Malenadu Mitra
ಭಧ್ರಾವತಿ ರಾಜ್ಯ

ಭದ್ರಾವತಿ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷರಾಗಿ ಎಂ.ರಮೇಶ್ ಶಂಕರಘಟ್ಟ ನೇಮಕ

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನ ಭದ್ರಾವತಿ ಗ್ರಾಮಾಂತರ ಹಿಂದುಳಿದ ವರ್ಗಗಳ ಘಟಕ ಅಧ್ಯಕ್ಷರನ್ನಾಗಿ ಎಂ.ರಮೇಶ್ ಶಂಕರಘಟ್ಟ ಇವರನ್ನು ನೇಮಿಸಲಾಗಿದೆ.
ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಜಿಲ್ಲಾ ಹಿಂದುಳಿದ ವರ್ಗಗಳ ಘಟಕವು ಏರ್ಪಡಿಸಿದ್ದ ಜಿಲ್ಲಾ ಪದಾಧಿಕಾರಿಗಳ ಹಾಗೂ ವಿವಿದ ತಾಲ್ಲೂಕುಗಳ ಘಟಕ ಅಧ್ಯಕ್ಷರುಗಳಿಗೆ ನೇಮಿಸಿ ಹೊರಡಿಸಿದ ಆದೇಶ ಪತ್ರವನ್ನು ವಿತರಿಸಿದ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಹಿಂದುಳಿದ ಘಟಕ ಜಿಲ್ಲಾಧ್ಯಕ್ಷರಾದ ರಮೇಶ್ ಇಕ್ಕೇರಿಯವರು ನೇಮಕಾತಿ ಪತ್ರವನ್ನು ನೀಡಿದರು.

ರಮೇಶ್ ಈ ಹಿಂದೆ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದರು. ಅಲ್ಲದೇ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿಯನ್ನು ಪಡೆದುಕೊಂಡಿದ್ದರಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷಾಧಿಕಾರಿಯಾಗಿಯೂ ಕೂಡ ಸೇವೆ ಸಲ್ಲಿಸಿದ್ದರು. ಇವರು ಭದ್ರಾವತಿ ತಾಲ್ಲೂಕ್  ಶಂಕರಘಟ್ಟದಲ್ಲಿ ದೀನಬಂಧು ಸೇವಾ ಟ್ರಸ್ಟ್ ಅಧ್ಯಕ್ಷರಾಗಿ ಸಮಾಜಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.



ಭದ್ರಾವತಿಯ ಮಾನ್ಯ ಶಾಸಕರಾದ ಬಿ.ಕೆ.ಸಂಗಮೇಶ್ ಇವರ ಸೂಚನೆಯ ಮೇರೆಗೆ ಈ ಜವಾಬ್ದಾರಿಯನ್ನು ಒಪ್ಪಿಕೊಂಡಿರುತ್ತೇನೆ. ಈಗಾಗಲೇ ಇವರ ನೇತೃತ್ವದಲ್ಲಿ ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಸದೃಢವಾಗಿದೆ. ಶಾಸಕರ ಮಾರ್ಗದರ್ಶನಲ್ಲಿ ಪಕ್ಷದಿಂದ ವಿಮುಖರಾಗಿರುವ ಹಿಂದುಳಿದ ವರ್ಗಗಳ ಜನರನ್ನು ನಮ್ಮ ಪಕ್ಷದ ಮಖ್ಯವಾಹಿನಿಗೆ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ.

– ಎಂ.ರಮೇಶ್ ಶಂಕರಘಟ್ಟ

Ad Widget

Related posts

ಲಾಕ್‍ಡೌನ್ ಕಠಿಣ,ಎಣ್ಣೆಗೆ ಅವಕಾಶ !

Malenadu Mirror Desk

ಶಿವಮೊಗ್ಗ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಗೋಪಾಲ್ ಯಡಗೆರೆ ಅಧ್ಯಕ್ಷ, ಸಂತೋಷ್ ಪ್ರಧಾನ ಕಾರ್ಯದರ್ಶಿ

Malenadu Mirror Desk

ಕೋಲಾಹಲಕ್ಕೆ ಬಿಜೆಪಿಯೇ ನೇರ ಕಾರಣ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.