Malenadu Mitra
ರಾಜ್ಯಶಿವಮೊಗ್ಗ

ಬಿಜೆಪಿ ಒಬಿಸಿ ಮೋರ್ಚಾದ ಕಾರ್ಯಕಾರಿಣಿ

ರಾಜ್ಯ ಬಿಜೆಪಿ ಒಬಿಸಿ ಮೋರ್ಚಾದ ಕಾರ್ಯಕಾರಿಣಿ ಸಭೆ ನಗರದ ಶುಭಮಂಗಳ ಸಮುದಾಯ ಭವನದಲ್ಲಿ ಜ. 4 ಮತ್ತು5 ರಂದು ನಡೆಯಲಿದೆ ಎಂದು ರಾಜ್ಯ ಒಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಾಬು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಒಬಿಸಿ ಮೋರ್ಚಾ ಅತ್ಯಂತ ಕ್ರಿಯಾಶೀಲವಾಗಿದೆ. ಇಡೀ ರಾಜ್ಯದಲ್ಲಿಯೇ ಸಂಚಲನ ಮೂಡಿಸಿದೆ. ಮೂರು ತಿಂಗಳಿಗೊಮ್ಮೆ ಕಾರ್ಯಕಾರಿಣಿ ಸಭೆಗಳು ರಾಜ್ಯಾದ್ಯಂತ ನಿರಂತರವಾಗಿ ನಡೆಯುತ್ತಾ ಬರುತ್ತಿದ್ದು, ಈ ಬಾರಿ ಶಿವಮೊಗ್ಗದಲ್ಲಿ ಆಯೋಜಿಸಿರುವುದು ವಿಶೇಷವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾರ್ಯಕಾರಿ ಸಭೆ ಉದ್ಘಾಟಿಸುವರು. ಸಚಿವ ಕೆ.ಎಸ್. ಈಶ್ವರಪ್ಪ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಜ.4ರಂದು ಸಂಜೆ ಪದಾಧಿಕಾರಿಗಳ ಸಭೆ ಇರುತ್ತದೆ. ಜ. 5 ರಂದು ಬೆಳಗ್ಗೆ10 ಗಂಟೆಗೆ ಕಾರ್ಯಕಾರಿಣಿ ಸಭೆ ಆರಂಭವಾಗುತ್ತದೆ. ಒಬಿಸಿ ಮೋರ್ಚಾ ಈ ಹಿಂದೆ ಕಾಂಗ್ರೆಸ್ ನವರ ಸ್ವತ್ತಾಗಿತ್ತು. ವೋಟ್ ಬ್ಯಾಂಕ್ ಗಾಗಿ ಅದನ್ನು ಅವರು ಬಳಸಿಕೊಳ್ಳುತ್ತಿದ್ದರು. ಆದರೆ, ನಿಜವಾಗಿಯೂ ಕಾಂಗ್ರೆಸಿಗರು ಒಬಿಸಿ ಸಮುದಾಯವನ್ನು ಜೀತದಾಳುಗಳಂತೆ ಬಳಸಿಕೊಂಡಿದ್ದಾರೆ. ಸುಮಾರು ಅನೇಕ ಸಮುದಾಯಗಳು ಇದರಲ್ಲಿ ಸೇರುತ್ತವೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಆ ಸಮುದಾಯಗಳಿಗೆ ತಲುಪಿಸುವುದೇ ನಮ್ಮ ಗುರಿಯಾಗಿದೆ ಎಂದರು.
ಜಿಲ್ಲಾ ಅಧ್ಯಕ್ಷ ಸಿ.ಹೆಚ್. ಮಾಲತೇಶ್ ಮಾತನಾಡಿ, ಕಾರ್ಯಕಾರಿಣಿ ಸಭೆಗೆ ಎಲ್ಲಾ ರೀತಿಯ ಸಿದ್ಧತೆ ನಡೆದಿದೆ. ಇದಕ್ಕಾಗಿ ಸಮಿತಿಗಳನ್ನು ರಚಿಸಲಾಗಿದೆ. ವಸತಿ, ಊಟದ ಸಿದ್ಧತೆಯೂ ಮಾಡಿಕೊಳ್ಳಲಾಗಿದೆ. ಪಕ್ಷದ ೯ ಕ್ಕೂ ಹೆಚ್ಚು ಮಂಡಲಗಳ ಅಧ್ಯಕ್ಷರು ಭಾಗವಹಿಸಲಿದ್ದಾರೆ. ಇಲ್ಲಿ ಅನೇಕ ನಿರ್ಣಯಗಳ ತೆಗೆದುಕೊಳ್ಳಲಾಗುವುದು. ಇದೊಂದು ಐತಿಹಾಸಿಕ ಕಾರ್ಯಕಾರಿಣಿ ಸಭೆಯಾಗಲಿದೆ ಎಂದರು.
ಒಬಿಸಿ ಮೋರ್ಚಾ ನಗರಾಧ್ಯಕ್ಷ ಜಗದೀಶ್, ಪ್ರಮುಖರಾದ ಕೆ.ವಿ. ಅಣ್ಣಪ್ಪ, ಹಿರಣ್ಣಯ್ಯ, ಪ್ರಭಾಕರ್, ಕುಮಾರ್ ಮುಂತಾದವರಿದ್ದರು.

ಕಾಂಗ್ರೆಸಿಗರು ಒಬಿಸಿ ಸಮುದಾಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಿಜೆಪಿ ಮೇಲೆ ವಿನಾಕಾರಣ ಗೂಬೆ ಕೂರಿಸುತ್ತಿತ್ತು. ಈಗ ಬಿಜೆಪಿ ಶಕ್ತಿಕೇಂದ್ರ ಮತ್ತು ಬೂತ್ ಮಟ್ಟದಿಂದ ಒಬಿಸಿಯನ್ನು ಗಟ್ಟಿಗೊಳಿಸಲಾಗುತ್ತಿದೆ. ಸಚಿವ ಕೆ.ಎಸ್. ಈಶ್ವರಪ್ಪ ಇದಕ್ಕೆ ಸಂಚಲನ ಮೂಡಿಸಿದ್ದಾರೆ. ಅವರ ನೇತೃತ್ವದಲ್ಲಿ ರಾಜ್ಯದ ವಿವಿಧ ಕಡೆ ಸಮಾವೇಶ, ಸಭೆ ಕೂಡ ನಡೆಯುತ್ತಿದೆ

-ಅಶೋಕ್ ಮೂರ್ತಿ, ರಾಜ್ಯ ಉಪಾಧ್ಯಕ್ಷ

Ad Widget

Related posts

ಶಿವಮೊಗ್ಗದಲ್ಲಿ 13 ಸಾವು, 1016 ಮಂದಿ ಗುಣಮುಖ

Malenadu Mirror Desk

ಅವ್ಯವಸ್ಥೆ,ಅಕ್ರಮ ಖಂಡಿಸಿ ಕುವೆಂಪು ವಿವಿಗೆ ಎನ್.ಎಸ್.ಯು.ಐ ಮುತ್ತಿಗೆ

Malenadu Mirror Desk

ಹನಸವಾಡಿ ವಸತಿ ಶಾಲೆ 70 ಮಕ್ಕಳು ಅಸ್ವಸ್ಥ ಯೋಗಥಾನ್‌ನಲ್ಲಿ ನೀಡಿದ್ದ ಎಳ್ಳು-ಬೆಲ್ಲವೇ ಮಕ್ಕಳ ಆರೋಗ್ಯಕ್ಕೆ ಮುಳುವಾಯಿತೆ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.