Malenadu Mitra
ರಾಜ್ಯ ಶಿವಮೊಗ್ಗ

ನಗರ ಸರ್ವತೋಮುಖ ಅಭಿವೃದ್ಧಿಯಾಗಬೇಕು , ನಾಗರೀಕ ಹಿತರಕ್ಷಣಾ ಸಮಿತಿಗಳ ಒಕ್ಕೂಟ ಆಗ್ರಹ

ಶಿವಮೊಗ್ಗದ ಸರ್ಮತೋಮುಖ ಬೆಳವಣಿಗೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಾಗರೀಕ ಹಿತರಕ್ಷಣಾ ವೇದಿಕೆಯಿಂದ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಅವರಿಗೆ ಮನವಿ ನಾಗರೀಕ ಹಿತರಕ್ಷಣಾ ಸಮಿತಿಗಳ ಒಕ್ಕೂಟದಿಂದ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ನಗರದ ಹಲವಾರು ಸಮಸ್ಯೆಗಳಲ್ಲಿ ಅವುಗಳಲ್ಲಿ ಕೆಲವನ್ನು ತಮ್ಮ ಗಮನಕ್ಕೆ ತರುವುದಾಗಿ ಹೇಳಿದ ಮನವಿದಾರರು, ಪಾಲಿಕೆಯ ಕಂದಾಯ ಇಲಾಖೆಯಲ್ಲಿ ತೆರಿಗೆದಾ ರರಿಗೆ ತೀವ್ರ ಸುಲಿಗೆ ಮತ್ತು ಅಸಮರ್ಪಕ ಸೇವೆ ಉಂಟಾಗುತ್ತಿದ್ದು, ಸರಿಪಡಿಸಬೇಕು. ಕಂದಾಯ ವಿಭಾಗದಲ್ಲಿ ಕಳೆದ ನಾಲ್ಕು ಐದು ವರ್ಷಗಳಿಂದ ಅಂತಹ ತಪ್ಪುಗಳ ಬಗ್ಗೆ ಸಮಗ್ರತನಿಖೆ ನಡೆಸಿ ಸಮಗ್ರ ತನಿಖೆ ನಡೆಸಿ ಇದಕ್ಕೆ ಕಾರಣರಾಗಿರುವ ನೌಕರರು/ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ನಗರದಲ್ಲಿ ದಿನದಿಂದ ದಿನಕ್ಕೆ ಪಾರ್ಕಿಂಗ್ ಸಮಸ್ಯೆ ಉಲ್ಬಣವಾಗುತ್ತಿದೆ. ಇದನ್ನು ಪರಿಹರಿಸಲು ವಾಣಿಜ್ಯ ಕಟ್ಟಡಗಳು, ನರ್ಸಿಂಗ್ ಹೋಂಗಳು ಪಾರ್ಕಿಂಗ್‌ಗೆ ಬಿಡಬೇಕಾದ ಜಾಗಗಳನ್ನು ಅನ್ಯ ಉದ್ದೇಶಗಳಿಗೆ ಬಳಸುತ್ತಿzರೆ. ಇದನ್ನು ಸರಿಪಡಿಸಲು ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಬೇಕು. ಪಾರ್ಕಿಂಗ್ ಮತ್ತು ರೋಡ್ ಮಾರ್ಜಿನ್ ಬಿಡದೆ ಹೊಸದಾಗಿ ಕಟ್ಟುತ್ತಿರುವ ಕಟ್ಟಡಗಳ ಮೇಲೆ ಕಠಿಣಕ್ರಮ ಕೈಗೊಳ್ಳಬೇಕು ಎಂದರು.

ಬೀದಿಬದಿ ವ್ಯಾಪಾರಿಗಳ ಸಂಖ್ಯೆ ದಿನದಿಂದ ದಿನಕ್ಕೆ ನಗರದಲ್ಲಿ ನಗರದಲ್ಲಿ ವಿಪರೀತವಾ ಪರೀತವಾಗುತ್ತಿದೆ. ಈ ಬಗ್ಗೆ ಇರುವ ನಿಯಮಗಳ ಅನುಷ್ಠಾನ ಸಮರ್ಪಕವಾಗಿ ಆಗುತ್ತಿಲ್ಲ. ನಗರ ಸ್ಮಾರ್ಟ್ ಸಿಟಿ ಆದರೂ ಬೀದಿಬದಿ ವ್ಯಾಪಾರಿಗಳಿಂದ ’ಸ್ಮಾರ್ಟ್ ಸಿಟಿ’ಗೆ ಅರ್ಥವೇ ಇಲ್ಲ ಎನ್ನುವ ರೀತಿಯಲ್ಲಿ ಬೀದಿಬದಿ ವ್ಯಾಪಾರಿಗಳಿಂದ ಆಗುತ್ತಿರುವ ಸಮಸ್ಯೆ ಬಗೆಹರಿಸಲು ಸಮಗ್ರ ನೀತಿಯೊಂದನ್ನು ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.
ತೆರಿಗೆದಾರರ ಹಣದಲ್ಲಿ ನಿರ್ವಹಿ ನಗರದ ಅಭಿವೃದ್ದಿಗೆ ಕೈಗೊಳ್ಳುವ ಕಾಮಗಾರಿಗಳ ಗುಣಮಟ್ಟ ಉತ್ತಮ ಪಡಿಸುವ ಅಗತ್ಯ ತುಂಬಾ ಇದೆ. ಕಳಪೆ ಕಾಮಗಾರಿಗಳನ್ನು ನಿಯಂತ್ರಿಸಲು ಗುಣಮಟ್ಟದ ಕಾಮಗಾರಿ ಅತ್ಯಂತ ಅಗತ್ಯವಾಗಿದೆ. ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದಲ್ಲಿಮೂಲಭೂತ ಸೌಕರ್ಯ ಒದಗಿಸಬೇಕು. ನಗರದ ವಿವಿಧೆಡೆ ಸ್ಮಾರ್ಟ್ ಸಿಟಿ ಯಿಂದ ಶೌಚಾಲಯಗಳು ನಿರ್ಮಾ ಣವಾಗಿದ್ದರೂ ಅವುಗಳ ಉಪಯೋಗ ಆಗುತ್ತಿಲ್ಲ. ಅವುಗಳ ಬಳಕೆ ಯಾಗಬೇಕು ಎಂದು ಆಗ್ರ ಹಿಸಿದರು.

ಪಾಲಿಕೆಯ ವೆಬ್‌ಸೈಟಿನಲ್ಲಿ ಪಾಲಿಕೆ ಆಡಳಿತದ ಲ್ಬಲಾಗುವ ಬದಲಾವಣೆಗಳು ತಕ್ಷಣ ಅಳವಡಿಕೆ ಆಗುತ್ತಿಲ್ಲ. ತೆರಿಗೆದಾರರು ವೆಬ್ ಸೈಟ್ ಮೂಲಕ ದೂರು ನೀಡಲು ಇದರಲ್ಲಿ ಅವಕಾಶವೇ ಇಲ್ಲ. ಕೂಡಲೇ ಪಾಲಿಕೆಯ ವೆಬ್ ಸೈಟ್ ಅನ್ನು ಸಮರ್ಪ ಕವಾಗಿ ಬಳಕೆಗೆ ತರಬೇಕು. ಸ್ಮಾರ್ಟ್ ಸಿಟಿ ಆಗಿದ್ದರು ನಗರದ ಸ್ವಚ್ಛತೆ ಸಮರ್ಪಕವಾಗಿ ಬದಲಾವಣೆ ಆಗಿಲ್ಲ. ನಗರದಾದ್ಯಂತ ದಿನದಿಂದ ದಿನಕ್ಕೆ ಫ್ಲೆಕ್ಸ್‌ಗಳ ಹಾವಳಿ ತೀವ್ರ ವಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ನಾಗರೀಕ ಹಿತರಕ್ಷಣೆ ವೇದಿಕೆಯ ಡಾ. ಸತೀಶ್ ಕುಮಾರ್ ಶೆಟ್ಟಿ, ಕೆ.ವಿ. ವಸಂತ್ ಕುಮಾರ್, ಎಸ್.ಬಿ. ಅಶೋಕ್ ಕುಮಾರ್, ರವಿಕಿಶನ್ ಮತ್ತಿತರರಿದ್ದರು ಹಾಜರಿದ್ದರು.

Ad Widget

Related posts

ಸಿಗಂದೂರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ವಿಖ್ಯಾತಾನಂದ ಶ್ರೀಗಳು

Malenadu Mirror Desk

ಜನಮನ ಸೆಳೆದ ಶಿವಮೊಗ್ಗ ದಸರಾ, ಕೊರೊನ ಆತಂಕದ ನಡುವೆಯೂ ಜನಸ್ಪಂದನ

Malenadu Mirror Desk

ಫೆ. 12: ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ :ಸಂಸದ ರಾಘವೇಂದ್ರ ಹೇಳಿಕೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.