ ಪುಷ್ಪಾರ್ಚನೆ ಮಾಡುವರು. ಶಾಸಕ ಹರತಾಳು ಹಾಲಪ್ಪ ಅವರು ಬ್ರಹ್ಮ ವಿದ್ಯಾಲಯ ಯೋಜನೆಗೆ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ನಾಡಿನ ಅನೇಕ ಗಣ್ಯರು ಭಾಗವಹಿಸುವರು ಈ ಕಾರ್ಯಕ್ರಮಕ್ಕೆ ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಅವರು ಮನವಿ ಮಾಡಿದರು.
ಈ ಸಂದರ್ಭ ಬಿ.ಎಸ್.ಎನ್.ಡಿ.ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂತರಾಜ್ ಆರ್ಯ, ಜಿಲ್ಲಾಧ್ಯಕ್ಷ ನಾಗರಾಜ್ ಕೈಸೋಡಿ, ಉಪಾಧ್ಯಕ್ಷ ಕೃಷ್ಣಮೂರ್ತಿ ಎನ್., ಶಿವಮೊಗ್ಗ ಗ್ರಾಮಾಂತರ ಅಧ್ಯಕ್ಷ ಮಂಜಪ್ಪ ಕೆ., ಶಿಕಾರಿಪುರ ತಾಲೂ ಅಧ್ಯಕ್ಷ ಬಸವರಾಜ್ ಬನ್ನೂರು, ಮಂಜಪ್ಪ ಬ್ಯಾಡನಾಳ, ಮಾಧ್ಯಮ ಸಲಹೆಗಾರ ದಿನೇಶ್ ದೊಡ್ಮನೆ ಮತ್ತಿತರರು ಹಾಜರ