ಕೆಳದಿ ರಾಣಿ ಚೆನ್ನಮ್ಮ ಉತ್ಸವಕ್ಕೆ ಶಾಸಕ. ಹರತಾಳು ಹಾಲಪ್ಪ ಅವರು ಭಾನುವಾರ ಚಾಲನೆ ನೀಡಿದರು
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಕೆಳದಿಯಲ್ಲಿರುವ ರಾಣಿ ಚೆನ್ನಮ್ಮ ನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಮಾತನಾಡಿದ ಅವರು, ಕೆಳದಿ ಸಂಸ್ಥಾನದ ಆಳ್ವಿಕೆ ಕಾಲ, ಮತ್ತು ಅಂದಿನ ಇತಿಹಾಸ, ಸಂಸ್ಕೃತಿಗಳ ಪರಿಚಯ ಇಂದಿನ ಪೀಳಿಗೆಗೆ ಆಗಬೇಕು. ಈ ನಿಟ್ಟಿನಲ್ಲಿ ಕೆಳದಿ ಉತ್ಸವ ಈನಾಡಿನ ಉತ್ವವವಾಗಬೇಕು ಎಂದರು.
. ಕೆಳದಿ ರಾಜಗುರು ಹಿರೇಮಠದ ಶ್ರೀಗಳು, ಮುರುಘಾಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಚಿಂತಕ ಹಿರೇಮಗಳೂರು ಕಣ್ಣನ್,.ಡಿ ಮೇಘರಾಜ್, ರಮೇಶ್ ಹಾರೆಗೊಪ್ಪ, ದೇವೇಂದ್ರಪ್ಪ ಯಲಕುಂದ್ಲಿ, ಲೋಕನಾಥ್ ಬಿಳಿಸಿರಿ ಉಪವಿಭಾಗಾಧಿಕಾರಿ, ತಹಸೀಲ್ದಾರ್ , ಚುನಾಯಿತ ಪ್ರತಿನಿಧಿಗಳು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.