Malenadu Mitra
ರಾಜ್ಯಶಿವಮೊಗ್ಗ

ಭಾರತೀಯ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿದವರು ಸ್ವಾಮಿ ವಿವೇಕಾನಂದ: ಪ್ರೊ.ಬಿ.ಪಿ.ವೀರಭದ್ರಪ್ಪ

ಕುವೆಂಪು ವಿವಿಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ

ಶಂಕರಘಟ್ಟ, ಜ. 12: ಭಾರತೀಯ ಸಂಸ್ಕ್ರತಿಯಲ್ಲಿ‌ ಹತ್ತು‌ ಹಲವು ಹುಳುಕುಗಳಿದ್ದರೂ, ಭಾರತೀಯ ಪರಂಪರೆಯ ಅತ್ಯುತ್ತಮ ಅಂಶಗಳನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಅಭಿಪ್ರಾಯಪಟ್ಟರು.

ಕೋವಿಡ್ ಮಾರ್ಗದರ್ಶಿ ‌ಸೂಚನೆಗಳು ಜಾರಿಯಲ್ಲಿರುವುದರಿಂದ ಬುಧವಾರ ಬೆಳಿಗ್ಗೆ ವಿಶ್ವವಿದ್ಯಾಲಯದಲ್ಲಿ ಸರಳವಾಗಿ ಆಯೋಜಿಸಲಾಗಿದ್ದ ಸ್ವಾಮಿ ವಿವೇಕಾನಂದ ಜಯಂತಿ‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದೂ ಧರ್ಮದ ಸಹಿಷ್ಣುತೆಯ ಗುಣ, ಮನುಷ್ಯಪರ ನಿಲುವುಗಳನ್ನ ಜಗತ್ತಿಗೆ ತಿಳಿಸಿಕೊಡುವುದರ ಜೊತೆಗೆ,‌ ಹಿಂದೂ ಧರ್ಮ ಹೇಗೆ ಸರ್ವಧರ್ಮಗಳ ತಳಹದಿಯಾಗಬಲ್ಲದು ಎಂದು ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರು ಪ್ರತಿಪಾದಿಸಿದ್ದರು‌ ಎಂದರು.

ಕುಲಸಚಿವರಾದ ಜಿ. ಅನುರಾಧ ಅವರು ಮಾತನಾಡಿ, ಸ್ವಾಮಿ ವಿವೇಕಾನಂದ ಜನ್ಮದಿನವನ್ನು ರಾಷ್ಟ್ರೀಯ ಯುವದಿನವೆಂದು ಆಚರಿಸಲಾಗುತ್ತಿದೆ, ಆದರೆ ಇತ್ತೀಚಿನ ದಿನಗಳಲ್ಲಿ ಯುವಜನತೆ ದುಷ್ಚಟಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ ಬೆಳವಣಿಗೆಯಾಗಿದೆ. ಯುವ ಜನತೆ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ರೂಢಿಸಿಕೊಂಡು ದೇಶದ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕೆಂದು ಕರೆ ನೀಡಿದರು.

ಹಣಕಾಸು ಅಧಿಕಾರಿ ಎಸ್. ರಾಮಕೃಷ್ಣ, ಉಪಕುಲಸಚಿವ ಡಾ.ಶ್ರೀಶೈಲ, ಪ್ರಾಧ್ಯಾಪಕರು, ಅಧಿಕಾರಿ ವರ್ಗದವರು, ಅಧ್ಯಾಪಕೇತರ ನೌಕರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Ad Widget

Related posts

ಶಿವಮೊಗ್ಗ ಜಿಲ್ಲೆಯಲ್ಲಿ ದ್ವಿಶತಕ ದಾಟಿದ ಕೊರೊನ: ಹಾಟ್‌ಸ್ಪಾಟ್ ಆಯಿತೇ ಸ್ಮಾರ್ಟ್ ಸಿಟಿ

Malenadu Mirror Desk

ಮಂಡ್ಲಿ ಖಬರಸ್ಥಾನ್ ಜಾಗ ಗೊಂದಲ ಬೇಡ: ಜಾಮಿಯಾ ಮಸೀದಿ ಸವಾಯಿ ಪಾಳ್ಯ ಸಮಿತಿ

Malenadu Mirror Desk

ಶತಕ ದಾಟಿದ ಪೆಟ್ರೋಲ್ ಬೆಲೆ: ಸಿಎಂ ತವರಿನಲ್ಲಿ ಅಣಕು ಸಂಭ್ರಮಾಚರಣೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.