ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅವರ ವರ್ಗಾವಣೆಯಾಗಿದ್ದು, ಅವರ ಜಾಗಕ್ಕೆ ಕೋಲಾರ ಡಿಸಿಯಾಗಿದ್ದ ಡಾ.ಸೆಲ್ವಮಣಿ ಆರ್. ಅವರನ್ನು ಸರಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಕಳೆದ ಮೂರು ವರ್ಷಗಳಿಂದ ಶಿವಮೊಗ್ಗ ಜಿಲ್ಲಾಧಿಕಾರಿಯಾಗಿದ್ದ ಶಿವಕುಮಾರ್ ಅವರ ವರ್ಗಾವಣೆ ಆಗಲಿದೆ ಎಂಬ ವದಂತಿ ಇತ್ತಾದರೂ ಹೀಗೆ ದಿಢೀರ್ ವರ್ಗಾವಣೆಯಾಗಲಿದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಯಾರೊಂದಿಗೂ ಸಲಿಗೆಯಿಂದಲೂ ನಡೆದುಕೊಳ್ಳದ ಮತ್ತು ಖಾರವಾಗಿಯೂ ವರ್ತಿಸದೆ ಕೆಲಸ ನಿರ್ವಹಿಸುತ್ತಿದ್ದ ಶಿವಕುಮಾರ್ ಅವರಿಗೆ ಂiiವುದೇ ಸ್ಥಳ ತೋರಿಸಿಲ್ಲ.
ನೂತನ ಡಿಸಿ ಸೆಲ್ವಮಣಿ ಅವರು ಬುಧವಾರ ಬೆಳಗ್ಗೆಯೇ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಸಂದರ್ಭ ಹೆಚ್ಚುವರಿ ಜಿಲ್ಲಾಧಿಕಾರಿ ನಾಗೇಂದ್ರ ಹೊನ್ನಳ್ಳಿ ಮತ್ತಿತರರು ಹಾಜರಿದ್ದರು.
previous post