ಶಿವಮೊಗ್ಗ ನಗರ ಸಮೀಪದ ಸೂಳೆಬೈಲಿನಲ್ಲಿ ತಡರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರು ಯುವಕರನ್ನು ಕೊಲೆ ಮಾಡಲಾಗಿದೆ.
ಸೂಳೆಬೈಲಿನ ಸಲೀಂ(22) ಮತ್ತು ಆತನ ಸ್ನೇಹಿತ ಅಬ್ದುಲ್ (23) ಕೊಲೆಯಾದವರಾಗಿದ್ದಾರೆ. ಟಿಪ್ಪು ಎಂಬಾತನ ಮನೆಯಲ್ಲಿ ನಡೆದಿದ್ದ ಗಲಾಟೆಯನ್ನು ಮೃತರು ಬಿಡಿಸಿಬಂದಿದ್ದರು. ನಮ್ಮ ಮನೆವಿಚಾರಕ್ಕೆ ಅವರೇಕೆ ಬರಬೇಕು ಎಂದು ಕೆರಳಿದ ಟಿಪ್ಪು ಮತ್ತವನ ಸಂಗಡಿಗರು ಸಲೀಂ ಮತ್ತು ಅಬ್ದುಲ್ ನ ಮೇಲೆ ದಾಳಿ ನಡೆಸಿ ಕೊಲೆ ಮಾಡಿದ್ದಾರೆನ್ನಲಾಗಿದೆ
ಘಟನೆ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೋಲಿಸರು ದಾದಾಪೀರ್ ಮತ್ತು ಅಲ್ಲಾಭಕ್ಷಿ ಎಂಬುವರನ್ನು ದಸ್ತಗಿರಿ ಮಾಡಿದ್ದು ಉಳಿದವರ ಶೋಧಕಾರ್ಯ ಮುಂದುವರಿಸಿದ್ದಾರೆ